ಬಿಹಾರ ಮುನ್ಸಿಪಲ್ ಚುನಾವಣೆ ಫಲಿತಾಂಶ: 4,431 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಪಾಟ್ನಾ, ಜೂನ್. 11: ಬಿಹಾರದ ಎಲ್ಲಾ 31 ಪುರಸಭೆಗಳ ಮತ ಎಣಿಕೆ ಭಾನುವಾರ ನಡೆಯಲಿದೆ. ಬೆಳಗ್ಗೆ 8 ರಿಂದ 58 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದೆ. 31 ನಗರ ಸ್ಥಳೀಯ ಸಂಸ್ಥೆಗಳ 806 ವಾರ್ಡ್ ಕೌನ್ಸಿಲರ್‌ಗಳು, ಉಪಮೇಯರ್ ಮತ್ತು ಮೇಯರ್ ಹುದ್ದೆಗಳಿಗೆ ಶುಕ್ರವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ಬಿಹಾರ ಮುನ್ಸಿಪಲ್ ಚುನಾವಣೆಯ ಪ್ರಮುಖ ಅಂಶಗಳು ಇಲ್ಲಿವೆ
1. ಪ್ರಸ್ತುತ 31 ಪುರಸಭೆಗಳಿಗೆ 1,673 ಮತಗಟ್ಟೆಗಳಲ್ಲಿ 806 ಹುದ್ದೆಗಳಿಗೆ ಮತದಾನ ನಡೆದಿದೆ.
2. ಒಟ್ಟು 4,431 ಅಭ್ಯರ್ಥಿಗಳು : 2,197 ಪುರುಷರು ಮತ್ತು 2,234 ಮಹಿಳೆಯರು ಕಣದಲ್ಲಿದ್ದಾರೆ.
3. ಒಂಬತ್ತು ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

4. ಪಾಟ್ನಾ, ಬಕ್ಸರ್, ರೋಹ್ತಾಸ್, ಔರಂಗಾಬಾದ್, ವೈಶಾಲಿ, ನಳಂದಾ, ನಾವಡಾ, ಗೋಪಾಲ್‌ಗಂಜ್, ಮುಜಾಫರ್‌ಪುರ್, ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಶೆಯೋಹರ್, ಸಿತಾಮರ್ಹಿ, ದರ್ಭಾಂಗ, ಮಧುಬನಿ, ಕಿಶನ್‌ಗಂಜ್, ಮುಂಗೇರ್, ಲಖಿಸರೈ, ಸಹರ್ಸಾ, ಜಮುರಿ ಮತ್ತು ಬಂಕಾ ಜಿಲ್ಲೆಗಳಲ್ಲಿ ಮತದಾನ ನಡೆದಿದೆ.
5. ಬಿಹಾರ ರಾಜ್ಯ ಚುನಾವಣಾ ಆಯೋಗವು ಶನಿವಾರ ಮೊದಲ ಬಾರಿಗೆ, ಮತದಾರರ ಗುರುತನ್ನು ದೃಢೀಕರಿಸಲು ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (ಎಫ್ಆರ್ಎಸ್) ಬಳಸಿದೆ ಎಂದು ಹೇಳಿದೆ.
6. 31 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಡಿಸೆಂಬರ್‌ನಲ್ಲಿ ನಡೆದ ಕೊನೆಯ ನಗರ ಚುನಾವಣೆಯಲ್ಲಿ ಚುನಾವಣೆ ನಡೆಯದ 24 ಯುಬಿಬಿಗಳನ್ನು ಒಳಗೊಂಡಿದೆ ಮತ್ತು ಜೂನ್‌ನಲ್ಲಿ ಐದು ವರ್ಷಗಳ ಅವಧಿ ಮುಕ್ತಾಯಗೊಳ್ಳಲಿರುವ ಮತ್ತೊಂದು ಏಳು ಯುಬಿಬಿಗಳನ್ನು ಒಳಗೊಂಡಿದೆ ಎಂದು ಎಸ್‌ಇಸಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಸಹರ್ಸಾ ಮತ್ತು ಮಧುಬನಿ ಮುನ್ಸಿಪಲ್ ಕಾರ್ಪೊರೇಶನ್‌ಗಳು ಸೇರಿವೆ.

7. ಇದಲ್ಲದೆ, ಡಿಸೆಂಬರ್ ನಗರ ಚುನಾವಣೆಯ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡಿದ ನಗರ ಸ್ಥಳೀಯ ಸಂಸ್ಥೆಗಳ ಏಳು ವಾರ್ಡ್‌ಗಳಲ್ಲಿ ಉಪಚುನಾವಣೆ ಕೂಡ ನಡೆಯಲಿದೆ.
8. ಶಾಂತಿಯುತ ವಾತಾವರಣವನ್ನು ಕಲ್ಪಿಸಲು ಮತ್ತು ಚುನಾವಣಾ ಫಲಿತಾಂಶಗಳನ್ನು ವೀಕ್ಷಿಸಲು ಸುಲಭವಾಗಿ ಪ್ರವೇಶಿಸಬಹುದಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ನಾಗರಿಕರಿಗೆ ಒದಗಿಸಲು ಬದ್ಧವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಹೇಳಿದೆ.
9. ರಾಜ್ಯ ಚುನಾವಣಾ ಆಯೋಗ ಪ್ರಕಾರ, ಶಾಂತಿಯುತ ಮತ್ತು ನ್ಯಾಯಸಮ್ಮತವಾದ ಎಣಿಕೆ ಪ್ರಕ್ರಿಯೆಯನ್ನು ನಡೆಸಲು ಸಶಸ್ತ್ರ ಪೊಲೀಸ್ ಅಧಿಕಾರಿಗಳನ್ನು ಮತ ಎಣಿಕೆ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ.
10. ಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆಗಳು ಅಥವಾ ದೂರುಗಳನ್ನು ಪರಿಹರಿಸಲು, ಆಯೋಗವು ಪುರಸಭೆ/ಜಿಲ್ಲೆ/ಆಯೋಗ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ.











Click it and Unblock the Notifications