Hindenburg Report: ಹಣ ಕಳೆದುಕೊಳ್ಳುವ ಭೀತಿಯಲ್ಲಿ ಹೂಡಿಕೆದಾರರು: ಹಿಂಡನ್ ಬರ್ಗ್ ವರದಿ ಹಿನ್ನೆಲೆ ಕಂಟಕ?
ಹಣ.. ಹಣ.. ಹಣ.. ಹೀಗೆ ಷೇರು ಮಾರುಕಟ್ಟೆಯ ಮೂಲ ಉದ್ದೇಶವೇ ಹಣ ಮಾಡುವುದು ಅಥವಾ ಲಾಭ ಗಳಿಸುವುದು. ಅದರಲ್ಲೂ ಭಾರತದ ಷೇರು ಮಾರುಕಟ್ಟೆ ಕಳೆದ 5 ವರ್ಷದಲ್ಲಿ ಹೂಡಿಕೆದಾರರಿಗೆ ಅಕ್ಷಯಪಾತ್ರೆ ರೀತಿಯಲ್ಲೇ ಲಾಭ ನೀಡಿದೆ. ಕೋಟಿ ಕೋಟಿ ಲಾಭವನ್ನೂ ಮಾಡಿಕೊಂಡಿದ್ದಾರೆ ಹೂಡಿಕೆದಾರರು. ಆದರೆ ಇದೀಗ 'ಹಿಂಡನ್ ಬರ್ಗ್' ವರದಿ ಕಾರಣಕ್ಕೆ ಭಾರತೀಯ ಷೇರುಪೇಟೆ ನಲುಗಿ ಹೋಗಿದ್ದು, ಹೂಡಿಕೆದಾರರು ಹಣ ಕಳೆದುಕೊಳ್ಳುವ ಆತಂಕ ಆವರಿಸಿದೆ.
'ಅದಾನಿ' ಗ್ರೂಪ್ಸ್ ವಿರುದ್ಧ 'ಹಿಂಡನ್ ಬರ್ಗ್' ಗಂಭೀರ ಆರೋಪ ಹೊರಿಸಿ, ವರದಿಯನ್ನ ರಿಲೀಸ್ ಮಾಡಿತ್ತು. 2022 ರಲ್ಲಿ ಈ ರೀತಿ ಮೊದಲ ಬಾರಿಗೆ 'ಅದಾನಿ' ಸಮೂಹ ಸಂಸ್ಥೆಗಳ ವಿರುದ್ಧ ಸ್ಫೋಟಕ ವರದಿ ಒಂದನ್ನ ಬಿಡುಗಡೆ ಮಾಡಿದ್ದ 'ಹಿಂಡನ್ ಬರ್ಗ್' ಸಂಸ್ಥೆ ಈಗ ಮತ್ತೊಂದು ಬಾಂಬ್ ಸಿಡಿಸಿದೆ. ಭಾನುವಾರ ಮತ್ತೊಂದು ವರದಿ ಬಿಡುಗಡೆ ಮಾಡಿರುವ ಈ 'ಹಿಂಡನ್ ಬರ್ಗ್' ಸಂಸ್ಥೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಅದ್ರಲ್ಲೂ ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರು ಈಗ ಕೋಟಿ ಕೋಟಿ ರೂಪಾಯಿ ನಷ್ಟದ ಭೀತಿಯಲ್ಲಿದ್ದಾರೆ.

ಜನರಿಗೆ ಹಣ ಕಳೆದುಕೊಳ್ಳುವ ಆತಂಕ?
ಅಷ್ಟಕ್ಕೂ 'ಹಿಂಡನ್ ಬರ್ಗ್ ರಿಸರ್ಚ್' ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಮೋಸ ಮಾಡಿರುವ ಆರೋಪ ಹೊರಿಸಿತ್ತು. ಹೀಗೆ 2022 ರಲ್ಲಿ ಮೊದಲನೇ ಬಾರಿಗೆ ಸ್ಫೋಟಕ ಆರೋಪ ಮಾಡಿದ್ದ 'ಹಿಂಡನ್ ಬರ್ಗ್ ರಿಸರ್ಚ್' ಮೊನ್ನೆ ಮೊನ್ನೆ ಮತ್ತೆ ಗಂಭೀರ ಆರೋಪ ಹೊರಿಸಿ, ಸೆಬಿ ಅಧ್ಯಕ್ಷರಾದ ಮಾಧವಿ ಪುರಿ ಬುಜ್ ಅವರ ವಿರುದ್ಧ ಕೂಡ ಈ ಬಗ್ಗೆ ಗಂಭೀರ ಆರೋಪ ಮಾಡಿತ್ತು.
'ಅದಾನಿ' ಸಮೂಹ ಸಂಸ್ಥೆಗಳ ಜೊತೆಯಲ್ಲಿ 'ಸೆಬಿ' ಅಧ್ಯಕ್ಷರಾದ ಮಾಧವಿ ಪುರಿ ಬುಜ್ ಅವರ ನಂಟು ಇದೆ ಎಂದು ಆರೋಪಿಸಲಾಗಿದ್ದು, ಇದೇ ವಿಚಾರ ಈಗ ಸಂಚಲನ ಸೃಷ್ಟಿ ಮಾಡಿದೆ. ಹೂಡಿಕೆದಾರರು ಈಗ ಹಣ ಕಳೆದುಕೊಂಡು ಪರದಾಡುವ ಸ್ಥಿತಿ ಕೂಡ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಷೇರು ಮಾರುಕಟ್ಟೆಯಲ್ಲಿ ಗೊಂದಲ ಶುರುವಾದ ಕಾರಣಕ್ಕೆ ಮಾರಟಗಾರರ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಪ ಮಾಡಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಸಂಚಲನ
'ಹಿಂಡನ್ ಬರ್ಗ್ ರಿಸರ್ಚ್' ವರದಿ ಹಿನ್ನೆಲೆ ನಿನ್ನೆ ಕೂಡ ಅದಾನಿ ಕಂಪನಿ ಷೇರುಗಳು ಭಾರಿ ಕುಸಿತ ಕಂಡಿದ್ದವು. ಆದರೆ ಮಧ್ಯಾಹ್ನದ ನಂತರ ಒಂದಷ್ಟು ಚೇತರಿಕೆ ಕಂಡಿದ್ದವು. ಇದೀಗ ಮತ್ತೆ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಕುಸಿತ ಕಾಣುವ ಭೀತಿ ಎದುರಾಗಿದೆ. ಹೀಗೆ ಕುಸಿತ ಕಾಣುವ ಆತಂಕದ ನಡುವೆ ಹೂಡಿಕೆದಾರರು ನರಳಾಡುತ್ತಿದ್ದಾರೆ ಎಂಬ ಆರೋಪವು ಕೂಡ ಕೇಳಿಬಂದಿದೆ. ಅಲ್ಲದೆ ಈ ಸುದ್ದಿ ಇದೀಗ ಷೇರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications