ಮಗು ದೇಹವನ್ನು ತಂದೆ ತನ್ನ ಬ್ಯಾಗ್‌ನಲ್ಲಿ ಹೊತ್ತೊಯ್ದಿದ್ದು ಏಕೆ?

ಮಧ್ಯಪ್ರದೇಶ: ಆರೋಗ್ಯ ಸೇವೆಯ ವಿಚಾರದಲ್ಲಿ ಉತ್ತರದ ರಾಜ್ಯಗಳು ಪದೇ ಪದೆ ಟೀಕೆಗೆ ಗುರಿಯಾಗುತ್ತವೆ. ಅದರಲ್ಲೂ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಉತ್ತರ ಭಾರತದ ರಾಜ್ಯಗಳು ಪದೇ ಪದೆ ವಿಫಲವಾಗಿವೆ ಎಂಬ ಗಂಭೀರ ಆರೋಪವಿದೆ. ಇಷ್ಟೆಲ್ಲದರ ಮಧ್ಯೆ ಮಧ್ಯಪ್ರದೇಶದಲ್ಲಿ ದಾರುಣ ಘಟನೆ ನಡೆದಿದೆ. ಶವ ಸಾಗಿಸುವ ವಾಹನ ಸಿಗದೆ ಮಗುವಿನ ದೇಹ ಬ್ಯಾಗ್‌ನಲ್ಲಿ ಸಾಗಿಸಿದ ಆರೋಪ ಕೇಳಿಬಂದಿದೆ.

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಈ ಘಟನೆ ನಡೆದಿದೆ. 2 ದಿನದ ಹಿಂದೆ ಜನಿಸಿದ್ದ ಮಗು ಅನಾರೋಗ್ಯದ ಕಾರಣ ಮೃತಪಟ್ಟಿದೆ. ಆದರೆ ಈ ಮಗುವನ್ನು ಸಾಗಿಸಲು ಮಧ್ಯಪ್ರದೇಶದ ಜಬಲ್‌ಪುರ ಸರ್ಕಾರಿ ಆಸ್ಪತ್ರೆ ವೈದ್ಯರು ವಾಹನ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹಸುಗೂಸಿನ ತಂದೆ, ತನ್ನ ಮಗುವಿನ ಮೃತದೇಹವನ್ನ ಬ್ಯಾಗ್‌ನಲ್ಲಿ ಹಾಕಿ ಬಸ್ ಮೂಲಕ ಪ್ರಯಾಣಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಘಟನೆಗೆ ಮಧ್ಯಪ್ರದೇಶ ಸರ್ಕಾರಿ ವೈದ್ಯರೇ ಕಾರಣ ಎಂಬ ಆರೋಪ ಕೂಡ ಕೇಳಿಬಂದಿದೆ. ಆದ್ರೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮಧ್ಯಪ್ರದೇಶ ವೈದ್ಯರು ಈ ಘಟನೆ ಅಲ್ಲಗಳೆದಿದ್ದಾರೆ.

Allegedly man carries dead son body

ಯಾವುದು ಸತ್ಯ? ಯಾವುದು ಸುಳ್ಳು?

