ಮಹಿಳೆಯ ಗ್ಯಾಂಗ್ ರೇಪ್, ವಿಡಿಯೋ ಚಿತ್ರೀಕರಿಸಿ ಹಂಚಿಕೆ

Anantapur woman gang raped filmed and distributed to friends
ಅನಂತಪುರ, ಜೂನ್ 3: ನೆರೆಯ ಆಂಧ್ರಪ್ರದೇಶದಿಂದಲೂ ಅತ್ಯಾಚಾರ ಪ್ರಕರಣ ವರದಿಯಾಗಿದೆ. ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ನಿನ್ನೆ ಸೋಮವಾರ ಬಾಧಿತ ಮಹಿಳೆ ಪೊಲೀಸರಿಗೆ ದೂರು ನೀಡಿದಾಗ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಅನಂತಪುರ ಜಿಲ್ಲೆ ಪೆದ್ದವಡಗೂರು ಮಂಡಲದಲ್ಲಿ ಕದಿರಿಗುಟ್ಟಪಲ್ಲಿಯಲ್ಲಿ ಈ ಕುಕೃತ್ಯ ನಡೆದಿದೆ.

ಮಹಿಳೆಯನ್ನು ಬೆದರಿಸಿದ ಮೂವರು ಯುವಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಜತೆಗೆ, ಇಡೀ ಘಟನೆಯನ್ನು ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ, ಪರಿಚಿತರ ನಡುವೆ ವಿಡಿಯೋ ಹಂಚಿಕೊಂಡಿದ್ದಾರೆ.

ಕದಿರಿಗುಟ್ಟಪಲ್ಲಿ ಹಳ್ಳಿಯ ಮಹಿಳೆ ಮದುವೆಯಾಗದೆ ತನ್ನ ಪ್ರಿಯಕರನ ಜತೆ ಅಕ್ರಮ ಸಂಬಂದ ಹೊಂದಿದ್ದಳು. ಇದನ್ನು ಗಮನಿಸಿದ ಗ್ರಾಮದ ಮೂವರು ಯುವಕರು ಸದರಿ ಮಹಿಳೆ ಆಕೆಯ ಪ್ರಿಯಕರನ ಜತೆ ಇದ್ದಾಗ, ಇಬ್ಬರಿಗೂ ಬೆದರಿಕೆಯೊಡ್ಡಿದ್ದಾರೆ. ಆ ವೇಳೆ ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಮಯ ಸಾಧಿಸಿದ ಮೂವರೂ ಯುವಕರು ಆಕೆಯ ಮೇಲೆ ನಿರಂತರವಾಗಿ, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇಡೀ ಘಟನೆಯನ್ನು ವಿಡಿಯೋ ಚಿತ್ರೀಕರಿಸಿಕೊಂಡ ಯುವಕರು ವಿಷಯವನ್ನು ಬಹಿರಂಗಪಡಿಸಬಾರದು. ಇಲ್ಲವಾದಲ್ಲಿ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಲಾಗುವುದೆಂದು ಮಹಿಳೆಯನ್ನು ಬೆದರಿಸಿದ್ದಾರೆ.

ಈ ಮಧ್ಯೆ, ಆ ಯುವಕರು ಸಾಮೂಹಿಕ ಅತ್ಯಾಚಾರ ವಿಡಿಯೋವನ್ನು ತಮ್ಮ ಸ್ನೇಹಿತ ಮಧ್ಯೆ ಹರಿಯಬಿಟ್ಟಿದ್ದಾರೆ. ವಿಷಯ ಬಹಿರಂಗವಾಗುತ್ತಿದ್ದಂತೆ ಬಾಧಿತ ಮಹಿಳೆ ತನ್ನ ಪ್ರಿಯಕರನ ಜತೆಗೂಡಿ ಪೊಲೀಸ್ ಠಾಣೆಗೆ ಬಂದು ಪ್ರಕರಣವನ್ನು ವಿವರಿಸಿ, ದೂರು ನೀಡಿದ್ದಾರೆ.

ಮಹಿಳೆಯ ಅಹವಾಲನ್ನು ಸ್ವೀಕರಿಸಿದ ಪೊಲೀಸರು ಗ್ರಾಮದ ನಾಗರಾಜ, ಬಾಲಾಂಜನೇಯ, ನರಸಿಂಹ ಹಾಗೂ ಮತ್ತಿಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+