8th Pay Commission: ಫಿಟ್‌ಮೆಂಟ್ ಲೆಕ್ಕಾಚಾರ, ಸರ್ಕಾರಿ ನೌಕರರ ವೇತನ ಎಷ್ಟು ಏರಿಕೆ?
ನವದೆಹಲಿ, ಜುಲೈ 23: ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದ ಅನುಷ್ಠಾನಕ್ಕಾಗಿ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಈ ವರ್ಷದ ಜನವರಿಯಲ್ಲಿ ಕೇಂದ್ರ ಸಚಿವ ಸಂಪುಟವು 8ನೇ ಕೇಂದ್ರ ವೇತನ ಆಯೋಗ ಅನುಮೋದಿಸಿದ್ದರೂ, ಕೇಂದ್ರ ವೇತನ ಆಯೋಗ ಸದಸ್ಯರ ಉಲ್ಲೇಖದ ನಿಯಮಗಳು ಮತ್ತು ನೇಮಕಾತಿಯನ್ನು ನಿರ್ಧರಿಸುವ ಪ್ರಕ್ರಿಯೆಯು ವಿಳಂಬವಾಗಿದೆ. 8 ನೇ ವೇತನ ಆಯೋಗವನ್ನು ಜಾರಿಗೆ ತರುವ ಅವಧಿಯು ಸುಮಾರು 1.5 ರಿಂದ 2 ವರ್ಷಗಳು ಎಂದು ಹೇಳಲಾಗುತ್ತಿದೆ. ಸರಳವಾಗಿ ಹೇಳುವುದಾದರೆ, 8 ನೇ ವೇತನ ಆಯೋಗವು 2026 ರಲ್ಲಿ ಜಾರಿಗೆ ಬರುವ ಸಾಧ್ಯತೆಯಿಲ್ಲ.
ಕೊಟಕ್‌ನ ವರದಿಯ ಪ್ರಕಾರ, 8ನೇ ವೇತನ ಆಯೋಗದ (8th CPC) ಪರಿಣಾಮದ ಬಗ್ಗೆ ನಿಖರ ಮತ್ತು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹಿಂದಿನ ವೇತನ ಆಯೋಗಗಳ ವರದಿಗಳು ಸರಾಸರಿ GDPಯ 0.6%-0.8% ರಷ್ಟು ಎಂದು ಅಂದಾಜಿಸಿದಿವೆ. 8ನೇ ವೇತನ ಆಯೋಗವು ಕೂಡ ಹಣಕಾಸು ವೆಚ್ಚವನ್ನು ಇದೇ ಮಟ್ಟದಲ್ಲಿ ನಿರ್ವಹಿಸುವ ಸಾಧ್ಯತೆ ಇದೆ, ಇದು ಸುಮಾರು ರೂ.2.4 ಲಕ್ಷ ಕೋಟಿ ರಿಂದ ರೂ.3.2 ಲಕ್ಷ ಕೋಟಿ ಹೆಚ್ಚುವರಿ ವೆಚ್ಚಕ್ಕೆ ಅನುವಾದವಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ಜಾರಿ ಬಂದರೆ ವೇತನ ಶೇ 13 ರಷ್ಟಾಗುವ ಸಾಧ್ಯತೆಯಿದೆ. ಆದರೆ, 7ನೇ ವೇತನ ಆಯೋಗದ ಅಡಿಯಲ್ಲಿನ ಹೆಚ್ಚಳವು ಶೇ 14.3ರಷ್ಟು ಇದೆ ಎಂದು ಕೋಟಕ್ ಸಾಂಸ್ಥಿಕ ಇಕ್ವಿಟೀಸ್ ವರದಿಯನ್ನು ಹೇಳಿದೆ.