Get Updates
Get notified of breaking news, exclusive insights, and must-see stories!

Adani ACC Limited: ಎಸಿಸಿ ತ್ರೈಮಾಸಿಕ ಪ್ರಗತಿ ಫಲಿತಾಂಶದ ವರದಿ ಬಿಡುಗಡೆ ಮಾಡಿದೆ

ಅದಾನಿ ಸಮೂಹಗಳಲ್ಲಿ ಒಂದಾದ ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅಗತ್ಯ ಸಾಮಗ್ರಿ ಪೂರೈಕೆ ಕಂಪನಿಯಾದ ಎಸಿಸಿ (ACC) ಲಿಮಿಟೆಡ್ 2025 ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದ ಆರ್ಥಿಕ ವಹೀವಾಟು, ಲಾಭ, ಪ್ರಗತಿಯ ಫಲಿತಾಂಶ ಬಿಡುಗಡೆ ಮಾಡಿದೆ. ಪ್ರೀಮಿಯಂ ಮಾರಾಟ, ಕಾರ್ಯಾಚರಣೆಯ ದಕ್ಷತೆ ಮತ್ತು ನಿರಂತರ ಮಾರುಕಟ್ಟೆಯಲ್ಲಿ ಹೊಂದುತ್ತಿರುವ ನಾಯಕತ್ವವನ್ನು ಕಂಪನಿಯು ಹಣಕಾಸು ಪ್ರತಿಬಿಂಬಿಸುತ್ತಿದೆ. ವಾರ್ಷಿಕವಾಗಿ ಪ್ರಗತಿ ಸಾಧಿಸಿದೆ.

ಎಸಿಸಿ ಲಿಮಿಟೆಡ್‌ನ ಪೂರ್ಣಾವಧಿ ನಿರ್ದೇಶಕ ಮತ್ತು ಸಿಇಒ ವಿನೋದ್ ಬಹೇಟಿ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ವರ್ಷದ ಆರಂಭದಲ್ಲಿ ಉದ್ಯಮದಲ್ಲಿ ವೇಗ ಆರಂಭವಾಗಿದೆ. ಕಂಪನಿ ಕಾರ್ಯಕ್ಷಮತೆಯು ಪ್ರೀಮಿಯಂ ಮಾರಾಟ, ಕಾರ್ಯಾಚರಣೆಯ ಶ್ರೇಷ್ಠತೆ, ದಕ್ಷ ನಾಯಕತ್ವ, ಸುಸ್ಥಿರವಾಗಿ ನೆಲೆಗೊಂಡ ಕಂಪನಿಯ ಕಾರ್ಯ ಚಟುವಟಿಕೆಯನ್ನು ಇದೆಲ್ಲವು ಬಲಗೊಳಿಸುತ್ತದೆ. ಅಷ್ಟೇ ಅಲ್ಲದೇ ಲಾಭಗಳು ಮತ್ತು ಡಿಜಿಟಲ್ ರೂಪಾಂತರ ಉಪಕ್ರಮಗಳು ಗ್ರಾಹಕರಿಗೆ ಅನುಕೂಲ ಒದಗಿಸಿವೆ. ಅಧಿಕ ಮೌಲ್ಯಯುತ ಸೇವೆ ನೀಡಲು ನಮಗೂ ಸಹಾಯವಾಗಿವೆ ಎಂದರು.

ACC Ltd Posts Strong Q1 FY26 Results with Higher Volumes Efficiency Gains amp amp Green Energy Boost

ಎಸ್‌ಬಿಟಿಯಿಂದ ಮೌಲ್ಯೀಕರಣಗೊಂಡ ವಿಜ್ಞಾನ-ಆಧಾರಿತ ನಿವ್ವಳ-ಶೂನ್ಯ ಗುರಿಗಳೊಂದಿಗೆ, ಜವಾಬ್ದಾರಿಯುತ ಮಾರ್ಗದಲ್ಲಿ ಉದ್ಯಮವನ್ನು ಮುನ್ನಡೆಸುತ್ತಿದ್ದೇವೆ. ನಿರಂತರವಾಗಿ ನಾವೀನ್ಯತೆ ಮಾಡುವುದು ಮತ್ತು ಭಾರತದ ಮೂಲ ಸೌಕರ್ಯ ಮತ್ತು ಆರ್ಥಿಕ ಮಹತ್ವಾಕಾಂಕ್ಷೆಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ನಿಟ್ಟಿನಲ್ಲಿ ಕಟ್ಟಡ ಸಾಮಗ್ರಿ ಪರಿಹಾರ ಒಸಗಿಸುವ ಕಂಪನಿಯ ಪ್ರಗತಿ, ದಕ್ಷತೆ ಮೆಲೆ ಗಮನ ಹರಿಸಲಾಗಿದೆ ಎಂದು ಹೇಳಿದರು.

