ಬಿ ಎಸ್ ಪಿ ಮುಖಂಡನ ಹತ್ಯೆ: ಆದಿತ್ಯನಾಥ್ ಗೆ ಸವಾಲು?!

By: ಓನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಅಲಹಾಬಾದ್, ಮಾರ್ಚ್ 20: ಮೊಹಮ್ಮದ್ ಶಮಿ (60) ಎಂಬ ಉತ್ತರ ಪ್ರದೇಶದ ಅಲಹಾಬಾದ್ ನ ಬಿ ಎಸ್ ಪಿ ಮುಖಂಡನೊಬ್ಬ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಘಟನೆ ಮಾರ್ಚ್ 19, ಭಾನುವಾರ ರಾತ್ರಿ ನಡೆದಿದೆ.

ಅಲಹಾಬಾದಿನ ತಮ್ಮ ಕಚೇರಿಯಿಂದ ಕಾರ್ ಪಾರ್ಕಿಂಗ್ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮೊಹಮ್ಮದ್ ಶಮಿ ಅವರನ್ನು ಗುಂಡಿಕ್ಕಿ ಕೊಲೆಮಾಡಿದ್ದಾರೆ.[ಯೋಗಿ ಆದಿತ್ಯನಾಥರ ಟಾಪ್ 5 ವಿವಾದಾತ್ಮಕ ಹೇಳಿಕೆ]

A BSP leader in allahabad shot dead yesterday

ಬಹುಜನ ಸಮಾಜವಾದಿ ಪಕ್ಷದ ಸ್ಥಳೀಯ ಮುಖಂಡರಲ್ಲಿ ಪ್ರಮುಖರಾಗಿದ್ದ ಇವರ ಸಾವಿನಿಂದಾಗಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಎಂದು ಬಿ ಎಸ್ ಪಿ ಬೆಂಬಲಿಗರು ನೂತನ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ! ಹಂತಕರ ಪತ್ತೆಗೆ ತನಿಖೆ ನಡೆಯುತ್ತಿದೆ.[ಯೋಗಿ ಆದಿತ್ಯನಾಥ್ ಯಾರು? ಏನವರ ಹಿನ್ನೆಲೆ?]

ಪ್ರಮಾಣ ವಚನ ಸ್ವೀಕರಿಸಿದ ದಿನವೇ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಗುರುತರ ಹೊಣೆ ಹೆಗಲೇರಿದೆ. ಈ ಜವಾಬ್ದಾರಿಯನ್ನು ಆದಿತ್ಯನಾಥ್ ಹೇಗೆ ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A BSP leader in allahabad, Uttar Pradesh shot dead yesterday by two unidentified persons. Investigation started. This will be the fisrt challenge to newly appointed CM Yogi Adityanath
Please Wait while comments are loading...