Air India: ಹೈಜಾಕ್ ಅಲರ್ಟ್ ಬೆನ್ನಲ್ಲೇ ಮತ್ತೊಂದು ವಿಮಾನ ತುರ್ತು ಲ್ಯಾಂಡಿಂಗ್: ಜೈಪುರದಲ್ಲಿ ತೀವ್ರ ತಪಾಸಣೆ
ಜೈಪುರ: ಭಾರತದ ರಾಜಧಾನಿ ನವದೆಹಲಿಗೆ ಜರ್ಮನಿಯ ಫ್ರಾಂಕ್ಫರ್ಟ್ನಿಂದ ಬರುತ್ತಿದ್ದ ಏರ್ ಇಂಡಿಯಾ (Air India Flight) ವಿಮಾನವು ಇಂದು ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಹೈಜಾಕ್/ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಂತೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ವಿಮಾನ ಹೈಜಾಕ್ ಸಂದೇಶ ರವಾನಿಸಿದ್ದ ವಿಮಾನವು ಇಸ್ರೇಲ್ನಲ್ಲಿ ತುರ್ತು ಲ್ಯಾಂಡ್ ಆಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ವಿಮಾನ ಹೀಗೆ ತುರ್ತು ಲ್ಯಾಂಡಿಂಗ್ ಆದ ಘಟನೆ ನಡೆದಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಅಪಹರಣದಂತಹ ಘಟನೆಗಳನ್ನು ನಿಭಾಯಿಸಲು ರೀತಿಯಲ್ಲಿ, ಬಾಂಬ್ ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆ ವಿಮಾನ ಲ್ಯಾಂಡಿಂಗ್ಗೆ ಅತ್ಯುನ್ನತ ಮಟ್ಟದ ಪ್ರತಿಕ್ರಿಯೆಯನ್ನು ಅನುಸರಿಸಿದರು ಎಂದು ವರದಿ ಆಗಿವೆ.

ಫ್ಲೈಟ್ AI 2030 ಬೋಯಿಂಗ್ 787
ಫ್ಲೈಟ್ AI 2030 ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ರಾಜಸ್ಥಾನದ ನಗರದಲ್ಲಿ ಬುಧವಾರ ಬೆಳಗ್ಗೆ 9.45 ಕ್ಕೆ ಉದ್ದೇಶಿತ ಗಮ್ಯಸ್ಥಾನದಿಂದ 280 ಕಿ.ಮೀ ದೂರದ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಕೂಡಲೇ ಏರ್ ಪೊರ್ಟ್ ಅಧಿಕಾರಿಗಳು, ಪೊಲೀಸರು ವಿಮಾನವನ್ನು ಜಾಗರೂಕರಾಗಿ ಸಮೀಪಿಸಿ ಪರಿಶೀಲಿಸಿದರು. ನಂತರವೇ ಪ್ರಯಾಣಿಕರು ವಿಮಾನದಿಂದ ಕೆಳಗೆ ಇಳಿದರು.
ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಪ್ರಯಾಣಿಕರು, ಸಿಬ್ಬಂದಿಯನ್ನು ಏಣಿ ವ್ಯಾನ್ ಮೂಲಕ ಕೆಳಕ್ಕೆ ಇಳಿಸಲಾಯಿತು ಎಂದು ಹೇಳಿದರು.
ಗಮ್ಯಸ್ಥಾನ ತಲುಪಬೇಕಾದ ಪ್ರಯಾಣಿಕರಿಗೆ ಈ ತುರ್ತು ಲ್ಯಾಂಡಿಂಗ್ನಿಂದ ಅಡಚರಣೆ ಉಂಟಾಗಿತ್ತು. ಉಚಿತ ಮರು ವೇಳಾಪಟ್ಟಿ ಆಯ್ಕೆಗಳ ಮೂಲಕ ಕಾದು ಬೇರೊಂದು ವಿಮಾನಗಳ ಮೂಲಕ ಸಂಚರಿಸಲು ಅವಕಾಸ ನೀಡಲಾಗಿದೆ. ಜೊತೆಗೆ ಟಿಕೆಟ್ ರದ್ದತಿ ಮಾಡಿಕೊಂಡಲ್ಲಿ ಹಣದ ಮರುಪಾವತಿ ಮಾಡುವುದಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.


Click it and Unblock the Notifications