ಜೂನ್ 15ರಂದು ಘಟನೆ ನಡೆದಿದ್ದು, ಇಡೀ ದೇಶದ ಗಮನ ಸೆಳೆಯುತ್ತಿದೆ. ಮಧ್ಯಪ್ರದೇಶ ರಾಜ್ಯದ ದಿಂಡೋರಿ ಜಿಲ್ಲೆ ಸಹಜ್‌ಪುರಿಯ ನಿವಾಸಿ ಸುನಿಲ್ ಧುರ್ವೆ, ಜಮ್ನಿ ಬಾಯಿ ದಂಪತಿಗೆ ಜೂನ್ 13 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ ಆ ಮಗುವಿಗೆ ತೀವ್ರ ಅನಾರೋಗ್ಯ ಕಾಡಿದ್ದ ಕಾರಣ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಈಗ ಮಗು ತಂದೆ ಮಾಡುತ್ತಿರುವ ಆರೋಪದ ಪ್ರಕಾರ, ಮಗು ಆಸ್ಪತ್ರೆಯಲ್ಲೇ ಮೃತಪಟ್ಟಿತ್ತು ಅಂತಾ ಹೇಳಲಾಗುತ್ತಿದೆ. ಆದರೆ ಮಗುವಿನ ಮೃತದೇಹ ಸಾಗಿಸಲು ವಾಹನ ನೀಡದ ಕಾರಣ, ಆ ಮಗುವಿನ ಮೃತದೇಹವನ್ನ ಬ್ಯಾಗ್‌ನಲ್ಲಿ ಹಾಕಿ ಬಸ್‌ನಲ್ಲಿ ಸಾಗಿಸಿದೆ ಅಂತಿದ್ದಾರೆ. ಆದರೆ ವೈದ್ಯರು ಹೇಳುತ್ತಿರುವ ಕಾರಣವೇ ಬೇರೆ.

ಬೇಡ ಅಂದ್ರೂ ಕರೆದುಕೊಂಡು ಹೋದರಾ?

ಮತ್ತೊಂದ್ಕಡೆ ಮಗು ಸಾವಿನ ಕುರಿತು ಗೊಂದಲ ಏರ್ಪಟ್ಟಿದೆ. ಅತ್ತ ಮಗು ಆಸ್ಪತ್ರೆಯಲ್ಲೇ ಮೃತಪಟ್ಟಿದೆ ಅಂತಾ ಮಗುವಿನ ಪೋಷಕರು ಆರೋಪ ಮಾಡುತ್ತಿದ್ದಾರೆ. ಈ ತಿಕ್ಕಾಟದಲ್ಲಿ ಮಧ್ಯಪ್ರದೇಶ ಆರೋಗ್ಯ ಅಧಿಕಾರಿಗಳು ಬೇರೆಯದ್ದೇ ಕಾರಣ ಹೇಳುತ್ತಿದ್ದಾರೆ. ಮಗುವಿಗೆ ಆರೋಗ್ಯ ಸರಿ ಇರಲಿಲ್ಲ, ಹೀಗಾಗಿ ಆಸ್ಪತ್ರೆಯಿಂದ ಕರೆದುಕೊಂಡು ಹೋಗಬೇಡಿ ಅಂತಾ ಪೋಷಕರಿಗೆ ಹೇಳಿದ್ದೆವು. ಆದರೆ ನಮ್ಮ ಮಾತನ್ನು ಕೇಳದೆ ಮಗುವನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋದರು, ಹೀಗಾಗಿ ಮಗು ಮೃತಪಟ್ಟಿದೆ ಅಂತಿದ್ದಾರೆ. ಅಲ್ಲದೆ ಮಗು ಆಸ್ಪತ್ರೆಯಿಂದ ಕರೆದುಕೊಂಡು ಹೋಗುವಾಗ ಜೀವಂತವಾಗಿ ಇತ್ತು ಅಂತಿದ್ದಾರೆ.

ಒಟ್ನಲ್ಲಿ ಮಧ್ಯಪ್ರದೇಶದ ಜಬಲ್‌ಪುರ ಘಟನೆ ವಿವಾದಕ್ಕೆ ಸಿಲುಕಿದೆ. ಅತ್ತ ತಪ್ಪು ನಮ್ಮದು ಅಲ್ಲ ಅಂತಾ ವೈದ್ಯರು ಹೇಳುತ್ತಿದ್ದಾರೆ. ಇತ್ತ ವೈದ್ಯರ ತಪ್ಪಿನಿಂದಲೇ ಘಟನೆ ನಡೆದಿದೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಮಧ್ಯಪ್ರದೇಶದ ಈ ಘಟನೆ ಈಗ ದೇಶದ ಗಮನ ಸೆಳೆದಿದೆ. ಹೀಗಾಗಿ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಬೇಕು ಅಂತಾ ಜನ ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+