ದೇಶದ ಟಾಪ್ 10 ಶ್ರೀಮಂತ ಸಚಿವರಲ್ಲಿ ರಾಜ್ಯದ ಐವರು!

Written By:
Subscribe to Oneindia Kannada

ನವದೆಹಲಿ, ಆಗಸ್ಟ್ 6 (ಪಿಟಿಐ) : 29 ರಾಜ್ಯಗಳಲ್ಲಿ ಮತ್ತು 2 ಕೇಂದ್ರಾಡಳಿತ ಪ್ರದೇಶದಲ್ಲಿನ ಸಚಿವರುಗಳ ಕ್ರಿಮಿನಲ್ ಚಟುವಟಿಕೆ ಮತ್ತು ಆಸ್ತಿಪಾಸ್ತಿಯ ಮಾಹಿತಿಯನ್ನು ಎಡಿಆರ್ ಸಂಸ್ಥೆ ಬಹಿರಂಗ ಪಡಿಸಿದೆ.

ಸರ್ಕಾರೇತರ ಸಂಸ್ಥೆಯಾಗಿರುವ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR), ಒಟ್ಟು 620 ಸಚಿವರ ಪೈಕಿ 609 ಸಚಿವರ ಮಾಹಿತಿಯನ್ನು ಕಲೆಹಾಕಿದ್ದು, ಇದರಲ್ಲಿ 210 ಸಚಿವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. (RSS ಆಂತರಿಕ ಸಮೀಕ್ಷೆ, ಬಿಜೆಪಿಗೆ ನಡುಕ)

ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಕೇರಳ ರಾಜ್ಯದ ಸಚಿವರು ಅತಿಹೆಚ್ಚು ಕ್ರಿಮಿನಲ್ ಕೇಸ್ ಹೊಂದಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ರಾಜ್ಯದ ಹನ್ನೆರಡು ಸಚಿವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಒಟ್ಟಾರೆ 609 ಸಚಿವರ ಸರಾಸರಿ ಆಸ್ತಿಮೊತ್ತ 8.59 (ರಾಜ್ಯ ಸರಕಾರದ ಸಚಿವರು) ಕೋಟಿ ರೂಪಾಯಿ ಆಗಿದ್ದರೆ, ಕೇಂದ್ರ ಸಚಿವರ ಆಸ್ತಿಮೊತ್ತ 12.94 ಕೋಟಿ ಎಂದು ಎಡಿಆರ್ ತನ್ನ ವರದಿಯಲ್ಲಿ ಬಹಿರಂಗ ಪಡಿಸಿದೆ.

ಈ ಪೈಕಿ ಅತ್ಯಂತ ಕಮ್ಮಿ ಆಸ್ತಿಯನ್ನು ಹೊಂದಿರುವ ಸಚಿವರು ಹೆಚ್ಚಾಗಿರುವುದು ತ್ರಿಪುರ, ಕೇರಳ ಮತ್ತು ಮಣಿಪುರ ರಾಜ್ಯಗಳಲ್ಲಿ.

ಎಡಿಆರ್ ಬಿಡುಗಡೆ ಮಾಡಿರುವ ದೇಶದ ಹಾಲೀ ಹತ್ತು ಶ್ರೀಮಂತ ಸಚಿವರ ಪಟ್ಟಿಯಲ್ಲಿ ರಾಜ್ಯದ ಐವರು ಸ್ಥಾನ ಪಡೆದುಕೊಂಡಿದ್ದಾರೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

1. ಪೊಂಗರು ನಾರಾಯಣ

1. ಪೊಂಗರು ನಾರಾಯಣ

ಪಕ್ಷ : ತೆಲುಗುದೇಶಂ
ಪ್ರತಿನಿಧಿಸುವ ಕ್ಷೇತ್ರ : ಪರಿಷತ್ ಸದಸ್ಯ
ರಾಜ್ಯ: ಆಂಧ್ರಪ್ರದೇಶ
ಆಸ್ತಿಮೊತ್ತ : 496 ಕೋಟಿ

2. ಡಿ ಕೆ ಶಿವಕುಮಾರ್

2. ಡಿ ಕೆ ಶಿವಕುಮಾರ್

ಪಕ್ಷ : ಐ ಎನ್ ಸಿ
ಪ್ರತಿನಿಧಿಸುವ ಕ್ಷೇತ್ರ : ಕನಕಪುರ
ರಾಜ್ಯ: ಕರ್ನಾಟಕ
ಆಸ್ತಿಮೊತ್ತ : 251 ಕೋಟಿ

