ಕೇರಳದಲ್ಲಿ ಎಬಿವಿಪಿ ಸದಸ್ಯನ ಕೊಲೆ, ಎಸ್‌ಡಿಪಿಐ ಸದಸ್ಯರ ಬಂಧನ
ಕಣ್ಣೂರು, ಜನವರಿ 20: ಕೇರಳದ ಕಣ್ಣೂರಿನಲ್ಲಿ ಮತ್ತೆ ಮತೀಯ ದ್ವೇಷಕ್ಕೆ ಕೊಲೆಯೊಂದು ನಡೆದಿದೆ. ಎರಡು ತಿಂಗಳ ಅವಧಿಯಲ್ಲಿ ಕಣ್ಣೂರಿನಲ್ಲಿ ನಡೆದ ಎರಡನೇ ಕೊಲೆ ಇದಾಗಿದೆ.
ಶುಕ್ರವಾರ ಎಬಿವಿಪಿ ಸಂಘಟನೆಯ ಸದಸ್ಯ ಶ್ಯಾಮ್ ಪ್ರಸಾದ್ ಎಂಬುವನನ್ನು ದುಷ್ಕರ್ಮಿಗಳು ಕೊಲೆಗೈದಿದ್ದು, ಈ ಸಂಬಂಧ ಎಸ್‌ಡಿಪಿಐ ಸಂಘಟನೆಯ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರಿನ ಪೆರವೂರ್ ಎಂಬಲ್ಲಿ ಹತ್ಯೆ ನಡೆದಿದ್ದು, ಬೈಕ್‌ನಲ್ಲಿ ತನ್ನ ಪಾಡಿಗೆ ಬರುತ್ತಿದ್ದ ಶ್ಯಾಮ್‌ನನ್ನು ಅಡ್ಡಗಟ್ಟಿದ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ 3 ಜನ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ, ಈ ಸಂದರ್ಭ ಶ್ಯಾಮ್ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರಾದರೂ ದುಷ್ಕರ್ಮಿಗಳು ಆತನನ್ನು ಅಟ್ಟಾಸಿಸಿಕೊಂಡು ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಶ್ಯಾಮ್ ಕೊಲೆಯನ್ನು ಎಬಿವಿಪಿ ಮತ್ತು ಕೇರಳ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇಂದು ಕೇರಳದ ಹಲವೆಡೆ ಪ್ರತಿಭಟನೆ ಮಾಡುತ್ತಿದೆ. ಪಿಎಫ್‌ಐ ಮತ್ತು ಎಸ್‌ಡಿಪಿಐ ನಂತಹಾ ಉಗ್ರ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಅವು ಒತ್ತಾಯಿಸಿವೆ.












Click it and Unblock the Notifications