ಹಳದಿ ಮಾರ್ಗದಲ್ಲಿ ಮೆಟ್ರೋಗೆ ಸಿಲುಕಿ ವ್ಯಕ್ತಿಯೋರ್ವ ಸಾವು
ಮೆಟ್ರೋ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳಿಗೆ ಇಳಿದಿದ್ದರು ಹಾಗೂ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯಗೆ ಯತ್ನಿಸಿದರು. ಅಷ್ಟೇ ಅಲ್ಲದೆ, ರೀಲ್ಸ್ ಮಾಡಿದ ಘಟನೆ, ಮೆಟ್ರೋದಲ್ಲಿ ತಿಂಡಿ ಸೇವನೆ ಮಾಡಿದ ಘಟನೆಗಳು ನಡೆದಿದ್ದವು. ಇದೀಗ ನದೆಹಲಿಯ ಉದ್ಯೋಗ ಭವನ ಹಳದಿ ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರೈಲುಗೆ ಸಿಲುಕಿ ಮೃತಪಟ್ಟ ಘಟನೆ ಇಂದು (ಫೆಬ್ರವರಿ 28) ನಡೆದಿದೆ.
ಹಳದಿ ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಮೆಟ್ರೋ ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಈ ಘಟನೆ ಸಂಭವಸಿದ ಬಳಿಕ ಮೆಟ್ರೋ ಸೇವೆಯಲ್ಲಿ 20 ನಿಮಿಷ ವ್ಯತ್ಯಯವಾಗಿದೆ. ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ಒಂದು ಚೀಟಿ ಸಿಕ್ಕಿದ್ದು, ಅದರಲ್ಲಿ ಮೊಬೈಲ್ ನಂಬರ್‌ನ ಆಧಾರದ ಮೇಲೆ ಆ ವ್ಯಕ್ತಿಯ ಗುರುತನ್ನು ಪತ್ತೆ ಮಾಡಲಾಗಿದೆ ಎಂದು ಡಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗುರ್‌ಗಾಂವ್ ನ ಮಿಲೇನಿಯಮ್ ಸಿಟಿ ಸೆಂಟರ್‌ನಿಂದ ಸಮಯಾಪುರ ಬಡ್ಲಿ ನಿಲ್ದಾಣದವರೆಗೆ ಹಳದಿ ಮಾರ್ಗದ ಮೆಟ್ರೋ ಸಂಚರಿಸುತ್ತದೆ.
ಈ ನಿಲ್ದಾಣಗಳ ಮಧ್ಯೆ ಇರುವ ಉದ್ಯೋಗ ಭವನ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 11:30ಕ್ಕೆ ರೈಲು ಹೊರಡುವ ವೇಳೆ ಈ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.












Click it and Unblock the Notifications