ಅತ್ಯುತ್ತಮ ಬೆಳವಣಿಗೆ, ವೆಚ್ಚ ನಿಯಂತ್ರಣ ಮತ್ತು ಬಂಡವಾಳ ನಿರ್ವಹಣೆಯು ನಮ್ಮ ಪ್ರಗತಿ ದೃಢೀಕರಿಸುತ್ತದೆ. ಉದ್ಯಮ-ಪ್ರಮುಖ ವೆಚ್ಚ ಸ್ಪರ್ಧಾತ್ಮಕತೆಯಲ್ಲಿ ಕಂಪನಿ ಬದ್ಧತೆ ಪ್ರದರ್ಶಿಸಿದೆ. ಅಧಿಕ ವ್ಯಾಪಾರ ಪ್ರಮಾಣ, ಹೆಚ್ಚು ಪ್ರೀಮಿಯಂ ಉತ್ಪನ್ನವು ವ್ಯಾಪಾರ ವಹೀವಾಟು ಪ್ರಮಾಣದಲ್ಲಿ (7pp YoY) ಬೆಂಬಲದಲ್ಲಿ ವಾರ್ಷಿಕವಾಗಿ ಶೇಕಡಾ 12ರಷ್ಟು ಏರಿಕೆ ಆಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಕಂಪನಿಗಿರುವ ನಾಯಕತ್ವವನ್ನು ಬಲಗಪಡಿಸುತ್ತದೆ.

WHRS ವಿದ್ಯುತ್ ಪಾಲು ಶೇಕಡಾ 9.9 ರಿಂದ ಶೇಕಡಾ 13.9 ಕ್ಕೆ 4ಪಟ್ಟು ಹೆಚ್ಚಾಗಿದೆ, ಸೌರಶಕ್ತಿ ಪಾಲು ಶೇಕಡಾ 3.4 ರಿಂದ ಶೇಕಡಾ 11.3ಕ್ಕೆ ಅಂದರೆ 7.9 ಪಟ್ಟು ಹೆಚ್ಚಾಗಿದೆ. ಹಸಿರು ವಿದ್ಯುತ್ ಪಾಲು ಶೇಕಡಾ 11.9 ನಿಂದ ಶೇಕಡಾ 26.2ರಷ್ಟು ಏರಿಕೆ ಆಗಿದೆ. ಸ್ಪಷ್ಟ ಮಾರ್ಗಸೂಚಿ ಮತ್ತು ಶೇಕಡಾ 60 ಹಸಿರು ವಿದ್ಯುತ್ ಪಾ ಸಾಧಿಸಿದೆ.

ಕಡಿಮೆ ವೆಚ್ಚದಲ್ಲಿ ಆಮದು ಆದ ಪೆಟ್‌ಕೋಕ್ ಬಳಕೆ, ಸುಧಾರಿತ ಸಂಪರ್ಕ ಮತ್ತು ಕ್ಯಾಪ್ಟಿವ್ ಕಲ್ಲಿದ್ದಲು ಬಳಕೆ ಹಾಗೂ ಗುಂಪು ಕಂಪನಿಗಳೊಂದಿಗೆ ಸಿನರ್ಜಿಗಳು ಕಿಲ್‌ನಿಂದ ಇಂಧನ ವೆಚ್ಚದಲ್ಲಿ ಶೇ. 10ರಷ್ಟು ಇಳಿಕೆಗೆ ಕರಣವಾಗಿದೆ. ಪ್ರತಿ '000 ಕೆ.ಸಿ.ಎಲ್.ಗೆ ರೂ. 1.73 ರಿಂದ 1.56 ರೂಪಾಯಿ ಇದೆ. 738 ಕೆ.ಸಿ.ಎಲ್. ನಲ್ಲಿ ಉಷ್ಣ ಮೌಲ್ಯವು ವಾರ್ಷಿಕವಾಗಿ ಒಂದು ಕೆ.ಸಿ.ಎಲ್.ನಷ್ಟು ಸುಧಾರಣೆ ಕಂಡಿದೆ. ಈ ಯೋಜನೆಗಳಳ್ಲಿ ಮುಂದಿನ ತ್ರೈಮಾಸಿಕಗಳಲ್ಲಿ ಸಾಕಷ್ಟು ಸುಧಾರಣೆ ಆಗುವ ನಿರೀಕ್ಷೆ ಇದೆ.

