ಉತ್ತರಾಖಂಡದ ಜೈಲಿನಲ್ಲಿ ರಷ್ಯಾ ಪ್ರಜೆಯ ಉಪವಾಸ ಸತ್ಯಾಗ್ರಹ!
ಡೆಹ್ರಾಡೂನ್ (ಉತ್ತರಾಖಂಡ್), ಜುಲೈ 8: ಉತ್ತರಾಖಂಡದ ತೆಹ್ರಿ ಜೈಲಿನಲ್ಲಿ ರಷ್ಯಾ ಪ್ರಜೆಯೊಬ್ಬ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಆತನ ಆರೋಗ್ಯ ಚಿಂತಾಜನಕವಾಗಿದೆ.
ಪಾಸ್ ಪೋರ್ಟ್ ಇಲ್ಲದೆ ಭಾರತದಲ್ಲಿ ಹಲವು ವರ್ಷಗಳಿಂದ ವಾಸವಿದ್ದ ಆರೋಪದ ಮೇಲೆ ಜುಲೈ 1 ರಂದು ರಷ್ಯಾ ಪ್ರಜೆ ಸೆರ್ಗೈ ಎಂಬುವವರನ್ನು ಉತ್ತರಕಾಶಿಯಲ್ಲಿ ಬಂಧಿಸಲಾಗಿತ್ತು.
ಆದರೆ ಬಂಧಿಸಿದಾಗಿನಿಂತ ಊಟವನ್ನೇ ಮಾಡದೆ, ಒತ್ತಾಯದಿಂದ ಊಟ ನೀಡಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸುತ್ತಿರುವ ಸೆರ್ಗೈ ಇಲ್ಲಿನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.

ತನ್ನನ್ನು ಜೈಲಿನಿಂದ ಬಿಡಬೇಕೆಂಬ ಬೇಡಿಕೆಯೊಂದಿಗೆ ಆತ ಉಪವಾಸ ಸತ್ಯಾಗ್ರ ಆರಂಭಿಸಿದ್ದಾನೆ. ಊಟವಿಲ್ಲದೆ ತೀವ್ರ ನಿಶ್ಶಕ್ತನಾಗಿದ್ದ ಆತನನ್ನು ಇದೀಗ ಇಲ್ಲಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications