ಹಿಮಾಲಯದ ತುದಿಯೊಂದಕ್ಕೆ ಅಟಲ್ ಜೀ ಹೆಸರು?!

Recommended Video

      ಹಿಮಾಲಯದ ತುದಿಯೊಂದಕ್ಕೆ ಅಟಲ್ ಜೀ ಹೆಸರು | Oneindia Kannada

      ಡೆಹ್ರಾಡೂನ್, ಸೆಪ್ಟೆಂಬರ್ 29: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆ ಹಿಮಾಲದೆತ್ತರದ್ದು... ಅದಕ್ಕೆಂದೇ ಉತ್ತರಾಖಂಡ ಸರ್ಕಾರ ಹಿಮಾಲಯ ಪರ್ವತದ ತುದಿಯೊಂದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲು ನಿರ್ಧರಿಸಿದೆ.

      ಉತ್ತರಾಖಂಡ ರಾಜ್ಯದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ಈ ಕುರಿತು ಮಾಹಿತಿ ನೀಡಿದ್ದಾರೆ. ಉತ್ತರಾಖಂಡ್ ನ ನೆಹರೂ ಇನ್ ಸ್ಟಿಟ್ಯೂಟ್ ನ ಪರ್ವತಾರೋಹಿಗಳ ತಂಡವೊಂದು ಇನ್ನೂ ಜಗತ್ತಿನ ಕಣ್ಣಿಗೆ ಬೀಳದ ಹಿಮಾಲಯದ ತುದಿಯೊಂದಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಆ ತುದಿಯನ್ನು ಜಗತ್ತಿಗೆ ಪರಿಚಯಿಸಿ, ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

      A Himalayan peak to be named after Atal Bihari Vajpayee

      ವಾಜಪೇಯಿ ಅವರಿಗೆ ಪ್ರಕೃತಿ ಮತ್ತು ಪರ್ವತಗಳ ಮೇಲೆ ಅಗಾಧವಾದ ಪ್ರೀತಿಯಿತ್ತು. ಆದ್ದರಿಂದ ಹಿಮಾಲಯದ ತುದಿಯೊಂದಕ್ಕೆ ಅವರ ಹೆಸರನ್ನಿಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

      ಇತ್ತೀಚೆಗಷ್ಟೇ, ಛತ್ತೀಸ್ಘಡದ ರಾಜಧಾನಿ ನವ ರಾಯ್ಪುರದ ಹೆಸರನ್ನು ಅಟಲ್ ನಗರ ಎಂದು ಬದಲಿಸಲು ಛತ್ತೀಸ್ ಗಢ ಸರ್ಕಾರ ನಿರ್ಧರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

      ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕೊನೆಯುಸಿರೆಳೆದರು. 93 ವರ್ಷ ವಯಸ್ಸಿನ ಅಜಾತಶತ್ರು ವಾಜಪೇಯಿ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡರೂ, ಅವರನ್ನು ಪಕ್ಷಭೇದವಿಲ್ಲದೆ ಎಲ್ಲರೂ ಗೌರವಿಸುತ್ತಿದ್ದರು ಎಂಬುದು ಗಮನೀಯ ಸಂಗತಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+