ಮೆಲುದನಿಯ 'ಗಾಯಕ'ನನ್ನು ಅಟ್ಟಿದ ಸೇನೆ 'ಹುಲಿಗಳು'

ಪುಣೆ, ಏ.23: ಮೆಲುದನಿಯ ಪಾಕಿಸ್ತಾನ ಗಾಯಕ ಆತೀಫ್ ಅಸ್ಲಮ್ ಗಾನಗೋಷ್ಠಿಯನ್ನು ನಿಲ್ಲುಸುವಂತೆ ಶಿವ ಸೇನಾ ಹುಲಿಗಳು ಕೊನೆಗೂ ಯಶಸ್ವಿಯಾಗಿವೆ.

ಇದೇ ಆತೀಫ್ ಅಸ್ಲಮ್ ಬಾಲಿವುಡ್ ನಲ್ಲಿ ಅನೇಕ ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದ ಕಿವಿ ಮುಚ್ಚಿ ಕುಳಿತ್ತಿದ್ದ ಸೇನೆಯ ಹುಲಿಗಳು ಈಗ ಮಾತ್ರ ಆರ್ಭಟಿಸಿವೆ. ದೇಶ ಮೊದಲು ಆಮೇಲೆ ಕಲೆ, ಕಲಾವಿದ ಎಂಬ ಡೈಲಾಗ್ ಬೆದರಿದ ಆಯೋಜಕರ ಬಾಯಲ್ಲಿ ಹೇಳಿಸಿದ್ದಾರೆ.

ಪುಣೆಯ ಹಡಪ್ಸರ್ ನಲ್ಲಿ ಏಪ್ರಿಲ್ 25ರಂದು ನಡೆಯಬೇಕಿದ್ದ ಪಾಪ್ ಗಾಯಕ ಅತೀಫ್‌ ಅಸ್ಲಮ್ ಲೈವ್ ಮ್ಯೂಸಿಕ್ ಕಾರ್ಯಕ್ರಮ ರದ್ದಾಗಿದೆ. ಮ್ಯೂಸಿಕ್ ಶೋ ಟಿಕೆಟ್ ಖರೀದಿಸಿದ್ದ ಅಭಿಮಾನಿಗಳಿಗೆ ದುಡ್ಡು ವಾಪಸ್ ಮಾಡಲಾಗುತ್ತದೆ ಎಂದು ಆಯೋಜಕರಾದ ಸಂಜಯ್ ಸಾಠೆ ಅವರು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

After Shiv Sena's objection, Atif Aslam's Pune concert cancelled

ನಮ್ಮ ರಾಷ್ಟ್ರಕ್ಕೆ ಮೊದಲು ಆದ್ಯತೆ, ದೇಶ ಮೊದಲು ನಂತರ ಕಲಾವಿದ, ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಸಾಹೇಬ್‌ ಠಾಕ್ರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ ಎಂದು ಸಂಜಯ್ ಹೇಳಿದ್ದಾರೆ.

ಶಿವಸೇನೆಯ ಶಾಸಕ ಮಹಾದೇವ್‌ ಬಾಬರ್‌ ಅವರು ಮಾತನಾಡಿ, ಪಾಕಿಸ್ತಾನದ ಮತ್ತು ಅಲ್ಲಿಂದ ಬರುವ ಕಲಾವಿದರನ್ನು ಶಿವಸೇನೆ ವಿರೋಧಿಸುವಲ್ಲಿ ಅರ್ಥವಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ, ಸದಾಕಾಲ ಭಾರತದ ಮೇಲೆ ಗುಂಡಿನ ದಾಳಿ ನಡೆಸಿ ನಮ್ಮ ಬೆನ್ನಿಗೆ ಚೂರಿ ಇರಿಯುವ ದೇಶದ ಕಲಾವಿದರನ್ನು ಕರೆದು ತಂದು ಆದರ ಆತಿಥ್ಯ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+