ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂ ತೀರ್ಪಿನ 9 ಪ್ರಮುಖ ಅಂಶಗಳು

|
Google Oneindia Kannada News

ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಮಂಗಳವಾರ ತ್ರಿವಳಿ ತಲಾಖ್ ಗೆ ಬಗ್ಗೆ ನೀಡಿದ ಪ್ರಮುಖ ತೀರ್ಪು ಬಂದಿದ್ದು ಹೇಗೆ ಗೊತ್ತಾ? ಮೂರು-ಎರಡರ ಬಹುಮತದಲ್ಲಿ ತ್ರಿವಳಿ ತಲಾಖ್ ಬಗ್ಗೆ ನ್ಯಾಯಮೂರ್ತಿಗಳು ಪ್ರಸ್ತಾವಿಸಿದ ಪ್ರಮುಖ ಅಂಶಗಳೇನು ಗೊತ್ತಾ?

ತಲಾಖ್ ತಲಾಖ್ ತಲಾಖ್ ಗೆ ಭೇಷ್ ಭೇಷ್ ಭೇಷ್ ಎಂದ ಟ್ವಿಟ್ಟಿಗರುತಲಾಖ್ ತಲಾಖ್ ತಲಾಖ್ ಗೆ ಭೇಷ್ ಭೇಷ್ ಭೇಷ್ ಎಂದ ಟ್ವಿಟ್ಟಿಗರು

ಅಂಥ ಒಂಬತ್ತು ಪ್ರಮುಖ ಅಂಶಗಳು ಇಲ್ಲಿವೆ

1.ಐವರು ನ್ಯಾಯಮೂರ್ತಿಗಳ ತೀರ್ಪು ಪ್ರತ್ಯೇಕವಾಗಿ ಓದಿದ ನಂತರ ಮೂರು-ಎರಡರ ಬಹುಮತದಲ್ಲಿ ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರ ಹಾಗೂ ಅಮಾನ್ಯಗೊಳಿಸಲಾಯಿತು.

9 major points of Supreme Court verdict Triple Talaq

2. ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ನಜೀರ್ ತ್ರಿವಳಿ ತಲಾಖ್ ಅನ್ನು ಮೂಲಭೂತ ಹಕ್ಕು ಎಂದಿದ್ದರೆ, ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್.ನಾರಿಮನ್ ಮತ್ತು ಯು.ಯು.ಲಲಿತ್ ಇದು ಮೂಲಭೂತ ಹಕ್ಕಲ್ಲ ಎಂದಿದ್ದಾರೆ.

ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಂಪುಟದ ಸಭೆಯಲ್ಲಿ ಅಂಗೀಕಾರತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಂಪುಟದ ಸಭೆಯಲ್ಲಿ ಅಂಗೀಕಾರ

3. ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್.ನಾರಿಮನ್ ಮತ್ತು ಯು.ಯು.ಲಲಿತ್ ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದಿದ್ದಾರೆ.

ತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪುತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು

4. ಮುಸ್ಲಿಮ್ ಪುರುಷರು ತ್ರಿವಳಿ ತಲಾಖ್ ಮೂಲಕ ನೀಡುವ ತಕ್ಷಣದ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ಆರು ತಿಂಗಳ ತಡೆ ನೀಡಿದೆ.

5. ಇನ್ನು ಆರು ತಿಂಗಳಲ್ಲಿ ತ್ರಿವಳಿ ತಲಾಖ್ ವಿಚಾರವಾಗಿ ಹೊಸ ಕಾನೂನು ರಚಿಸುವಂತೆ ಸುಪ್ರೀಂ ಕೋರ್ಟ್ ನಿಂದ ಸಂಸತ್ ಗೆ ಕೇಳಲಾಗಿದೆ.

6. ಒಂದು ವೇಳೆ ಆರು ತಿಂಗಳಲ್ಲಿ ಕಾನೂನು ರಚನೆ ಆಗದಿದ್ದಲ್ಲಿ ಸುಪ್ರೀಂ ಕೋರ್ಟ್ ನಿಂದ ಸದ್ಯಕ್ಕೆ ತ್ರಿವಳಿ ತಲಾಖ್ ಗೆ ನೀಡಿರುವ ತಾತ್ಕಾಲಿಕ ತಡೆ ಮುಂದುವರಿಯಲಿದೆ.

7.ಇಸ್ಲಾಮಿಕ್ ರಾಷ್ಟ್ರಗಳಲ್ಲೇ ತ್ರಿವಳಿ ತಲಾಖ್ ತೆಗೆದುಹಾಕಲಾಗಿದೆ ಎಂಬ ಅಂಶದ ಬಗ್ಗೆ ಪ್ರಸ್ತಾವಿಸಿದ ಸುಪ್ರೀಂ ಕೋರ್ಟ್, ಸ್ವತಂತ್ರ ಭಾರತದಲ್ಲಿ ಏಕೆ ಇದರಿಂದ ಹೊರಬರಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿತು.

8.ದಿಢೀರ್ ಅಂತ ಮದುವೆಯನ್ನು ರದ್ದು ಪಡಿಸುವ ತ್ರಿವಳಿ ತಲಾಖ್ ಮುಸ್ಲಿಮ್ ಮಹಿಳೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

9. ಶಾಸ್ತ್ರಗಳ ಪ್ರಕಾರ ನಿಜವಲ್ಲದ ಪದ್ಧತಿಯನ್ನು ಕೋರ್ಟ್ ಕೂಡ ರಕ್ಷಿಸುವುದಕ್ಕೆ ಸಾಧ್ಯವಿಲ್ಲ.

English summary
9 major points of Supreme Court verdict Triple Talaq, which is pronounced by SC constitution bench on Tuesday, August 22nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X