AI ವೀಡಿಯೊಗಳಿಗಾಗಿ ಮುಖ ಬಾಡಿಗೆ: ನಿಮ್ಮ ಅನುಮತಿಗೆ ಸಿಗುತ್ತದೆ 14 ಲಕ್ಷ ರೂ.

ಮನೆ ಬಾಡಿಗೆ ಕೊಡುವುದು, ವಾಹನ ಬಾಡಿಗೆ ಕೊಡುವುದು, ಕೆಲವು ವಸ್ತುಗಳನ್ನು ಬಾಡಿಗೆ ಕೊಡುವುದು ಯಾಕೆ ಬಾಡಿಗೆ ತಾಯಂದಿರ ಬಗ್ಗೆಯೂ ಕೇಳಿರಬಹುದು. ಇವೆಲ್ಲವೂ ಹಣ ಗಳಿಸುವುದಕ್ಕೆ ಇರುವ ಮಾರ್ಗಗಳೇ. ಇದಕ್ಕೆ ಹೊಸ ಸೇರ್ಪಡೆ ಮುಖ ಬಾಡಿಗೆ. ಹೌದು ಕೇವಲ ಮುಖವನ್ನಷ್ಟೇ ಬಾಡಿಗೆ ನೀಡುವ ಅಥವಾ ಮುಖದ ಗುರುತನ್ನು ಮಾರಾಟ ಮಾಡುವ ಹೊಸ ಟ್ರೆಂಡ್‌ ಇದೀಗ ಶುರುವಾಗಿದೆ.

ಶುರುವಾಗಿದೆ ಹೊಸ ಟ್ರೆಂಡ್‌

ಕ್ಯಾಮರ ಮುಂದೆ ಯಾವುದೇ ರೀತಿಯ ಕೆಲಸ ಮಾಡದೆ ಜಾಹೀರಾತು, ವೆಬ್ ಸೀರೀಸ್‌ ಅಥವಾ ವಿಡಿಯೋ ಗೇಮ್‌ನಲ್ಲಿ ನಿಮ್ಮ ಮುಖ ಕಾಣಿಸಿಕೊಂಡರೆ ಹೇಗಿರುತ್ತದೆ? ಇಲ್ಲಿ ನೀವು ಏನೂ ಶ್ರಮ ಪಡಬೇಕಿಲ್ಲ ಆದರೆ ನಿಮ್ಮ ಮುಖಕ್ಕೆ ಹಣ ಸಿಗುತ್ತದೆ. ಹೌದು, ಈಗ ಪ್ರತಿಯೊಂದರಲ್ಲಿಯೂ AI ಬಳಕೆಯನ್ನು ನೋಡುತ್ತಿದ್ದೇವೆ. ವೆಬ್‌ ಸಿರೀಸ್‌ಗಳಲ್ಲಿಯೂ ಎಐನದ್ದೇ ಆಟ.

AI Face Licens Business One Can Earn 14 Lakh Rupees For Giving Face For AI Video Series Advertisement

ಇದೀಗ AI ಕ್ಯಾರೆಕ್ಟರ್‌ಗಳಿಗಾಗಿ ಮುಖವನ್ನು ಬಾಡಿಗೆ ಪಡೆಯಲಾಗುತ್ತಿದೆ. ಈ ಹೊಸ ಟ್ರೆಂಡ್‌ ಚೀನಾದಲ್ಲಿ ಶುರುವಾಗಿದೆ. ಇದು ಕೂಡಾ ಈಗ ಡಿಜಿಟಲ್ ವ್ಯವಹಾರದ ರೂಪವನ್ನು ಪಡೆಯುತ್ತಿದೆ. ಜನರು ತಮ್ಮ ಮುಖದ ಡಿಜಿಟಲ್ ಗುರುತು ಅಥವಾ ಹೋಲಿಕೆಯನ್ನು ಕಟೆಂಟ್‌ ಕ್ರಿಯೇಟರ್‌ಗಳಿಗೆ ನೀಡಬಹುದು. ಇದಕ್ಕಾಗಿ ಕೆಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳೂ ಬಂದಿವೆ. ಇದಕ್ಕೆ ಪ್ರತಿಯಾಗಿ, ಅವರಿಗೆ ನಿರ್ದಿಷ್ಟ ಮೊತ್ತದ ಹಣವನ್ನು ನೀಡಲಾಗ್ತದೆ. ಅಲ್ಲದೆ ತಮ್ಮ ಮುಖವನ್ನು ಯಾವ ರೀತಿಯ ಕಟೆಂಟ್‌ಗಳಿಗೆ ಬಳಸಬಹುದು ಎಂಬುದನ್ನು ಕೂಡಾ ನಿರ್ದಿಷ್ಟವಾಗು ಹೇಳಬಹುದು.

