ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಟಿಕೆಟ್, ಮರಣ ಪತ್ರಕ್ಕೆ ಆಧಾರ್ ಸಂಖ್ಯೆ ಅಗತ್ಯವಿಲ್ಲ: ಕೇಂದ್ರದ ಸ್ಪಷ್ಟನೆ

ರೈಲು ಟಿಕೆಟ್, ಮರಣ ಪ್ರಮಾಣ ಪತ್ರಕ್ಕೆ ಆಧಾರ್ ಕಾರ್ಡ್ ಕಡ್ಡಾಯವಿಲ್ಲ. ಕೇಂದ್ರ ಸರ್ಕಾರದಿಂದ ಹೊರಬಿದ್ದ ಸ್ಪಷ್ಟನೆ.

|
Google Oneindia Kannada News

ನವದೆಹಲಿ, ಆಗಸ್ಟ್ 5: ರೈಲ್ವೆ ಟಿಕೆಟ್ ಕಾಯ್ದಿರಿಸಲು ಹಾಗೂ ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಆಧಾರ್ ಕಾರ್ಡ್ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ರೈಲ್ವೆ ಇಲಾಖೆಯು ಟಿಕೆಟ್ ಖರೀದಿಗಾಗಲೀ ಅಥವಾ ಟಿಕೆಟ್ ಕಾಯ್ದಿರಿಸುವ ಪದ್ಧತಿಗಾಗಲಿ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ರೈಲ್ವೇ ಇಲಾಖೆಯ ರಾಜ್ಯ ಸಚಿವ ರಾಜೇನ್ ಗೊಹೈನ್ ಅವರು ತಿಳಿಸಿದರು.

Aadhaar number not mandatory for rail tickets, death certificates, Govt clarifies

ಶುಕ್ರವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದ ನಂತರ, ಸಂಜೆ ವೇಳೆಗೆ ಮರಣ ಪ್ರಮಾಣ ಪತ್ರದ ವಿಚಾರಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ, ಮರಣ ಪ್ರಮಾಣ ಪತ್ರಕ್ಕೂ ಆಧಾರ್ ಕಡ್ಡಾಯವೇನಿಲ್ಲ ಎಂದು ತಿಳಿಸಿತು. ಇದರಿಂದಾಗಿ, ಈ ಬಗ್ಗೆ ಇದ್ದ ಗೊಂದಲಗಳು ದೂರವಾದಂತಾಗಿದೆ.

ಈ ಹಿಂದೆ ರೈಲು ಪ್ರಯಾಣ ಟಿಕೆಟ್ ಗಳನ್ನು ಖರೀದಿಸಲು ಆಧಾರ್ ಸಂಖ್ಯೆ ಕಡ್ಡಾಯವೆಂಬ ಸುದ್ದಿಗಳು ಕೆಲ ಮಾಧ್ಯಮಗಳಲ್ಲಿ ಹರಿದಾಡಿದ್ದವು. ತೀರಾ ಇತ್ತೀಚೆಗೆ, ಆಧಾರ್ ಸಂಖ್ಯೆಯು ಯಾವುದೇ ವ್ಯಕ್ತಿಯ ಮರಣ ಪ್ರಮಾಣ ಪತ್ರವನ್ನು ಪಡೆಯೂ ಅಗತ್ಯವೆಂದು ಹೇಳಲಾಗಿತ್ತು.

English summary
The Aadhaar number is not mandatory for booking rail tickets and to get death certificates, the Centre told the Rajya Sabha on Friday, August 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X