ಅಂಗವಿಕಲೆಯನ್ನು ಮೆಟ್ಟಿಲು ಮೂಲಕ ಕರಿಸಿಕೊಂಡ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗಳು: ಮಹಿಳೆ ಆರೋಪ!
ಮುಂಬೈ ಅಕ್ಟೋಬರ್ 18: ಮಹಾರಾಷ್ಟ್ರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ರಿಜಿಸ್ಟ್ರಾರ್ ಕಚೇರಿಯಲ್ಲಿ ಲಿಫ್ಟ್ ಇಲ್ಲ ಎಂದು ಮದುವೆಯಾಗಲು ಬಂದ ಅಂಗವಿಕಲ ಮಹಿಳೆಯನ್ನು ಎರಡನೇ ಮಹಡಿಗೆ ಕರಿಸಿಕೊಂಡ ಘಟನೆ ವರದಿಯಾಗಿದೆ. ಅಂಗಲವಿಕಲ ಮಹಿಳೆಯನ್ನು ಕಚೇರಿಗೆ ಕರೆಸಿಕೊಳ್ಳಲಾಗಿದ್ದು ಅಧಿಕಾರಿಗಳು ಕೆಳಗಿಳಿದು ಬಂದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಅಕ್ಟೋಬರ್ 16 ರ ಸೋಮವಾರದಂದು ಮುಂಬೈನ ಉಪನಗರದ ಖಾರ್ ಎಂಬಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಸ್ವತ: ದಂಪತಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ರಿಜಿಸ್ಟ್ರೇಷನ್ ಮಾಡಿಸಲು ಕಚೇರಿಗೆ ಹೋಗಿದ್ದ ವಿರಾಲಿ ಮೋದಿ ಅವರು ಎಕ್ಸ್‌ನ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ. ರಿಜಿಸ್ಟ್ರಾರ್ ಆಫೀಸ್‌ನಲ್ಲಿರುವ ಸರ್ಕಾರಿ ಅಧಿಕಾರಿಗಳು ದಾಖಲೆಗಳ ಮೇಲೆ ತನ್ನ ಸಹಿ ತೆಗೆದುಕೊಳ್ಳಲು ನೆಲ ಮಹಡಿಗೆ ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಬದಲಿಗೆ ಅಂಗವಿಕಲರಾದ ತಮ್ಮನ್ನು ಕಚೇರಿಗೆ ಕರೆಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

"ನಾನು ಅಂಗವಿಕಲಳಾಗಿದ್ದೇನೆ ಮತ್ತು ನಾನು 16/10/23 ರಂದು ಖಾರ್ ಮುಂಬೈನಲ್ಲಿರುವ ರಿಜಿಸ್ಟ್ರಾರ್ ಆಫೀಸ್‌ನಲ್ಲಿ ವಿವಾಹವಾದೆ. ಕಛೇರಿಯು ಲಿಫ್ಟ್ ಇಲ್ಲದೆ 2ನೇ ಮಹಡಿಯಲ್ಲಿತ್ತು. ಆದರೆ ಸಿಬ್ಬಂದಿಗಳು ಸಹಿಗಳಿಗಾಗಿ ಕೆಳಗೆ ಬರಲಿಲ್ಲ. ಇದಕ್ಕಾಗಿ ನಾನೆ ಕಚೇರಿಗೆ ಹೋಗಬೇಕಾಯಿತು. ಮದುವೆಯಾಗಲು ಎರಡು ಮೆಟ್ಟಿಲುಗಳನ್ನು ಹತ್ತಿದೆ" ಎಂದು ವಿರಾಲಿ ಬೇಸರದಿಂದ ಎಕ್ಸ್‌ನಲ್ಲಿ ಪೋಸ್ಟ್ ಬರೆದಿದ್ದಾರೆ.
PLEASE RT!
