Video: ಪತಿಯನ್ನು ಬೆತ್ತಲೆ ಮಾಡಿ ಖಾಸಗಿ ಅಂಗ ಸುಟ್ಟು ಹಿಂಸೆ ಕೊಟ್ಟ ಪತ್ನಿ: ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಉತ್ತರ ಪ್ರದೇಶ, ಮೇ 06: ಸುಮಾರು ಏಳು ತಿಂಗಳು ಹಿಂದಷ್ಟೇ ಪ್ರೀತಿಸಿ ವಿವಾಹವಾಗಿದ್ದವನಿಗೆ ಪತ್ನಿಯೇ ಇನ್ನಿಲ್ಲದಂತೆ ಚಿತ್ರಹಿಂಸೆ ನೀಡಿದ ಘಟನೆ ವರದಿ ಆಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ತನ್ನ ಪತಿಯನ್ನು ಬೆತ್ತಲೆ ಮಾಡಿ ಖಾಸಗಿ ಅಂಗ ಸುಟ್ಟು, ಮಾನವೀಯತೆ ಇಲ್ಲದಂತೆ ವರ್ತಿಸುವ ಮೂಲಕ ಪತ್ನಿಯೊಬ್ಬಳು ಸುದ್ದಿಯಾಗಿದ್ದಾಳೆ.
ನೀವು ಪತಿಯಿಂದ ಪತ್ನಿಗೆ ಕಿರುಕುಳ, ದೌರ್ಜನ್ಯ, ಚಿತ್ರಹಿಂಸೆ ಬಗ್ಗೆ ಕೇಳಿದ್ದೀರಿ. ಆದರೆ ಇಲ್ಲೊಬ್ಬ ಮಹಿಳೆ ಪತಿಗೆ ಮನಬಂದಂತೆ ನೋವು ನೀಡಿದ್ದಾರೆ. ಪತಿ ತಾನು ಅನುಭವಿಸಿದ ನರಕಯಾತನೆಯನ್ನು ಎಳೆ ಎಳೆಯಾಗಿ ಪೊಲೀಸರ ಮುಂದೆ ವಿವರಿಸಿದ್ದಾನೆ.

ಮುಸ್ಲಿಂ ಮಹಿಳೆಯೊಬ್ಬರು ತನ್ನ ಪತಿಯನ್ನು ಏಳು ತಿಂಗಳ ಹಿಂದಷ್ಟೇ ಇಸ್ಲಾಂ ಪದ್ಧತಿಯಂತೆ ಮದುವೆ ಆಗಿದ್ದರು. ಆದರೆ ಆಕೆ ತನ್ನ ಗಂಡನಿಗೆ ರೂಮಿನಲ್ಲಿ ಮನಬಂದಂತೆ ಹಿಂಸೆ ಕೊಡುತ್ತಿದ್ದಳು. ಕಾಟ ತಾಳಲಾರದೇ ಪತಿ ರೂಮಿನಲ್ಲಿ ಸಿಸಿಟಿವಿ ಸಹ ಅಳವಡಿಸಿದ್ದ. ಸದ್ಯ ಇದರಿಂದಲೇ ಪತ್ನಿಯ ಕೆಟ್ಟ ಚಾಳಿ ಬಹಿರಂಗವಾಗಿದೆ.
ಮಂಚಕ್ಕೆ ಪತಿ ಕೈಕಾಲು ಕಟ್ಟಿ ಪತ್ನಿಯ ಹೀನ ಕೃತ್ಯ
ಪ್ರಕರಣ ಕಳೆದ ತಿಂಗಳು ಏಪ್ರಿಲ್ 24ರಂದೇ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಡ್‌ರೂಮಿನಲ್ಲಿ ಎಂದಿನಂತೆ ತೆರಳಿದ್ದ ಪತ್ನಿ ಘಟನೆ ದಿನ ಗಂಡನಿಗೆ ಕುಡಿಯಲು ಕೊಟ್ಟ ಹಾಲಿನಲ್ಲಿ ಮಾದಕ ಮಾತ್ರೆ ಬೆರೆಸಿದ್ದಳು. ಕುಡಿದ ಅಮಲಿನಲ್ಲಿ ಮಲಗಿದ ಗಂಡನ ಕೈ ಕಾಲುಗಳನ್ನು ಪಲ್ಲಂಗಕ್ಕೆ ನಾಲ್ಕು ಕಡೆ ಕಟ್ಟಿದ್ದಾಳೆ.