ಈಗಾಗಲೇ 8ನೇ ವೇತನ ಆಯೋಗವು ಶಿಫಾರಸು ಮಾಡಲಿರುವ ಫಿಟ್‌ಮೆಂಟ್ ಅಂಶವು 1.8 ಆಗಿರಬಹುದು. ಆದರೆ, 7ನೇ ವೇತನ ಆಯೋಗವು 2.57ರ ಫಿಟ್‌ಮೆಂಟ್ ಅಂಶವನ್ನು ಶಿಫಾರಸು ಮಾಡಿತ್ತು. ಅಂದರೆ,ಇದು ಸುಮಾರು ಶೇ. 30ದಷ್ಟು ಕಡಿಮೆಯಾಗುವ ಸಾಧ್ಯತೆ ಇರಬಹುದು ಎನ್ನಲಾಗಿದೆ. 1.8ರ ಫಿಟ್‌ಮೆಂಟ್ ಅಂಶದ ಪ್ರಕಾರ, ನೌಕರ ಮೂಲ ವೇತನವು ಶೇ.180ರಷ್ಟು ಹೆಚ್ಚಾಗಬಹುದು, ಆದರೆ ಪ್ರಸ್ತುತ ಇರುವ ತುಟ್ಟಿ ಭತ್ಯೆ (ಡಿಎ) ಶೇ.55ನ್ನು ಶೂನ್ಯಕ್ಕೆ ಇಳಿಸುವುದರಿಂದ ನಿರೀಕ್ಷಿತ ವೇತನ ಹೆಚ್ಚಳ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
ಎನ್‌ಡಿಟಿವಿ ಪ್ರಾಫಿಟ್‌ಗೆ ನೀಡಿದ ಮಾಹಿತಿಯ ಪ್ರಕಾರ, 7ನೇ ವೇತನ ಆಯೋಗದ ಅಡಿಯಲ್ಲಿ ಕನಿಷ್ಠ ಸಮಾನವಾದ ಫಿಟ್‌ಮೆಂಟ್ ಅಂಶವನ್ನು ಪಡೆಯಲು ಬೇಡಿಕೆಯನ್ನು ಸಲ್ಲಿಸಲಾಗಿದೆ. ಒಂದು ವೇಳೆ ಫಿಟ್‌ಮೆಂಟ್ ಅಂಶ 1.8 ಆದರೆ, ಕನಿಷ್ಠ ಮೂಲ ವೇತನ 18,000 ರೂ ನಿಂದ 32 ಸಾವಿರಕ್ಕೆ ಏರಿಕೆಯಾಗಬಹುದು. ಆದರೆ, ಡಿಎ ಮತ್ತು ಇತರ ಭತ್ಯೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ವೇತನದ ಏರಿಕೆ ಕೇವಲ ಶೇ. 13 ರಷ್ಟು ಮಾತ್ರ ಸಿಗುತ್ತದೆ. ಕನಿಷ್ಠ ವೇತನ 18,000ಕ್ಕೆ ಹೆಚ್ಚುವರಿಯಾಗಿ 9,900 ಡಿಎ ನೀಡಲಾಗುತ್ತದೆ.
ಇನ್ನೂ ಪ್ರಸ್ತುತ ಮೂಲ ವೇತನ ರೂ 50,000 ಆಗಿದ್ದರೆ, ಅದು 90,000 ರೂ.ಗಳವರೆಗೆ ಏರಿಕೆಯಾಗಬಹುದು.ಆದರೆ, ಈಗಿನ ವೇತನಕ್ಕೆ 27,500 ಡಿಎ ಸೇರಿಸಿರುವುದರಿಂದ, ವೇತನದಲ್ಲಿನ ಹೆಚ್ಚಳವು ಕಡಿಮೆಯಾಗಲಿದೆ. ಇನ್ನು, ಡಿಎಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಹೆಚ್ಚಿಸಲಾಗುತ್ತದೆ. 8ನೇ ವೇತನ ಆಯೋಗ ಜಾರಿಗೆ ಬರುವ ಹೊತ್ತಿಗೆ, ಇದು ಮೂಲ ವೇತನದ ಶೇ. 60 ರಷ್ಟು ದಾಟುವ ನಿರೀಕ್ಷೆಯಿದೆ ಎಂದು ಆಂದಾಜಿಸಲಾಗಿದೆ.
