ಜಿಎಸ್ಟಿ ಜಾರಿಯಾದ ನಂತರ ಸರ್ಕಾರಕ್ಕೆ ಭರ್ಜರಿ ಆದಾಯ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 22: ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ.) ಜುಲೈ 1 ರಿಂದಲೇ ಜಾರಿಯಾಗಿದ್ದು ತಿಳಿದಿರಬಹುದು. ಜಿಎಸ್ಟಿ ಜಾರಿ ನಂತರ ಬೆಲೆ ಏರಿಕೆಯ ಬಿಸಿಯನ್ನು ಸಾರ್ವಜನಿಕರು ಅನುಭವಿಸಿದರೆ, ಸರ್ಕಾರಕ್ಕೆ ಭರ್ಜರಿ ಆದಾಯ ಬಂದಿದೆ.

ಜಿಎಸ್ಟಿ ಜಾರಿಯಾದ ಒಂದು ತಿಂಗಳ ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 42,000 ಕೋಟಿ ರೂ. ಆದಾಯ ಬಂದಿದೆ.

A month since GST, govt collects Rs 42,000 crore in taxes

ಜಿ.ಎಸ್.ಟಿ. ಅನ್ವಯ ವರ್ತಕರು, ಉದ್ಯಮಿಗಳು ಪ್ರತಿ ತಿಂಗಳು ತಮ್ಮ ತೆರಿಗೆ ವಿವರಗಳನ್ನು ಸಲ್ಲಿಸಬೇಕಿದ್ದು, ಜುಲೈ ತಿಂಗಳ ವಿವರವನ್ನು ಸಲ್ಲಿಸಲು ಆಗಸ್ಟ್ 25 ರ ವರೆಗೆ ಅವಕಾಶ ನೀಡಲಾಗಿದೆ.

ಸುಮಾರು 10 ಲಕ್ಷ ಮಂದಿ ತೆರಿಗೆ ವಿವರ ಸಲ್ಲಿಸಿದ್ದು, 20 ಲಕ್ಷಕ್ಕೂ ಅಧಿಕ ಮಂದಿ ಜಿ.ಎಸ್.ಟಿ. ವೆಬ್ ಸೈಟ್ ಗೆ ಲಾಗಿನ್ ಆಗಿ ತಮ್ಮ ತೆರಿಗೆ ವಿವರ ಸೇವ್ ಮಾಡಿದ್ದಾರೆ.

ಅಂತರರಾಜ್ಯ ಸರಕುಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ.ಯಿಂದಾಗಿ 15,000 ಕೋಟಿ ರೂ. ಆದಾಯ ಬಂದಿದೆ. ತಂಬಾಕು ಉತ್ಪನ್ನ, ಕಾರ್ ಮೊದಲಾದವುಗಳ ಮೇಲಿನ ಸೆಸ್ ನಿಂದಾಗಿ ಸುಮಾರು 5000 ಕೋಟಿ ರೂ. ಆದಾಯ ಬಂದಿದೆ.

ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿ.ಯಿಂದ 22,000 ಕೋಟಿ ರೂ. ಆದಾಯ ಬಂದಿದ್ದು, ಇದು ಕೇಂದ್ರ ಮತ್ತು ರಾಜ್ಯಗಳಿಗೆ ಸಮನಾಗಿ ಹಂಚಿಕೆಯಾಗುತ್ತದೆ. ಜಿ.ಎಸ್.ಟಿ.ಯಿಂದ ಆಗಸ್ಟ್ 21 ರ ಬೆಳಿಗ್ಗೆಯವರೆಗೆ 42,000 ಕೋಟಿ ರೂ. ಆದಾಯ ಬೊಕ್ಕಸಕ್ಕೆ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Within the first month of the GST being introduced as much as Rs 42,000 crore has come in taxes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