Get Updates
Get notified of breaking news, exclusive insights, and must-see stories!

Dowry Doctor: 50 ಕೋಟಿ ವಧುದಕ್ಷಿಣೆ ಕೇಳಿದ ಏಮ್ಸ್ ವೈದ್ಯೆ- ಸಖತ್ ವೈರಲ್ ಆಯ್ತು ಪೋಸ್ಟ್- ಅಯ್ಯಯ್ಯೋ.. ವರನೇ...!

ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ, ಏಮ್ಸ್‌ನಲ್ಲಿ ವೈದ್ಯೆಯಾಗಿರುವ ಮಹಿಳೆ ತಮ್ಮ ಮದುವೆಗೆ ವಧುದಕ್ಷಿಣೆಯಾಗಿ 50 ಕೋಟಿ ರೂಪಾಯಿ ನೀಡುವಂತೆ ವರನಿಗೆ ಡಿಮ್ಯಾಂಡ್ ಮಾಡಿದ್ದಾರೆ. ಇದನ್ನು ಕೇಳಿ ಸೋಷಿಯಲ್ ಮೀಡಿಯಾ ಧಂಗಾಗಿ ಹೋಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಮೆಂಟ್‌ಗಳು ಹರಿದಾಡುತ್ತಿವೆ. ವೈದ್ಯರ ಬುದ್ಧಿವಂತಿಕೆಯನ್ನು ಜನರು ಪ್ರಶ್ನಿಸುತ್ತಿದ್ದಾರೆ. ಇಷ್ಟು ಹಣ ತೆಗೆದುಕೊಂಡು ವೈದ್ಯರು ಏನು ಮಾಡುತ್ತಾರೆ ಎಂದು ಕೆಲವರು ಕೇಳುತ್ತಿದ್ದಾರೆ. ಇಲ್ಲಿ ಕುತೂಹಲಕಾರಿ ಸಂಗತಿ ಅಂದರೆ ಹುಡುಗಿ ಸ್ವತಃ ವೈದ್ಯೆ. ಆಕೆಯ ಗಳಿಕೆ ಸಾಮಾನ್ಯ ಹುದ್ದೆಗಳಿಗಿಂತ ಹೆಚ್ಚಾಗಿಯೇ ಇರುತ್ತದೆ. ಅದಾಗ್ಯೂ ವೈದ್ಯೆ 50 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದನ್ನು ಕೇಳಿ ಜನ ಶಾಕ್ ಆಗಿದ್ದಾರೆ.

AIIMS doctor asked for dowry of 50 crores post went viral

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಡಾಕ್ಟರ್ ಫೀನಿಕ್ಸ್ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ಹೊಂದಿರುವ ಮಹಿಳಾ ಬಳಕೆದಾರರು ತಮ್ಮ ಸ್ನೇಹಿತೆ, ಏಮ್ಸ್‌ನ ಉನ್ನತ ಶ್ರೇಣಿಯ ಮೂತ್ರಶಾಸ್ತ್ರಜ್ಞರಿಂದ ವಧುದಕ್ಷಿಣೆಯಾಗಿ 50 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಪೋಸ್ಟ್ ಪ್ರಕಾರ, ಮದುವೆಯಾಗುವ ಹುಡುಗಿ ಹೈದರಾಬಾದ್‌ನಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಅನಸ್ತೇಶಿಯಾ ಸ್ಪೆಷಲಿಸ್ಟ್. ವೈದ್ಯ ವಧುವಿನ ಈ ಬೇಡಿಕೆಯಿಂದ ವರ ಕಂಗಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬೃಹತ್ ಮೊತ್ತವನ್ನು ಸಂಗ್ರಹಿಸಲು ಅವರ ಕುಟುಂಬ ಎಲ್ಲ ರೀತಿಯ ವ್ಯವಸ್ಥೆ ಕೂಡ ಮಾಡುತ್ತಿದೆಯಂತೆ.

