ಕಾಶ್ಮೀರ: ಶಂಕಿತ ಮಹಿಳಾ ಆತ್ಮಹತ್ಯಾ ಬಾಂಬರ್ ಬಂಧನ
ಕಾಶ್ಮೀರ, ಜನವರಿ 26: ಶಂಕಿತ ಮಹಿಳಾ ಆತ್ಮಹತ್ಯಾ ಬಾಂಬರ್ ಒಬ್ಬಾಕೆಯನ್ನು ಕಾಶ್ಮೀರ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಶಂಕಿತ ಆತ್ಮಹತ್ಯಾ ಬಾಂಬರ್ ಪುಣೆ ಮೂಲದವರು ಎನ್ನಲಾಗಿದ್ದು ಈ ಕುರಿತಂತೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಬಂಧಿತ ಆತ್ಮಹತ್ಯೆ ಬಾಂಬರ್ ಪುಣೆಯಿಂದ ಶ್ರೀನಗರಕ್ಕೆ ವಲಸೆ ಬಂದು ನೆಲೆಸಿದ್ದಾರೆ. ಹಲವು ದಿನಗಳಿಂದ ಇಲ್ಲಿ ವಾಸವಿದ್ದು ಪಾಕಿಸ್ತಾನದ ಉಗ್ರ ಸಂಘಟನೆ ಐಎಸ್ಐಎಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಮುನಿರ್ ಖಾನ್ ತಿಳಿಸಿದ್ದಾರೆ.

ಶಂಕಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.












Click it and Unblock the Notifications