ಎಂಸಿಎ ಕೋರ್ಸ್ ಕುರಿತಂತೆ AICTE ಮಹತ್ವದ ಆದೇಶ

ನವದೆಹಲಿ, ಜುಲೈ 8: ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್(ಎಂಸಿಎ) ಕೋರ್ಸ್ ಕುರಿತಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ (ಎಐಸಿಟಿಇ) ಮಹತ್ವದ ನಿರ್ಧಾರ ಕೈಗೊಂಡಿದೆ.

ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್(ಎಂಸಿಎ) ಕೋರ್ಸ್ ಮೂರು ವರ್ಷಗಳ ಅವಧಿಯನ್ನು ಕಡಿತಗೊಳಿಸಲಾಗಿದೆ. ಇನ್ಮುಂದೆ ಎಂಸಿಎ ಎರಡು ವರ್ಷದ ಕೋರ್ಸ್ ಆಗಿರಲಿದೆ. ಎಐ ಸಿಟಿಇ ಟ್ವೀಟ್ ಆದೇಶವನ್ನು ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ) ಇದರ ಜೊತೆಗೆ 2020 -21ನೇ ಶೈಕ್ಷಣಿಕ ಸಾಲಿನಿಂದ ಈ ನಿಯಮ ಜಾರಿಗೆ ಬರಲಿದೆ ಎಂದಿದೆ. ಯುಜಿಸಿ ಕಳೆದ ವರ್ಷವೇ ಎಂಸಿಎ ಶೈಕ್ಷಣಿಕ ಅವಧಿ ಕಡಿತಗೊಳಿಸಿತ್ತು ಸೂಚಿಸಿತ್ತು. ಇದರನ್ವಯ ಬದಲಾವಣೆ ಮಾಡಲಾಗಿದೆ ಎಂದು ಎಐಸಿಟಿಇ ಹೇಳಿದೆ.

AICTE Reduces Duration of MCA Program From 3 Years to 2, Issues Notification

ಯುಜಿಸಿ 545ನೇ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರವಾದಂತೆ ಡಿಸೆಂಬರ್ 19, 2019ಕ್ಕೆ ಎಐಸಿಟಿಇಗೆ ಈ ಕುರಿತಂತೆ ನಿರ್ದೇಶನ ಸಿಕ್ಕಿದೆ. ಇತೀಚೆಗೆ ನಡೆಸ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಇದಲ್ಲದೆ, ಉನ್ನತ ಶಿಕ್ಷಣ ಪದವಿ ಪರೀಕ್ಷೆಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಯುಜಿಸಿ ಆದೇಶ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಪರೀಕ್ಷೆ ಒಂದು ಮಹತ್ವದ ವಿಷಯವಾಗಿದೆ ಎಂದು ಯುಜಿಸಿ ತಿಳಿಸಿದೆ.

ಎಲ್ಲಾ ವಿಶ್ವವಿದ್ಯಾಲಯದ ಕುಲಪತಿಗಳು ಕಾಲೇಜು ಪಾಂಶುಪಾಲರುಗಳಿಗೆ ಸುತ್ತೋಲೆ ಹೊರಡಿಸಿ ಈ ಆದೇಶ ಮಾಡಿರುವುದಲ್ಲದೆ, ರಾಜ್ಯ ಸರ್ಕಾರಕ್ಕೂ ಮಾಹಿತಿಯನ್ನು ರವಾನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+