ಕೇಂದ್ರ ಸರ್ಕಾರವು ನೌಕರರ ವೇತನ ಮತ್ತು ನಿವೃತ್ತರ ಪಿಂಚಣಿಗಳನ್ನು ಪರಿಷ್ಕರಣೆಯನ್ನು ಮಾಡಲು ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗಗಳನ್ನು ರಚಿಸುತ್ತದೆ. 7ನೇ ವೇತನ ಆಯೋಗದ ಅನುಷ್ಠಾನದಿಂದಾಗಿ 2017ರ ಆರ್ಥಿಕ ವರ್ಷದಲ್ಲಿ ಸುಮಾರು 1.02 ಲಕ್ಷ ಕೋಟಿ ರೂಪಾಯಿಗಳಷ್ಟು ಹೊರೆಯಾಗಿತ್ತು. 8ನೇ ವೇತನ ಆಯೋಗದಿಂದ 2.4 ರಿಂದ 3.4 ಲಕ್ಷ ಕೋಟಿ ರೂ.ಗಳಷ್ಟು ಹೊರೆಯಾಗಬಹುದು ಎಂದು ಕೋಟಕ್ ಸಾಂಸ್ಥಿಕ ಷೇರುಗಳು ಅಂದಾಜುವನ್ನು ಮಾಡಲಾಗಿದೆ.
ಹಿಂದಿನ ವೇತನ ಆಯೋಗಗಳ ನಡುವಿನ ಪ್ರಮಾಣಿತ ಅಂತರಕ್ಕೆ ಅನುಗುಣವಾಗಿ 8ನೇ ವೇತನ ಆಯೋಗ ಅನ್ನು ಜಾರಿಗೆ ತರುವ ನಿರೀಕ್ಷೆಯಿತ್ತು. 8ನೇ ವೇತನ ಆಯೋಗ ಗಿಂತ ಮೊದಲು, ಸರ್ಕಾರಿ ನೌಕರರು ಜನವರಿ 1, 2016 ರಂದು ಜಾರಿಗೆ ಬಂದ 7 ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ಅನ್ನು ಅನುಸರಿಸುತ್ತಿದ್ದರು. ಆದ್ದರಿಂದ, 8ನೇ ವೇತನ ಆಯೋಗ ಜನವರಿ 2026 ರಿಂದ ಜಾರಿಗೆ ಬರಬೇಕು. ಎರಡು ವೇತನ ಆಯೋಗಗಳ ನಡುವಿನ ಪ್ರಮಾಣಿತ ಅಂತರವು ಸಾಮಾನ್ಯವಾಗಿ 10 ವರ್ಷಗಳು.
ಪಿಟಿಐ ವರದಿಯ ಪ್ರಕಾರ, ಆರು ತಿಂಗಳ ನಂತರವೂ ಆಯೋಗವನ್ನು ಸ್ಥಾಪಿಸದಿರಲು ಕಾರಣಗಳ ಕುರಿತು ಕೇಳಲಾದ ಪ್ರಶ್ನೆಗೆ, ಹಣಕಾಸು ಸಚಿವ ಪಂಕಜ್ ಚೌಧರಿ, "ರಕ್ಷಣಾ ಸಚಿವಾಲಯ, ಗೃಹ ವ್ಯವಹಾರ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮತ್ತು ರಾಜ್ಯಗಳಿಂದ ಸೇರಿದಂತೆ ಪ್ರಮುಖ ಪಾಲುದಾರರಿಂದ ಸಲಹೆಗಳನ್ನು ಕೋರಲಾಗಿದೆ ಎಂದು ಹೇಳಿದರು. ನೌಕರರು ಮತ್ತು ಪಿಂಚಣಿದಾರರಿಗೆ 8ನೇ ವೇತನ ಆಯೋಗ ಜಾರಿಗೆ ತರುವ ದಿನಾಂಕದ ಬಗ್ಗೆ ಕೇಳಿದಾಗ, 8ನೇ ವೇತನ ಆಯೋಗ ಶಿಫಾರಸುಗಳನ್ನು ಮಾಡಿ ಸರ್ಕಾರ ಅಂಗೀಕರಿಸಿದ ನಂತರ ಅನುಷ್ಠಾನವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಚೌಧರಿ ಹೇಳಿದರು.












Click it and Unblock the Notifications