ಮೇಘಾಲಯ ಗಣಿ ದುರಂತ: ನಿಗೂಢ ಗುಹೆಯಲ್ಲಿ ಎರಡನೇ ಶವ ಪತ್ತೆ

ಶಿಲ್ಲಾಂಗ್, ಜನವರಿ 26: ಮೇಘಾಲಯದ ಗಣಿಯೊಂದರಲ್ಲಿ 15 ಕಾರ್ಮಿಕರು ಸಿಲುಕಿಕೊಂಡ ಪ್ರಕರಣದಲ್ಲಿ ಎರಡನೇ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.

ಕಳೆದ ವಾರ ಓರ್ವ ಕಾರ್ಮಿಕನ ಶವವನ್ನು ಹೊರತೆಗೆಯಲಾಗಿತ್ತು. ಭಾರತೀಯ ನೌಕಾದಳವು ಅತ್ಯಾಧುನಿಕ ತಂತ್ರಜ್ಞಾನದ ROV(remotely operated underwater vehicle) ಬಳಸುವ ಮೂಲಕ ಗಣಿಯಾಳದ ನೀರಿನಲ್ಲಿ ಇನ್ನೋರ್ವ ಕಾರ್ಮಿಕ ಶವ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಕಳೆದ ಒಂದುತಿಂಗಳಿನಿಂದ ಶೋಧ ಕಾರ್ಯ ನಡೆಯುತ್ತಿತ್ತಾದರೂ ಕಳೆದ ವಾರದವರೆಗೂ ಕಾರ್ಮಿಕರು ಜೀವಂತವಾಗಿಯೂ ಪತ್ತೆಯಾಗಿರಲಿಲ್ಲ, ಶವವೂ ಪತ್ತೆಯಾಗಿರಲಿಲ್ಲ. ರಕ್ಷಣಾ ಕಾರ್ಯವೇ ಸರಿಯಾಗಿ ನಡೆಯುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಛಿಮಾರಿ ಹಾಕಿತ್ತು. ಆದರೆ ಇದೀಗ ಎರಡು ಕಾರ್ಮಿಕರ ಶವ ಪತ್ತೆಯಾಗಿದ್ದು, ಉಳಿದ ಕಾರ್ಮಿಕರ ಶವವೂ ಹತ್ತಿರದಲ್ಲೇ ಸಿಕ್ಕಬಹುದು ಎಂದು ಅಂದಾಜಿಸಲಾಗಿದೆ.

A second body has been found in the rat-hole mine in Meghalaya today

ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಡಿ.12 ರಂದು 15 ಕಾರ್ಮಿಕರು ಗಣಿಯೊಳಗೆ ಸಿಲುಕಿ ನಂತರ ನಾಪತ್ತೆಯಾಗಿದ್ದರು. ಅಂದಿನಿಂದಲೂ ಅವರ ಶೋಧ ಕಾರ್ಯು ನಡೆಯುತ್ತಿದ್ದು ಗಣಿಯ ನಕ್ಷೆಯೇ ಇಲ್ಲದ ಕಾರಣ, ಕಾರಿಕರು ಎಲ್ಲಿ ಸಿಲುಕಿರಬಹುದು ಮತ್ತು ಎಷ್ಟು ಆಳದಲ್ಲಿರಬಹುದು ಎಂಬ ಮಾಹಿತಿ ಲಭ್ಯವಾಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+