ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ
Recommended Video

ಬೆಂಗಳೂರು, ಜೂನ್ 18: ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಷ್ಟೇ ಅಲ್ಲ, ಕೇರಳ, ತಮಿಳುನಾಡಿನಲ್ಲೂ ಸಾಕಷ್ಟು ಮಳೆಯಾಗುವ ಸಂಭವವಿದೆ. ಪಶ್ಚಿಮ ಬಂಗಾಳ, ಸಿಕ್ಕಿಮ್, ಉತ್ತರಾಖಂಡ್, ಇತ್ತ ಗೋವಾ, ಉತ್ತರ ಕನ್ನಡ ಮತ್ತು ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.
ನೈರುತ್ಯ ಮುಂಗಾರು ಮಾರುತಗಳು ಮುಂಬೈನ ಥಾಣೆ, ಅಹ್ಮದ್ ನಗರ, ಬುಲ್ಧಾನಾ, ಅಮ್ರೋಟಿ, ಗೋಂಡಿಯಾ, ಟಿಟ್ಲಾ ಗರ್, ಕಟಕ್, ಮಿಡ್ನಾಪುರ, ಗೋಲ್ ಪಾರಾ ಮತ್ತು ಬಗ್ಡೋಗ್ರಾ ಮೂಲಕ ಹಾದುಹೋಗಿವೆ. ಮುಂಗಾರು ಮಾರುತಗಳು ಮುಂದಿನ ಒಂದು ವಾರ ದುರ್ಬಲವಾಗಲಿದ್ದು, ಹೆಚ್ಚಿನ ಮಳೆ ಸುರಿಯಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಉತ್ತರಾಖಂಡ್, ಹರ್ಯಾಣ, ಚಂಡಿಗಢ, ದೆಹಲಿ, ಉತ್ತರ ಪ್ರದೇಶದ ಪಶ್ಚಿಮ ಭಾಗ, ತಮಿಳುನಾಡು, ಆಂಧ್ರಪ್ರದೇಶದ ಉತ್ತರ ಕರಾವಳಿ, ತೆಲಂಗಾಣ ಮತ್ತು ರಾಯಲಸೀಮೆಯಲ್ಲಿ ಗಾಳಿ, ಗುಡುಗು, ಸಿಡಿಲಿನ ಸಮೇತ ಭಾರೀ ಮಳೆ ಸುರಿಯಲಿದೆ.
ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು ಮತ್ತು ಕೇರಳದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹಮಾನಾ ಇಲಾಖೆ ನೀಡಿದೆ.












Click it and Unblock the Notifications