ಹೊಸ ಆದಾಯದ ಮೂಲ

AI ಸಹಾಯದಿಂದ ರಚಿಸಲಾದ ನಾಟಕಗಳು, ಜಾಹೀರಾತುಗಳು, ಗೇಮ್‌ಗಳು ಮತ್ತು ಇತರ ಡಿಜಿಟಲ್ ಯೋಜನೆಗಳಿಗಾಗಿ ಈಗ ಜನರ ಮುಖಗಳನ್ನು ಖರೀದಿಸಲಾಗುತ್ತಿದೆ. ಇದರರ್ಥ ಮುಂಬರುವ ಡಿಜಿಟಲ್ ಯುಗದಲ್ಲಿ, ಮುಖ ಅನ್ನುವುದು ವ್ಯಕ್ತಿಯನ್ನು ಗುರುತಿಸುವುದಕ್ಕೆ ಮಾತ್ರವಲ್ಲ ಹೊಸ ಆದಾಯದ ಮೂಲವಾಗಿಯೂ ಬದಲಾಗ್ತಾ ಇದೆ.

ಒಂದು ಮುಖದ ಬೆಲೆ 14 ಲಕ್ಷ ರೂ.

ಈ ಪ್ಲಾಟ್‌ಫಾರಂಗಳಲ್ಲಿ ನಿಮ್ಮ ಮುಖವನ್ನು ಬಳಸುವುದಕ್ಕೆ 50 ಯುವಾನ್‌ನಿಂದ 99,999 ಯುವಾನ್ ಅಥವಾ ಸರಿಸುಮಾರು 1.4 ಮಿಲಿಯನ್ ರೂಪಾಯಿಗಳವರೆಗೆ ಹಣ ಪಡೆಯಬಹುದು. ಇದರರ್ಥ ಇನ್ನು ಮುಂದೆ ಒಬ್ಬ ವ್ಯಕ್ತಿಯ ಮುಖವೂ ಕೂಡಾ ಡಿಜಿಟಲ್ ಆಸ್ತಿಯೇ. ಇಲ್ಲಿ ತಮ್ಮ ಮುಖದ ಗುರತನ್ನು ಮಾರುವಾಗ ಅಥವಾ ಬಾಡಿಗೆಗೆ ನೀಡುವಾಗ ಆ ಗುರತನ್ನು ಎಷ್ಟು ಸಮಯದವರೆಗೆ ಬಳಸಬೇಕು, ಅದು ಯಾವ ರೀತಿಯ ಕಟೆಂಟ್‌ಗಳಲ್ಲಿ ಕಾಣಿಸಿಕೊಳ್ಳಬೇಕು ಮತ್ತು ಯಾವ ಸಂದರ್ಭಗಳಲ್ಲಿ ಅದನ್ನು ಬಳಸಬಾರದು ಎಂಬುದನ್ನು ಸ್ವತಃ ನಿರ್ಧರಿಸಬಹುದು.

ಮೂರು ದಿನಗಳಲ್ಲಿ 35 ಸಾವಿರ ರೂಪಾಯಿ ಗಳಿಕೆ

ಈ ಹೊಸ ಮಾರುಕಟ್ಟೆಯ ಕುತೂಹಲಕಾರಿ ಉದಾಹರಣೆಯೆಂದರೆ ಒಬ್ಬ ಬ್ಯಾಂಕ್ ಉದ್ಯೋಗಿ. ವರದಿಗಳ ಪ್ರಕಾರ, ಜಾಹೀರಾತು ಕಂಪನಿಯೊಂದು ಮೂರು ದಿನಗಳಲ್ಲಿ ಅವರ ಭಾವಚಿತ್ರವನ್ನು ಏಳು ಬಾರಿ ಬಳಸುವ ಹಕ್ಕುಗಳನ್ನು ಖರೀದಿಸಿತು. ಇದರಿಂದಾಗಿ ಅವರಿಗೆ ಸುಮಾರು 2,500 ಯುವಾನ್ ಅಂದರೆ ಸುಮಾರು 35,000 ರೂಪಾಯಿಗಳನ್ನು ನೀಡಲಾಯಿತು. ಈ ಮಾದರಿಯ ವಿಶಿಷ್ಟತೆಯೆಂದರೆ, ಪ್ರತಿಯೊಂದು ಯೋಜನೆಗೂ ವ್ಯಕ್ತಿಯು ಕ್ಯಾಮೆರಾ ಮುಂದೆ ಇರಬೇಕಾಗಿಲ್ಲ.