ಇನ್ನೂ ಲಾಜಿಸ್ಟಿಕ್ಸ್ ವೆಚ್ಚವು ಪ್ರತಿ ಟನ್‌ಗೆ 972 ರೂಪಾಯಿ ಅಂದರೆ ಶೇ. 5 ರಷ್ಟು ಕಡಿಮೆ ಆಗಿದೆ. ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ವೀಲರ್ ಜೋಡಣೆ, ಹೊಸ ಹೊಸ ಉಪಕ್ರಮಗಳು, ರಸ್ತೆ ನೇರ ರವಾನೆ ಮಾಡಲಾಗುತ್ತಿದೆ. ಅದರಲ್ಲಿ 2 ಪಿಪಿ ಶೇಕಡಾ 69 ರಷ್ಟು ಪ್ರಗತಿಯಾಗಿದೆ. ವಿವಿಧ ಸರಕು ಸಾಗಣೆ ಮಾತುಕತೆಯ ಉಪಕ್ರಮಗಳ ಮೂಲಕ, ರಸ್ತೆ ಪಿಟಿಪಿಕೆ ವರ್ಷಕ್ಕೆ 1ರಷ್ಟು ಕಡಿಮೆ ಆಗಿದ್ದು. ಪ್ರತಿ ಟನ್‌ಗೆ 4.15 ರೂಪಾಯಿ ಎಂದು ಕಂಪನಿ ತಿಳಿಸಿದೆ.

26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಸಿಸಿ ಸಿಎಂ ಕಂಪನಿಯು ವರ್ಷದಿಂದ ವರ್ಷಕ್ಕೆ ಶೇಕಡಾ 12ರಷ್ಟು ಬೆಳವಣಿಗೆ ಆಗಿದೆ. 11.5 ಮಿಲಿಯನ್ ಟನ್ ಮೂಲಕ ಅತ್ಯಧಿಕ ಪ್ರಮಾಣ ಕಿಲ್ನ್ ಇಂಧನ ವೆಚ್ಚ ಶೇಕಡಾ 10 ರಷ್ಟು ಕಡಿಮೆ ಆಗಿದೆ. (ರೂ. 1.73 ರಿಂದ 1.56/'000 ಕೆ.ಸಿ.ಎಲ್) ವಿದ್ಯುತ್ ಬಳಕೆಯ ಶೇ. 11.9 ರಷ್ಟು ಹೆಚ್ಚಳ ಆಗಿದ್ದು, ಅದು 26.2 ಕ್ಕೆ ಮುಟ್ಟಿದೆ.

ಕಂಪನಿ ಹಣಕಾಸಿನ ಮುಖ್ಯಾಂಶಗಳು

* ತ್ರೈಮಾಸಿಕದ ಆದಾಯ ರೂ. 6,087 ಕೋಟಿ ಹೆಚ್ಚಾಗಿ ವಾರ್ಷಿಕವಾಗಿ ಶೇ. 17 ರಷ್ಟು ಏರಿಕೆ ಕಂಡಿದೆ. ಮಾರಾಟ ಪ್ರಮಾಣ (6%) ಮತ್ತು ಪ್ರೀಮಿಯಂ ಉತ್ಪನ್ನವು ವ್ಯಾಪಾರ ಮಾರಾಟದ ಶೇ. 41 ರಷ್ಟು ಏರಿಕೆ ಆಗಿದೆ. ಅಂದರೆ ಪ್ರತಿ ವರ್ಷಕ್ಕೆ ಶೇ. 7 ರಷ್ಟು ಏರಿಕೆಯಾಗಿದೆ ಎಂದು ಕಂಪನಿ ವರದಿಯಲ್ಲಿ ತಿಳಿಸಿದೆ.

