ಭಿಗಿ ಭದ್ರತೆ ನಡುವೆ ಎಂದಿನಂತೆ ಅಮರನಾಥ ಯಾತ್ರೆ ಆರಂಭ

ಜಮ್ಮು ಮತ್ತು ಕಾಶ್ಮೀರ, ಜುಲೈ 11: ಉಗ್ರರ ದಾಳಿ ಹಿನ್ನಲೆಯಲ್ಲಿ ಭಿಗಿ ಭದ್ರತೆ ನಡುವೆ ಜಮ್ಮುವಿನಿಂದ ಅಮರನಾಥ ಯಾತ್ರೆ ಇಂದು ಮತ್ತೆ ಆರಂಭವಾಗಲಿದೆ. "ವೇಳಾಪಟ್ಟಿಯಂತೆ ಅಮರನಾಥ ಯಾತ್ರೆ ಮುಂದುವರಿಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ವಿಭಾಗಿಯ ಕಮಾಂಡರ್ ಮಂದೀಪ್ ಭಂಡಾರಿ ಹೇಳಿದ್ದಾರೆ.

ಇನ್ನು ಅಮರನಾಥ ಯಾತ್ರೆಯಲ್ಲಿ ಮಡಿದವರ ಮೃತ ದೇಹಗಳನ್ನು ವಿಮಾನದ ಮೂಲಕ ದೆಹಲಿಗೆ ತರಲಾಗುವುದು. ಅಮರನಾಥದಿಂದ ಶ್ರೀನಗರಕ್ಕೆ ಶವಗಳನ್ನು ಕೊಂಡೊಯ್ದು ಅಲ್ಲಿಂದ ವಿಮಾನಗಳ ಮೂಲಕ ಅವು ದೆಹಲಿಗೆ ಬರಲಿವೆ ಎಂದು ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಹೇಳಿದ್ದಾರೆ.

Amarnath yatra to resume as normal today

ಇದಕ್ಕಾಗಿ ಗಡಿ ಭದ್ರತಾ ಪಡೆಯ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ. ಮೃತರು ಮತ್ತು ಗಾಯಗೊಂಡವರನ್ನು ಈ ವಿಮಾನ ದೆಹಲಿಗೆ ಕರೆ ತರಲಿದೆ.

ಗುಜರಾತ್ ನೋಂದಣಿಯ ಬಸ್ ಮೇಲೆ ಸೋಮವಾರ ಉಗ್ರರು ದಾಳಿ ನಡೆಸಿದ್ದರು. ಇದರಲ್ಲಿ 7 ಜನ ಸಾವನ್ನಪ್ಪಿ 32ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+