ಶೆನ್ಜೆನ್ ಮೂಲದ ಕಂಪನಿ ಯುವಾನ್ಸಿಯಾಂಗ್ ಕ್ಸಿನ್‌ಶೆಂಗ್ ಮೇ ತಿಂಗಳಲ್ಲಿ ಇಂತಹ ವೇದಿಕೆಯನ್ನು ಪ್ರಾರಂಭಿಸಿತು. ಗುರುತಿನ ಪರಿಶೀಲನೆಯ ನಂತರ, ಜನರು ತಮ್ಮದೇ ಆದ ಡಿಜಿಟಲ್ ಆ್ಯಕ್ಟರ್‌ ಪ್ರೊಫೈಲ್‌ಗಳನ್ನು ಕ್ರಿಯೇಟ್‌ ಮಾಡಬಹುದು. ಅವರ ಮುಖಗಳ ಬಳಕೆಗೆ ನಿಯಮಗಳನ್ನು ಹೊಂದಿಸಬಹುದು. 34 ವರ್ಷದ ಚೆನ್ ಎನ್ನುವವರು ತನ್ನ ಮುಖದ ಒಂದು ಬಳಕೆಗೆ 99 ಯುವಾನ್ ಶುಲ್ಕ ವಿಧಿಸುತ್ತಾರೆ. ಪ್ರಣಯ ಮತ್ತು ಕೌಟುಂಬಿಕ ಕಥೆಗಳಲ್ಲಿ ತನ್ನ ಮುಖವನ್ನು ಬಳಸಿಕೊಳ್ಳಬಹುದು ಎಂದು ಅವರು ಹೇಳೀದ್ದಾರೆ. ಆದರೆ ಹಾರರ್‌ ಮತ್ತು ಅಶ್ಲೀಲ ಕಟೆಂಟ್‌ಗಳಿಗೆ ತಮ್ಮ ಮುಖ ಬಳಕೆ ಮಾಡುವಂತಿಲ್ಲ ಎಂದು ಸ್ಪಷ್ವಾಗಿ ತಿಳಿಸಿದ್ದಾರೆ.

ಗಳಿಕೆಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಗಳು

ಚೀನಾದಲ್ಲಿ, ಕ್ಸಿನ್‌ಝುವಾದಂತಹ ಇತರ ವೇದಿಕೆಗಳು ಸಹ ಅಭಿವೃದ್ಧಿ ಹೊಂದುತ್ತಿವೆ. ಜಾಹೀರಾತು, ಮಾಡೆಲಿಂಗ್, ಚಲನಚಿತ್ರಗಳು, ಅನಿಮೇಷನ್ ಮತ್ತು ಗೇಮ್‌ಗಳಿಗೆ ಮುಖವನ್ನು ಬಳಸಲು ಪರವಾನಗಿ ನೀಡಲಾಗುತ್ತಿದೆ. ಆದರೆ, ಈ ವ್ಯವಹಾರವು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಕ್ಕಳ ಫೇಶಿಯಲ್‌ ಡೇಟಾ ಬಳಕೆಯ ಬಗ್ಗೆ ತಜ್ಞರು ವಿಶೇಷವಾಗಿ ಎಚ್ಚರಿಕೆ ನೀಡುತ್ತಾರೆ. ಕೆಲವು ಕಾನೂನು ತಜ್ಞರು ಈ ಪ್ಲಾಟ್‌ಫಾರಂನ ಒಪ್ಪಂದಗಳನ್ನು ಕೂಡಾ ಪ್ರಶ್ನಿಸಿದ್ದಾರೆ. ವರದಿಗಳ ಪ್ರಕಾರ, ಕೆಲವು ಸಂದರ್ಭಗಳಲ್ಲಿ, ಅನುಮತಿಯನ್ನು ಅಕಾಲಿಕವಾಗಿ ರದ್ದುಗೊಳಿಸಿದರೆ ಬಳಕೆದಾರರಿಗೆ 50,000 ಯುವಾನ್‌ಗಳವರೆಗೆ ದಂಡ ವಿಧಿಸಬಹುದು.

AI ಯುಗದಲ್ಲಿ ಮುಖ ಯಾರದ್ದು ?

ಮುಖ ಪರವಾನಗಿ ಜನರಿಗೆ ಹಣ ಗಳಿಸುವ ಹೊಸ ಮಾರ್ಗವನ್ನು ನೀಡುತ್ತಿದೆ ನಿಜ. ಆದರೆ ಇದು ಒಂದು ಮಹತ್ವದ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ. ಅದೇನೆಂದರೆ ನಿಮ್ಮ ಮುಖ ಡಿಜಿಟಲ್ ಜಗತ್ತನ್ನು ತಲುಪಿದ ನಂತರ, ಅದರ ಮೇಲೆ ನಿಮಗೆ ಎಷ್ಟು ನಿಯಂತ್ರಣವಿರುತ್ತದೆ? ಎನ್ನುವುದು. ಚೀನಾದಲ್ಲಿನ ಈ ಹೊಸ ಮಾರುಕಟ್ಟೆಯು AI ಯುಗದಲ್ಲಿ, ವ್ಯಕ್ತಿಯ ಡಿಜಿಟಲ್ ಗುರುತು ಕೂಡಾ ಅಮೂಲ್ಯವಾದ ಆಸ್ತಿಯಾಗಬಹುದು ಎನ್ನುವುದನ್ನು ತೋರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+