Himachal Pradesh Landslide: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮತ್ತೊಂದು ಭೂಕುಸಿತ..!
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆ ಆತಂಕವನ್ನು ಸೃಷ್ಟಿ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ ಈ ವಾರ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ಕಳೆದ ವಾರದಿಂದ ಭಾರೀ ಮಳೆಯಿಂದಾಗಿ ಸುಂದರವಾದ ಪರ್ವತಗಳ ತವರು ಮತ್ತು ಜನಪ್ರಿಯ ಪ್ರವಾಸಿ ತಾಣ ಜರ್ಜರಿತವಾಗಿದೆ.
ರಾಜ್ಯ ರಾಜಧಾನಿ ಶಿಮ್ಲಾದ ಸಮ್ಮರ್ ಹಿಲ್, ಕೃಷ್ಣಾ ನಗರ ಮತ್ತು ಫಾಗ್ಲಿಯಲ್ಲಿ ಭಾನುವಾರದಿಂದ ಹತ್ತಾರು ಮಂದಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಸಮ್ಮರ್ ಹಿಲ್‌ನಲ್ಲಿ ಇಂದು ಬೆಳಿಗ್ಗೆ ಮತ್ತೊಮ್ಮೆ ಭೂಕುಸಿತದ ವರದಿಯಾಗಿದೆ.
Helicopters of @hqwaciaf recommenced relief operations in Himachal Pradesh today in the wake of recent rains. Over 150 citizens were rescued from various affected areas.@CMOHimachal @SpokespersonMoD @DefenceMinIndia @IAF_MCC pic.twitter.com/03Cc0TDcdY
— PRO Defence Palam (@DefencePROPalam) August 15, 2023
ಸಮ್ಮರ್ ಹಿಲ್‌ನಲ್ಲಿನ ಅವಶೇಷಗಳಿಂದ 13, ಫಾಗ್ಲಿಯಿಂದ ಐದು ಮತ್ತು ಕೃಷ್ಣ ನಗರದಲ್ಲಿ ಎರಡು ಮೃತದೇಹಗಳನ್ನು ತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಕುಸಿದ ದೇವಾಲಯದ ಅವಶೇಷಗಳಲ್ಲಿ ಇನ್ನೂ ಹಲವರು ಸಮಾಧಿಯಾಗಿರುವ ಶಂಕೆ ಇದೆ.

ನಿನ್ನೆ ಸಂಜೆ ಶಿಮ್ಲಾದ ಹೃದಯ ಭಾಗದಲ್ಲಿರುವ ಕೃಷ್ಣ ನಗರದಲ್ಲಿ ಎಂಟು ಮನೆಗಳ ಸುತ್ತ ಭೂಕುಸಿತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಹಲವಾರು ಮನೆಗಳು ಖಾಲಿಯಾಗಿದ್ದವು ಎಂದು ತಿಳಿದು ಬಂದಿದೆ. ಸೋಲನ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಮೇಘಸ್ಫೋಟದಿಂದ ಏಳು ಜನರು ಸಾವನ್ನಪ್ಪಿದ್ದಾರೆ.
ತಗ್ಗು ಪ್ರದೇಶಗಳಿಂದ 800 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಮತ್ತು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಂಗ್ರಾ ಜಿಲ್ಲೆಯಲ್ಲಿ ಇಂದು ಮಳೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಸಾವಿನ ಸಂಖ್ಯೆ 60 ಆಗಿದೆ. 'ಮಳೆಯಿಂದ ಸಾಕಷ್ಟು ಹಾನಿಯಾಗಿದೆ, ಮರುಸ್ಥಾಪನೆಗೆ ಸಮಯ ಹಿಡಿಯುತ್ತದೆ, ಆದರೆ ಎಲ್ಲವನ್ನು ಸರಿ ಮಾಡಲಾಗುವುದು' ಎಂದು ಸಿಎಂ ಭರವಸೆ ನೀಡಿದರು.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಆಗಸ್ಟ್ 19 ರವರೆಗೆ ರಾಜ್ಯದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯವೂ ಅಲ್ಲಿಯವರೆಗೆ ಬೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎರಡು ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ - ಶಿಮ್ಲಾ ಮತ್ತು ಕಾಂಗ್ರಾದಲ್ಲಿ ತಲಾ ಒಂದು. ಅಲ್ಲದೆ ವಾಯುಪಡೆ, ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಕೂಡ ಶಿಮ್ಲಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದೆ.
ಭೂಕುಸಿತದಿಂದಾಗಿ ರಾಜ್ಯದಲ್ಲಿ ಕನಿಷ್ಠ 800 ರಸ್ತೆಗಳು ಮುಚ್ಚಿಹೋಗಿವೆ ಮತ್ತು ಈ ಮುಂಗಾರು ಋತುವಿನಲ್ಲಿ ರಾಜ್ಯವು ಸಾವಿರಾರು ಕೋಟಿ ಮೌಲ್ಯದ ನಷ್ಟವನ್ನು ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾನ್ಸೂನ್ ಋತುವಿನಲ್ಲಿ ಹತ್ತಾರು ಸಾವುಗಳಿಗೆ ಸಾಕ್ಷಿಯಾಗಿರುವ ಹಿಮಾಚಲ ಪ್ರದೇಶ ಮತ್ತು ನೆರೆಯ ಉತ್ತರಾಖಂಡ ಎರಡೂ ಹವಾಮಾನ ಮುನ್ಸೂಚನೆಯ ಪ್ರಕಾರ ಹೆಚ್ಚು ಮಳೆ ಬೀಳಲಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ನೆರವು ಕೋರಿದ್ದು, ಹಿಮಾಚಲ ಪ್ರದೇಶವನ್ನು ವಿಪತ್ತು ಪೀಡಿತ ರಾಜ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಬೇಕು ಎಂದು ಹೇಳಿದೆ.











Click it and Unblock the Notifications