ಬಳಿಕ ಗಂಡನನ್ನು ವಿವಸ್ತ್ರಗೊಳಿಸಿ, ಪಕ್ಕದಲ್ಲೇ ಕುಳಿತು ಮದ್ಯ ಸೇವಿಸಿದ್ದಾರೆ. ಕೈಯಿಂದ ಗಂಡನ ಖಾಸಗಿ ಅಂಗ ಮುಟ್ಟಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಇದು ಸಾಕಾಗದಿದ್ದಾಗ ಆಕೆ ಸಿಗರೇಟ್ ಸೇದುತ್ತಾ ಆತನ ಖಾಸಗಿ ಅಂಗವನ್ನು ಮನಬಂದಂತೆ ಸುಟ್ಟು ಹಾಕಿದ್ದಾಳೆ.
ಚಾಕುವಿನಿಂದ ಪತಿ ಖಾಸಗಿ ಭಾಗಕ್ಕೆ ಹಾನಿ
ಅಲ್ಲದೇ ಚಾಕುವಿನಿಂದ ಪತಿಯ ಖಾಸಗಿ ಭಾಗಕ್ಕೆ ಹಾನಿ ಮಾಡಿದ್ದಾಳೆ. ಚಾಕುವಿನಿಂದ ಮೈ ಮೇಲೆಲ್ಲ ಗಾಯ ಮಾಡುವ ಮೂಲಕ ವಿಕೃತ ಖುಷಿ ಅನುಭವಿಸಿದ್ದಾಳೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆಕೆಯನ್ನು ಮದುವೆಯಾದ ಬಳಿಕ ಮಗ ಇನ್ನಿಲ್ಲದ ನೋವು ಅನುಭವಿಸುತ್ತಿದ್ದ ಎಂದು ಆಕೆಯ ಅತ್ತೆ ಸಹ ಪೊಲೀಸರ ಮುಂದೆ ದೂರಿದ್ದಾಳೆ. ಪೊಲೀಸ್ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಚಿತ್ರಹಿಂಸೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ದೂರು
ಪತ್ನಿ ಕಾಟ ತಾಳಲಾರದೇ ಸಿಸಿ ಟಿವಿ ಅಳವಡಿಸಿದ್ದ ಪತಿಯು ಪೊಲೀಸರ ಮುಂದೆ ತಾನು ಅನುಭವಿಸಿದ ಹಿಂಸೆಯ ದೃಶ್ಯಾವಳಿ ತೋರಿಸಿದ್ದಾರೆ. ಇದರಲ್ಲಿ ಮಂಚದ ಮೇಲೆ ಗಂಡನನ್ನು ಕಟ್ಟಿ ಹಾಕಿ, ಕಿರುಚದಂತೆ ಬಾಯಿ ವಸ್ತ್ರ ಕಟ್ಟಿರುವುದು ಕಾಣುತ್ತದೆ. ಬಾಯಿ ಕಟ್ಟಿದ್ದರು ಪತ್ನಿ ಕೊಡುವ ನೋವಿಗೆ ಕಿರುಚಾಡುವ ಸದ್ದು ದೃಶ್ಯಾವಳಿಗಳಲ್ಲಿ ಕೇಳಿಸುತ್ತದೆ.
ಮಾನಸಿಕ ಮತ್ತು ದೈಹಿಕ ಹಿಂಸೆ ಅನುಭವಿಸಿರುವ ಗಾಯಾಳು ಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ ಬಿಜ್ನೂರು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.












Click it and Unblock the Notifications