— Virali Modi (@Virali01) October 18, 2023
I am disabled and I got married at the Registrars Office at Khar Mumbai on 16/10/23. The office was on the 2nd floor WITHOUT a lift. They wouldn’t come downstairs for the signatures and I had to be carried up two flights of stairs to get married. pic.twitter.com/ZNCQF3gJRY
"ಮೆಟ್ಟಿಲುಗಳು ಅತ್ಯಂತ ಕಡಿದಾದವು ಮತ್ತು ರೇಲಿಂಗ್‌ಗಳು ಸಡಿಲ ಮತ್ತು ತುಕ್ಕು ಹಿಡಿದಿದ್ದವು. ನೇಮಕಾತಿಗೆ ಮುಂಚಿತವಾಗಿ ನನ್ನ ಅಂಗವೈಕಲ್ಯವನ್ನು ನಾನು ನನ್ನ ಏಜೆಂಟರಿಗೆ ತಿಳಿಸಿದ್ದರೂ ಸಹ ಯಾರೂ ಸಹಾಯ ಮಾಡಲು ಮುಂದಾಗಲಿಲ್ಲ ಅಥವಾ ಅವರು ನನಗೆ ಯಾವುದೇ ರೀತಿಯ ಸೌಕರ್ಯಗಳನ್ನು ಮಾಡಲಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಆಕ್ಸೆಸಿಬಲ್ ಇಂಡಿಯಾ ಅಭಿಯಾನ ಏನಾಯಿತು ಎಂದು ವಿರಾಲಿ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರವನ್ನು ಪ್ರಶ್ನೆ ಮಾಡಿದ್ದಾರೆ. "ಇದು ಹೇಗೆ ನ್ಯಾಯಯುತವಾಗಿದೆ? ಆಕ್ಸೆಸಿಬಲ್ ಇಂಡಿಯಾ ಅಭಿಯಾನ ಏನಾಯಿತು? ನಾನು ಗಾಲಿಕುರ್ಚಿ ಬಳಕೆದಾರರಾಗಿರುವುದರಿಂದ ನನಗೆ ಮದುವೆಯಾಗುವ ಹಕ್ಕಿಲ್ಲವೇ? ನಾನು ಪ್ರೀತಿಸುವಂತಿಲ್ಲವೇ? ನನ್ನ ಮದುವೆಯ ದಿನ ನಾನು ಜಾರಿ ಬಿದ್ದಿದ್ದರೆ ಏನಾಗುತ್ತಿತ್ತು? ಇದಕ್ಕೆ ಯಾರು ಹೊಣೆ?" ಎಂದು ವಿರಾಲಿ ಪ್ರಶ್ನಿಸಿದ್ದಾರೆ.
ವಿರಾಲಿ ತನ್ನ ದೇಶದ ನಾಗರಿಕರು ತನ್ನ ಅಂಗವೈಕಲ್ಯವನ್ನು ಸರಿಹೊಂದಿಸಲು ಸಾಧ್ಯವಿಲ್ಲ ಎಂದು ನಿರಾಶೆಗೊಂಡಿದ್ದಾರೆ. "ನನ್ನ ದೇಶದ ಸರ್ಕಾರ ಮತ್ತು ನಾಗರಿಕರು ನನ್ನ ಅಂಗವೈಕಲ್ಯಕ್ಕೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ನಿರಾಶೆಗೊಂಡಿದ್ದೇನೆ. ಈ ಅಗ್ನಿಪರೀಕ್ಷೆಯಿಂದ ನನ್ನ ಮಾನವೀಯತೆಯ ಮೇಲಿನ ನಂಬಿಕೆ ನಾಶವಾಗಿದೆ. ನಾನು ಎರಡು ಮಹಡಿಗಳ ಮೇಲೆ ಸಾಗಬೇಕಾಗಿ ಬಂತು. ನಾನು ಮನುಷ್ಯಳು ಮತ್ತು ಇದು ನನ್ನ ಹಕ್ಕುಗಳ ವಿಷಯ" ಎಂದು ಅವರು ಹೇಳಿದರು.
"ನನ್ನ ದೇಶವು ನನ್ನ ಅಗತ್ಯತೆಗಳು ಮತ್ತು ಲಕ್ಷಾಂತರ ಅಂಗವಿಕಲ ನಾಗರಿಕರ ಅಗತ್ಯಗಳನ್ನು ಪೂರೈಸಬೇಕು. ಇದನ್ನು ಬಿಟ್ಟು ಹೀಗೆ ನಡೆದುಕೊಂಡಿರುವುದು ಅನ್ಯಾಯವಾಗಿದೆ. ಇದೊಂದು ಅನಿರೀಕ್ಷಿತ ಘಟನೆಯಾಗಿದೆ. ಇದು ನಮ್ಮಂಥವರನ್ನು ಮುನ್ನೆಡೆಸುವ ರೀತಿ ಅಲ್ಲ'' ಎಂದು ಅವರು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್, ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಚೇರಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರರನ್ನು ಟ್ಯಾಗ್ ಮಾಡಿದ್ದಾರೆ.












Click it and Unblock the Notifications