Exit Poll Result 2024: ದಕ್ಷಿಣ ರಾಜ್ಯಗಳ ಎಬಿಪಿ ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶ
ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಜೂನ್ ಒಂದರಂದು ಕೊನೆಯಾಗಿದ್ದು, ಇಂದು ಹಲವು ಮಾಧ್ಯಮ ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳನ್ನು ಬಿಡುಗಡೆ ಮಾಡಿವೆ. ಎಬಿಪಿ ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ದಕ್ಷಿಣ ಭಾರತದ ಹಲವು ಸ್ಥಾನಗಳಲ್ಲಿ ಕಮಾಲ್ ಮಾಡುವಂತಿದೆ.
ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಬಿಜೆಪಿ ಈ ಬಾರಿ ಕಲೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಎಬಿಪಿ ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶ ಬಹಿರಂಗಪಡಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ 3 ರಿಂದ 5 ಸ್ಥಾನಗಳನ್ನು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಎನ್‌ಡಿಎ 23 ರಿಂದ 25 ಸ್ಥಾನಗಳನ್ನು ಪಡೆದುಕೊಳ್ಳಬಹುದು. I.N.D.I.A. 41.8% ಮತ ಹಂಚಿಕೆಯನ್ನು ಬಿಜೆಪಿ 54.2% ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.
ತೆಲಂಗಾಣದಲ್ಲಿ NDA ಮತ್ತು I.N.D.I.A ಎರಡೂ ಆಗಿ ನೆಕ್ ಅಂಡ್ ನೆಕ್ ಫೈಟ್ ನೀಡಲಿವೆ. ಎರಡು ಮೈತ್ರಿಕೂಟಗಳು 7 ರಿಂದ 9 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. AIMIM ತನ್ನ ಒಂದು ನವನ್ನು ಪಡೆದುಕೊಳ್ಳಬಹುದು. ಐ.ಎನ್.ಡಿ.ಐ.ಎ. 38.6% ಮತ ಹಂಚಿಕೆಯನ್ನು ಬಿಜೆಪಿ 33%, BRS 20.3% ಮತ್ತು AIMIM 2% ಮತ ಹಂಚಿಕೆ ಪಡೆಯಲಿದೆ.
ಆಂಧ್ರಪ್ರದೇಶದಲ್ಲಿ ಇಂಡಿಯಾ ಮೈತ್ರಿ ಕೂಟ ಕೆಳಗೆ ಬಿದಿದ್ದು, ಬಿಜೆಪಿ ನೇತೃತ್ವ ಎನ್‌ಡಿಎ ಕಮಾಲ್ ಮಾಡಿದೆ. ಬಿಜೆಪಿಗೆ 21 ರಿಂದ 25, ಸ್ಥಾನಗಳನ್ನು ಗಳಿಸಲಿದೆ. ವೈಎಸ್‌ಆರ್‌ಸಿಪಿಗೆ 0 ಯಿಂದ 4 ಸ್ಥಾನಗಳನ್ನು ಗೆಲ್ಲಲಿದೆ. ಇಂಡಿಯಾ ಒಕ್ಕೂಟ 3.3% ಮತ ಹಂಚಿಕೆಯನ್ನು ಬಿಜೆಪಿ 52.9% ಮತ್ತು YSRCP 41.7% ಮತ ಹಂಚಿಕೆ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ತಮಿಳುನಾಡಿನ ಎಬಿಪಿ ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟವು 37 ರಿಂದ 39 ಸ್ಥಾನಗಳನ್ನು ಗಳಿಸಬಹುದು, ಬಿಜೆಪಿಯು 0 ರಿಂದ 2 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.
ಇನ್ನು, ಕೇರಳದಲ್ಲಿ ಕಾಂಗ್ರೆಸ್ 17 ರಿಂದ 19, ಎನ್‌ಡಿಎ 1 ರಿಂದ 3 ಸ್ಥಾನಗಳನ್ನು ಗಳಿಸಬಹುದು. ಎಲ್‌ಡಿಎಫ್ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನಲಾಗಿದೆ.
25 ಈಶಾನ್ಯ ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ 3 ರಿಂದ 7, ಎನ್‌ಡಿಎಗೆ 16 ರಿಂದ 21 ಸ್ಥಾನ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.

ದಕ್ಷಿಣ ಭಾರತದ ರಾಜ್ಯಾವಾರು ಫಲಿತಾಂಶ ಮಾಹಿತಿ
ಕರ್ನಾಟಕ
ಬಿಜೆಪಿ ಜೆಡಿಎಸ್ ಮೈತ್ರಿ- 23- 25
ಕಾಂಗ್ರೆಸ್- 3 - 5
ತಮಿಳುನಾಡು
ಬಿಜೆಪಿ - 0- 2
ಡಿಎಂಕೆ - ಕಾಂಗ್ರೆಸ್- 37 - 39
ತೆಲಂಗಾಣ
NDA - 7- 8
INDIA- 7- 9
Oth: 0- 01
ಆಂಧ್ರ ಪ್ರದೇಶ
ಬಿಜೆಪಿ (ಎನ್‌ಡಿಎ ಮೈತ್ರಿ) - 21- 25
YSRC : 0- 04
ಕೇರಳ
ಬಿಜೆಪಿ - 01- 03
ಕಾಂಗ್ರೆಸ್ ಮತ್ತು ಮೈತ್ರಿಕೂಟ- 17- 19
ಎಡ ಪಕ್ಷಗಳು- 0











Click it and Unblock the Notifications