* ಕಾರ್ಯಾಚರಣೆ EBITDA ರೂ. 778 ಕೋಟಿ ತಲುಪಿದ್ದು, ವಾರ್ಷಿಕ ಶೇ. 15 ಹೆಚ್ಚಳವಾಗಿದ್ದು, ಲಾಭ ಶೇಕಡಾ 12.8ರಷ್ಟಾಗಿದೆ.

* ತ್ರೈಮಾಸಿಕದಲ್ಲಿ ನಿವ್ವಳ ಮೌಲ್ಯ ರೂ. 228 ಕೋಟಿ ಹೆಚ್ಚಾಗಿದೆ. ರೂ. 18,787 ಕೋಟಿ ಆಗಿದೆ.

* ತ್ರೈಮಾಸಿಕದಲ್ಲಿ ಇಪಿಎಸ್ ರೂ. 19.9, ವರ್ಷಕ್ಕೆ ರೂ. 0.7 ರಷ್ಟು ಹೆಚ್ಚಳವಾಗಿದೆ.

2025 ತ್ರೈಮಾಸಿಕದ ಹಣಕಾಸು ಕಾರ್ಯಕ್ಷಮತೆ
26 ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ
25 ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ

ಮಾರಾಟದ ಪ್ರಮಾಣ (ಸಿಮೆಂಟ್ ಮತ್ತು ಕ್ಲಿಂಕರ್) ಮಿಲಿಯನ್ ಟನ್‌ಗಳು
11.5

10.2

ರೆಡಿ ಮಿಕ್ಸ್ ಕಾಂಕ್ರೀಟ್‌ನ ಮಾರಾಟದ ಪ್ರಮಾಣ ಮಿಲಿಯನ್ M3

0.83

0.68

ಕಾರ್ಯಾಚರಣೆ ಬರುವ ಆದಾಯ 6,087 ಮತ್ತು 5,199 ಕೋಟಿ ರೂ.

ಕಾರ್ಯಾಚರಣಾ ಇಬಿಐಟಿಡಿಎ ಮತ್ತು ಮಾರ್ಜಿನ್ ರೂ. ಕೋಟಿ

778%

679 %

12.8

13.1

ಪಿಎಂಟಿ ರೂ. 678, 664

ಇತರ ಆದಾಯ ರೂ. ಕೋಟಿ

68

72

ತೆರಿಗೆಗೆ ಮುನ್ನ ಲಾಭ ಕೋಟಿ ರೂ.

563

484

ತೆರಿಗೆ ನಂತರದ ಲಾಭ ಕೋಟಿ ರೂ.

375

360

ಪ್ರತಿ ಷೇರಿಗೆ ಗಳಿಕೆ (ದುರ್ಬಲ)
ರೂ.19.919.2

ಇಎಸ್‌ಜಿ ಅಪ್ಡೇಟ್ಸ್

ACC ತನ್ನ ಪೋಷಕ ಅಂಬುಜಾ ಸಿಮೆಂಟ್ಸ್ ಜೊತೆಗೆ ವಿಜ್ಞಾನ ಆಧಾರಿತ ಗುರಿಗಳ ಉಪಕ್ರಮ (SBTi) ಜೊತೆಗೆ ವಿಶ್ವದಾದ್ಯಂತ ಭಾರತದ ಎರಡು ಪ್ರಮುಖ ಮತ್ತು ನಾಲ್ಕನೇ ದೊಡ್ಡ ಪ್ರಮಾಣದ ಸಿಮೆಂಟ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ.
ಕಂಪನಿಯು 2024-25ರ ಆರ್ಥಿಕ ವರ್ಷದಲ್ಲಿ ತನ್ನ ಡಿಜಿಟಲ್ BRSR (ವ್ಯವಹಾರ ಜವಾಬ್ದಾರಿ ಮತ್ತು ಸುಸ್ಥಿರತೆ ವರದಿ ಮಾಡುವಿಕೆ) ಅನ್ನು ಪ್ರಾರಂಭಿಸಿದೆ. ಈ ಮಾಹಿತಿ ವೆಬ್‌ಸೈಟ್‌ನಲ್ಲಿ (https://www.acclimited.com/digital-brsr-2024-25/index.html) ಲಭ್ಯವಿದೆ. ಅಂತಾರಾಷ್ಟ್ರೀಯ ಪೋರ್ಟಲ್‌ನಲ್ಲಿ ಪ್ರಕಟಿಸಲಾಗಿದೆ.