ಹುಡುಗ ಮತ್ತು ಹುಡುಗಿ ಇಬ್ಬರೂ ತೆಲುಗು ಕುಟುಂಬದವರು. ತೆಲುಗು ಸಮುದಾಯದಲ್ಲಿ ವಧುದಕ್ಷಿಣೆ ಕಡ್ಡಾಯ ಎಂದು ಹುಡುಗಿಯ ಮನೆಯವರು ವಾದಿಸುತ್ತಾರೆ. ಹೀಗಾಗಿ ವಧುದಕ್ಷಿಣೆ ತೆಗೆದುಕೊಳ್ಳಬೇಕಾದಾಗ ಇಷ್ಟು ವಿದ್ಯಾಭ್ಯಾಸ, ಅರ್ಹತೆ, ರ್ಯಾಂಕ್ ಇದ್ದಾಗ ಡಿಮ್ಯಾಂಡ್ ಇಲ್ಲದೇ ಇದ್ದರೆ ಪ್ರಯೋಜನ ಏನು ಎಂದು ಪೋಸ್ಟ್ ಮಾಡಿರುವ ಮಹಿಳೆ ಬರೆದುಕೊಂಡಿದ್ದಾರೆ.

AIIMS doctor asked for dowry of 50 crores post went viral

X ನಲ್ಲಿ ಈ ಪೋಸ್ಟ್ ಅನ್ನು ಅಕ್ಟೋಬರ್ 28 ರಂದು ಬೆಳಿಗ್ಗೆ 11.45 ರ ಸುಮಾರಿಗೆ ಮಾಡಲಾಗಿದೆ. ಈ ಪೋಸ್ಟ್ ಅನ್ನು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವರದಕ್ಷಿಣೆಯಾಗಿ 50 ಕೋಟಿಯನ್ನು ನೀಡಲು, ಹುಡುಗನ ಪೋಷಕರು ತಮ್ಮ ನಿವೃತ್ತಿಯ ಹಣವನ್ನು ನೀಡಲು ನಿರ್ಧಾರಿಸಿದ್ದಾರೆ ಎನ್ನಲಾಗುತ್ತಿದೆ.

ತೆಲುಗು ಸಮುದಾಯದಲ್ಲಿ ಮದುವೆಯಾದರೆ ವಧುದಕ್ಷಿಣೆ ನೀಡಬೇಕಾಗುತ್ತದೆ ಎಂಬುದು ವಧು ಪೋಷಕರ ವಾದ. ಆದರೆ ಈ ನಿರ್ಧಾರ ಅವನ ಭವಿಷ್ಯವನ್ನು ಅಸುರಕ್ಷಿತವಾಗಿಸುತ್ತದೆ ಮಾತ್ರವಲ್ಲ, ಪೋಷಕರ ಇತರ ಮಕ್ಕಳಿಗೂ ಕಷ್ಟವಾಗುತ್ತದೆ. ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಇವುಗಳಲ್ಲಿ ವಿದ್ಯಾವಂತರು ವರದಕ್ಷಿಣೆ ಪದ್ಧತಿಯನ್ನು ಉತ್ತೇಜಿಸುವುದನ್ನು ಜನರು ಟೀಕಿಸಿದ್ದಾರೆ.

ಪೋಸ್ಟ್‌ಗೆ ಕಮೆಂಟ್ ಮಾಡಿದ ಜನರು ವರದಕ್ಷಿಣೆ ಕೇಳಿದ ವೈದ್ಯೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಜನ ವಧುವನ್ನು ದುರಾಸೆಯ ಮಹಿಳೆ ಎಂದೂ ಕರೆದಿದ್ದಾರೆ. ಇದೇ ವೇಳೆ ಕೆಲವರು ಈ ವಿಚಾರದಲ್ಲಿ ವಧು ಹಾಗೂ ಆಕೆಯ ಪೋಷಕರು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ವಧು ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕ ಪಡೆದು ಕೆಲಸ ಮಾಡುತ್ತಿದ್ದಾಳೆ ಎಂಬುದು ಪೋಷಕರ ವಾದ. ವರದಕ್ಷಿಣೆಯಿಂದ ಅವಳು ತನ್ನ ಜೀವನದಲ್ಲಿ ಚೆನ್ನಾಗಿ ಬದುಕಬಲ್ಲಳು ಮತ್ತು ತನ್ನದೇ ಆದ ಗುರುತನ್ನು ರಚಿಸಬಹುದು ಎನ್ನುವುದು ಪೋಷಕರ ಆಸೆ. ಆದರೆ ಇದನ್ನು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಬಳಕೆದಾರರು ಬರೆದಿದ್ದಾರೆ. ಜನರು ಹೇಗೆ ನಾಚಿಕೆಯಿಲ್ಲದೆ ಹಣ ಕೇಳುತ್ತಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಜನ ಕಾಮೆಂಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+