Car, Bikes Gift: ಉದ್ಯೋಗಿಗಳಿಗೆ ಟಾಟಾ ಕಾರು, ಆಕ್ಟಿವಾ ಸ್ಕೂಟರ್, ರಾಯಲ್ ಎನ್‌ಫೀಲ್ಡ್ ಬೈಕ್ ಗಿಫ್ಟ್ ಕೊಟ್ಟ ಕಂಪನಿ
Car, Bike Gift: ಸಾಮಾನ್ಯವಾಗಿ ಕೆಲವೊಂದು ಕಂಪನಿಗಳಲ್ಲಿ ಕಠಿಣ ಪರಿಶ್ರಮ ಹಾಕಿದ ಉದ್ಯೋಗಿಗಳಿಗೆ ಉಡುಗೊರೆ ಅಥವಾ ಬೋನಸ್ ಅಂತಾ ಕೊಡುತ್ತಾರೆ. ಹಾಗೆಯೇ ಇದೀಗ ಚೆನ್ನೈ ಮೂಲದ ಖಾಸಗಿ ಕಂಪನಿಯೊಂದು ಉದ್ಯೋಗಿಗಳಿಗೆ ಕಾರ್, ಬೈಕ್ ಗಿಫ್ಟ್ ಕೊಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ವಾಹನಗಳು ಯಾವ ಕಂಪನಿಯವು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ 20 ಉದ್ಯೋಗಿಗಳಿಗೆ ತಮಿಳುನಾಡಿನ ಚೆನ್ನೈ ಮೂಲದ ಸುರ್ಮೌಂಟ್ ಲಾಜಿಸ್ಟಿಕ್ಸ್ ಸಲ್ಯೂಷನ್ಸ್ ಪ್ರೈ.ಲಿ.ಕಂಪನಿಯು ಕಾರ್ ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದೆ.

ಸಂಸ್ಥೆಯ ನೌಕರರ ಶ್ರಮ ಮತ್ತು ಬದ್ಧತೆಗೆ ಅನುಗುಣವಾಗಿ ಟಾಟಾ ಕಾರುಗಳು, ಆಕ್ಟಿವಾ ಸ್ಕೂಟರ್ ಹಾಗೂ ರಾಯಲ್ ಎನ್ಫೀಲ್ಡ್ ಬೈಕುಗಳನ್ನು ಉದ್ಯೋಗಿಗಳಿಗೆ ನೀಡಿದೆ ಎಂದು ತಿಳಿದುಬಂದಿದೆ.
ತಾವು ಪಟ್ಟ ಶ್ರಮಕ್ಕೆ ಉತ್ತಮ ಉಡುಗೊರೆ ಸಿಕ್ಕಿರೆ ಉದ್ಯೋಗಿಗಳು ಮತ್ತಷ್ಟು ಉತ್ತೇಜನದಿಂದ ಕೆಲಸ ಮಾಡಲಿದ್ದಾರೆ. ಈ ಮೂಲಕ ಕಂಪನಿ ಬೆಳಯಲು ಶ್ರಮಿಸುತ್ತಲೇ ಇರುತ್ತಾರೆ. ಅಲ್ಲದೆ, ಅವರ ಉನ್ನತ ಗುರಿ ಸಾಧನೆಗೆ ಸ್ಫೂರ್ತಿ ನೀಡಿದಂತಾಗುತ್ತದೆ ಎಂದು ಕಂಪನಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡೆಂಜಿಲ್ ರಾಯನ್ ಹೇಳಿದ್ದಾರೆ.
ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ನಗರ ಮೂಲದ ಸುರ್ಮೌಂಟ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಾರ್‌ಗಳು ಮತ್ತು ದ್ವಿಚಕ್ರ ವಾಹನಗಳನ್ನು ಉಡುಗೊರೆಯಾಗಿ ನೀಡಿದೆ. ಉಡುಗೊರೆಗಳಲ್ಲಿ ಟಾಟಾ ಕಾರುಗಳು, ಆಕ್ಟಿವಾ ಸ್ಕೂಟರ್‌ಗಳು ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸೇರಿದ್ದು, ಇವುಗಳನ್ನು 20 ಉದ್ಯೋಗಿಗಳಿಗೆ ನೀಡಲಾಯಿತು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಕೆಲವೊಂದು ಕಂಪನಿಗಳಲ್ಲಿ ಎಷ್ಟೇ ಕಷ್ಟ ಪಟ್ಟು, ಶ್ರಮ ಹಾಕಿ ದುಡಿದರೂ ಕೂಡ ಯಾವುದೇ ಆಫರ್ ನೀಡದಿರುವ ಉದಾಹರಣೆಗಳು ಇವೆ. ಇದರಿಂದ ಉದ್ಯೋಗಿಗಳ ಮನಸಿನ ಮೇಲೆ ಪರಿಣಾಮ ಬೀರುವ ಮೂಲಕ ಅವರು ಕೆಲಸದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡುಬಿಡುತ್ತಾರೆ. ಬದಲಿಗೆ ಶ್ರಮಕ್ಕೆ ತಕ್ಕಂತೆ ಪ್ರತಿಫಲವಾಗಿ ಏನಾದರೂ ಉಡುಗೊರೆ ನೀಡಿದರೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ. ಅಲ್ಲದೆ, ಶ್ರಮವಹಿಸಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ಕಂಪನಿ ಯಶಸ್ಸಿಗೆ ಸದಾ ಶ್ರಮಿಸುತ್ತಲೇ ಇರುತ್ತಾರೆ.
ಇದಕ್ಕೆ ಪೂರಕವೆಂಬಂತೆ ಈಗಾಗಲೇ ಈ ಹಿಂದೆ ಸುಮಾರು ಕಂಪನಿಗಳು ಉದ್ಯೋಗಿಗಳಿಗೆ ಉಡುಗೊರೆ ನೀಡಿವೆ. ಈ ಮೂಲಕ ಅವರ ಉದ್ಯೋಗಿಗಳ ಮನ ಗೆದ್ದಿರುವ ಉಹಾಹರಣೆಗಳಿವೆ. ಹಾಗೆಯೇ ಇದೀಗ ಚೈನ್ನೈ ಕಂಪನಿಯೊಂದು ಇದೇ ಹಾದಿಯನ್ನೇ ಅನುಸರಿಸಿ ಗಮನ ಸೆಳದಿದೆ.












Click it and Unblock the Notifications