* ಜೂನ್ 30ಕ್ಕೆ ಅಂತ್ಯಗೊಂಡಂತೆ ತ್ರೈಮಾಸಿಕದಲ್ಲಿ ಹಸಿರು ವಿದ್ಯುತ್ ಬಳಕೆಯಲ್ಲಿ ಶೇಕಡಾ 26.2 ಕ್ಕೆ ಹೆಚ್ಚಳವಾಗಿದೆ. ಜಲ ಮೂಲ ರಕ್ಷಣೆ, ವೃತ್ತಾಕಾರದ ಆರ್ಥಿಕತೆ, ಉಷ್ಣ ಪರ್ಯಾಯ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಲ್ಲಿ ಎಸಿಸಿ ಕಂಪನಿ ಹೂಡಿಕೆ ಮುಂದುವರಿದಿದೆ.

ಬ್ರ್ಯಾಂಡಿಂಗ್ ಹಾಗೂ ತಾಂತ್ರಿಕ ಸೇವೆಗಳು

ಎಸಿಸಿ ಕಂಪನಿ ವಿಶ್ವ ದರ್ಜೆಯ R&D ಸಾಮರ್ಥ್ಯದ ಆಧುನಿಕ ಉತ್ಪನ್ನ ಹಾಗೂ ಪರಿಹಾರಗಳ ಸುಸ್ಥಿರ ನಗರ ನಿರ್ಮಾಣ ಹೆಚ್ಚಿಸಲು ಮತ್ತು ಬಿಟಿಬಿ ಸಂಪರ್ಕ ವಿಸ್ತರಣೆಗೆ CREDAI ಜೊತೆ ವಿಶೇಷ ಪಾಲುದಾರಿಕೆ ಹೊಂದಿದೆ. ACC ಯ ಪ್ರೀಮಿಯಂ ಉತ್ಪನ್ನ ಶ್ರೇಣಿ ಉತ್ತೇಜಿಸಲು ಹೊಸ ಡಿಜಿಟಲ್ ವೀಡಿಯೊ ಜಾಹೀರಾತನ್ನು ಆರಂಭಿಸಲಾಗಿದೆ. 125 ಮೀಲಿಯನ್‌ಗೂ ಹೆಚ್ಚು ವೀಡಿಯೊ ವೀಕ್ಷಣೆ ಪಡೆದಿದೆ.

* 11,001 ಗ್ರಾಹಕ ಸೈಟ್‌ಗಳಲ್ಲಿ ಅದಾನಿ ಪ್ರಮಾಣೀಕೃತ ತಂತ್ರಜ್ಞಾನ ಅಳವಡಿಕೆ

* 3,963 ಗುತ್ತಿಗೆದಾರರ ಒಳಗೊಂಡ 133 ಕೌಶಲ್ಯ-ನಿರ್ಮಾಣ ಕಾರ್ಯಾಗಾರ ಆಯೋಜಿಸಿದೆ.

* Spotify JioSaavn Wynk Gaana PocketFM ಮುಂತಾದ ಜನಪ್ರಿಯ ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಅಭಿಯಾನಗಳು ಮತ್ತು ಆಡಿಯೋ ಜಾಹೀರಾತುಗಳ ಪ್ರೀಮಿಯಂ ಉತ್ಪನ್ನದ ಜಾಗೃತಿ ಮೂಡಿಸಲಾಗಿದೆ.

* ಪ್ರೀಮಿಯಂ ಉತ್ಪನ್ನ ಪಾಲು ವ್ಯಾಪಾರ ಮಾರಾಟ ಶೇಕಡಾ 41ರಷ್ಟು ಹೆಚ್ಚಾಗಿದೆ.

* IPL 2025 ರ ಸಮಯದಲ್ಲಿ ಕಾರ್ಯತಂತ್ರದ ಬ್ರ್ಯಾಂಡ್ ನಿಯೋಜನೆಗಳು 600M+ ಪ್ರೇಕ್ಷಕರನ್ನು ತಲುಪಿದೆ.

ಡಿಜಿಟಲೀಕರಣ ಅಂಶಗಳು

* ಪ್ರಮಾಣೀಕರಣ ಮತ್ತು ಹೈಪರ್‌ಲೋಕಲ್ ಮಾರ್ಕೆಟಿಂಗ್‌ಗಾಗಿ DIGIPIN ಅಳವಡಿಕೆಗೆ ಉಪಕ್ರಮ ಆರಂಭ.

* ಏಕೀಕೃತ, ನಿಖರ ಡೇಟಾಗೆ ಅಡಿಪಾಯ ನಿರ್ಮಿಸಲು ಕಾರ್ಯತಂತ್ರದ ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್ (MDM) ರೂಪಾಂತರ ಆರಂಭ.

* ವೇರಿಯಬಲ್ ವೆಚ್ಚಗಳ ಮೇಲೆ ಬಜೆಟ್ ನಿಯಂತ್ರಣ ಏರಿಸಲು SAP ನಿಧಿಗಳ ನಿರ್ವಹಣೆ ಮಾಡಲಾಗುತ್ತದೆ.

* ಲೈವ್ ಮೇಲ್ವಿಚಾರಣೆ ಮತ್ತು ಬೆಂಬಲಕ್ಕಾಗಿ ಸಸ್ಯ ನಿಯಂತ್ರಣ ವ್ಯವಸ್ಥೆಗಳಿಗೆ ರಿಮೋಟ್ ವ್ಯವಸ್ಥೆ ಸಕ್ರಿಯ.

* ನೆಟ್‌ವರ್ಕ್ ನಿರ್ವಹಣೆ ಮತ್ತು ಆಡಿಟ್ ಅನುಸರಣೆ ಸುಧಾರಿಸಲು, ಅಪಾಯದ ಮೌಲ್ಯಮಾಪನ, ಸುಧಾರಿತ ರಿಮೋಟ್ ಪ್ರವೇಶ ಹಾಗೂ IT-OT ನೆಟ್‌ವರ್ಕ್ ಪ್ರತ್ಯೇಕತೆ ಮೂಲಕ OT ಸೈಬರ್ ಭದ್ರತೆ ಬಲಪಡಿಸಲಾಗಿದೆ.

ಸಾಧನೆಗಳ ವಿವರ

* ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್ ಕಂಪನಿಗಳು 'TRA ರಿಸರ್ಚ್ ತನ್ನ ಬ್ರಾಂಡ್ ಟ್ರಸ್ಟ್ ವರದಿ 2025' ರಲ್ಲಿ ಸತತ 3 ನೇ ವರ್ಷವೂ 'ಭಾರತದ ಅತ್ಯಂತ ವಿಶ್ವಾಸಾರ್ಹ ಸಿಮೆಂಟ್ ಬ್ರಾಂಡ್ 2025' ಎಂದು ಕರೆಸಿಕೊಂಡಿದೆ.

* ಸಿಮೆಂಟ್ ಉದ್ಯಮ ವಿಭಾಗದಲ್ಲಿ 'GEEF ಗ್ಲೋಬಲ್ ಎಮರ್ಜಿಂಗ್ ಎನ್ವಿರಾನ್ಮೆಂಟಲ್ ಎಕ್ಸಲೆನ್ಸ್ ಕಂಪನಿ ಆಫ್ ದಿ ಇಯರ್ 2025 ಪ್ರಶಸ್ತಿ ಪಡೆದಿದೆ.

* ದುರ್ಗಾ ಪೂಜಾ ಬಿಶ್ವಾಶ್ ಇ ದುರ್ಗಾ ಅಭಿಯಾನದಿಂದ 'ಅತ್ಯುತ್ತಮ AI ಚಾಲಿತ ಮಲ್ಟಿಮೀಡಿಯಾ ವಿಷಯ' ವಿಭಾಗದಲ್ಲಿ ಕಂಚಿನ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದಲ್ಲದೇ ಮಾರ್ಕೆಟರ್ಸ್ ಎಕ್ಸ್‌ಸೆಲೆನ್ಸ್ ಪ್ರಶಸ್ತಿಗಳು ಲಭಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+