3. ಸಂತೋಷ್ ಲಾಡ್

3. ಸಂತೋಷ್ ಲಾಡ್

ಪಕ್ಷ : ಐ ಎನ್ ಸಿ
ಪ್ರತಿನಿಧಿಸುವ ಕ್ಷೇತ್ರ : ಕಲಘಟಕಿ
ರಾಜ್ಯ: ಕರ್ನಾಟಕ
ಆಸ್ತಿಮೊತ್ತ : 186 ಕೋಟಿ

4. ನಾರಾ ಚಂದ್ರಬಾಬು ನಾಯ್ಡು

4. ನಾರಾ ಚಂದ್ರಬಾಬು ನಾಯ್ಡು

ಪಕ್ಷ : ತೆಲುಗುದೇಶಂ
ಪ್ರತಿನಿಧಿಸುವ ಕ್ಷೇತ್ರ : ಕುಪ್ಪಂ
ರಾಜ್ಯ: ಆಂಧ್ರಪ್ರದೇಶ
ಆಸ್ತಿಮೊತ್ತ : 177 ಕೋಟಿ

5. ಸಂಜಯ್ ಪಾಠಕ್

5. ಸಂಜಯ್ ಪಾಠಕ್

ಪಕ್ಷ : ಬಿಜೆಪಿ
ಪ್ರತಿನಿಧಿಸುವ ಕ್ಷೇತ್ರ : ವಿಜಯರಾಘ್ವ
ರಾಜ್ಯ: ಮಧ್ಯಪ್ರದೇಶ
ಆಸ್ತಿಮೊತ್ತ : 141 ಕೋಟಿ

6. ಎಂ ಆರ್ ಸೀತಾರಾಂ

6. ಎಂ ಆರ್ ಸೀತಾರಾಂ

ಪಕ್ಷ : ಐ ಎನ್ ಸಿ
ಪ್ರತಿನಿಧಿಸುವ ಕ್ಷೇತ್ರ : ಪರಿಷತ್ ಸದಸ್ಯ
ರಾಜ್ಯ: ಕರ್ನಾಟಕ
ಆಸ್ತಿಮೊತ್ತ : 136 ಕೋಟಿ

7. ಪೇಮಾ ಖಂಡು

7. ಪೇಮಾ ಖಂಡು

ಪಕ್ಷ : ಐ ಎನ್ ಸಿ
ಪ್ರತಿನಿಧಿಸುವ ಕ್ಷೇತ್ರ : ಮುಕ್ತೋ
ರಾಜ್ಯ: ಅರುಣಾಚಲ ಪ್ರದೇಶ
ಆಸ್ತಿಮೊತ್ತ : 129 ಕೋಟಿ

8. ಆರ್ ವಿ ದೇಶಪಾಂಡೆ

8. ಆರ್ ವಿ ದೇಶಪಾಂಡೆ

ಪಕ್ಷ : ಐ ಎನ್ ಸಿ
ಪ್ರತಿನಿಧಿಸುವ ಕ್ಷೇತ್ರ : ಹಳಿಯಾಳ
ರಾಜ್ಯ: ಕರ್ನಾಟಕ
ಆಸ್ತಿಮೊತ್ತ : 113.93 ಕೋಟಿ

9. ಜೆ ಜಯಲಲಿತಾ

9. ಜೆ ಜಯಲಲಿತಾ

ಪಕ್ಷ : ಎಐಎಡಿಎಂಕೆ
ಪ್ರತಿನಿಧಿಸುವ ಕ್ಷೇತ್ರ : ರಾಧಾಕೃಷ್ಣನ್ ನಗರ
ರಾಜ್ಯ: ತಮಿಳುನಾಡು
ಆಸ್ತಿಮೊತ್ತ : 113.73 ಕೋಟಿ

10. ಪ್ರಮೋದ್ ಮಧ್ವರಾಜ್

10. ಪ್ರಮೋದ್ ಮಧ್ವರಾಜ್

ಪಕ್ಷ : ಐ ಎನ್ ಸಿ
ಪ್ರತಿನಿಧಿಸುವ ಕ್ಷೇತ್ರ : ಉಡುಪಿ
ರಾಜ್ಯ: ಕರ್ನಾಟಕ
ಆಸ್ತಿಮೊತ್ತ : 105 ಕೋಟಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
ADR Survey report : List of Ten richest ministers of India. This list includes five ministers from Karnataka.
Please Wait while comments are loading...