7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಸಾಧ್ಯತೆ
ನವದೆಹಲಿ, ಮೇ 2: ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಗುಡ್ ನ್ಯೂಸ್ ನೀಡಲಿದ್ದು, ಎರಡು ಸಂಭಾವ್ಯ ಹೆಚ್ಚಳದೊಂದಿಗೆ ನೌಕರರ ವೇತನ ಹೆಚ್ಚಳ ಮಾಡಲು ಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಮಾಧ್ಯಮ ವರದಿಗಳ ಪ್ರಕಾರ ಉದ್ಯೋಗಿಗಳ ವೇತನವು 95,000 ರೂ.ವರೆಗೂ ಹೆಚ್ಚಳವಾಗಬಹುದು. ಜುಲೈನಲ್ಲಿ ನರೇಂದ್ರ ಮೋದಿ ಸರ್ಕಾರವು ತುಟ್ಟಿಭತ್ಯೆಯನ್ನು (ಡಿಎ) 4 ಪ್ರತಿಶತ ಮತ್ತು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಬಹುದು, ಕನಿಷ್ಠ ವೇತನ ಹೆಚ್ಚಳದ ದೀರ್ಘಕಾಲದ ಬೇಡಿಕೆಯನ್ನು ಪೂರೈಸುತ್ತದೆ ಎನ್ನಲಾಗುತ್ತಿದೆ.

ಪ್ರಸ್ತುತ ಕೇಂದ್ರ ನೌಕರರ ಮೂಲ ವೇತನ 18 ಸಾವಿರ ರೂ.ಗಳಾಗಿದ್ದು, ಫಿಟ್‌ಮೆಂಟ್ ಅಂಶದಲ್ಲಿ ತಿದ್ದುಪಡಿ ತಂದ ನಂತರ ಮೂಲ ವೇತನ ತಿಂಗಳಿಗೆ 21 ಸಾವಿರದಿಂದ 26 ಸಾವಿರ ರೂ. ಸಿಗಬಹುದು. ಫಿಟ್‌ಮೆಂಟ್ ಅಂಶದಲ್ಲಿನ ಹೆಚ್ಚಳವು ಉದ್ಯೋಗಿಗಳಿಗೆ ರೂ 8,000 ವರೆಗಿನ ಮಾಸಿಕ ಪ್ರಯೋಜನವನ್ನು ಒದಗಿಸಬಹುದು. ಸರ್ಕಾರ ಫಿಟ್‌ಮೆಂಟ್ ಅಂಶವನ್ನು 3.68 ಪಟ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಕೇಂದ್ರ ನೌಕರರಿಗೆ ಶೇ.2.57ರಷ್ಟು ಫಿಟ್‌ಮೆಂಟ್ ಅಂಶವನ್ನು ಲೆಕ್ಕಹಾಕಿ ವೇತನ ನೀಡಲಾಗುತ್ತಿದ್ದು, ಇದನ್ನು 3.68 ಪಟ್ಟು ಹೆಚ್ಚಿಸಬೇಕು ಎಂಬುದು ನೌಕರರ ಬೇಡಿಕೆಯಾಗಿದೆ. ಫಿಟ್‌ಮೆಂಟ್ ಅಂಶವನ್ನು 3 ಪಟ್ಟು ಹೆಚ್ಚಿಸಿದರೆ, ನೌಕರರ ಮೂಲ ವೇತನವನ್ನು ತಿಂಗಳಿಗೆ ರೂ.35 ಸಾವಿರಕ್ಕೆ ಹೆಚ್ಚಿಸಬಹುದು. 2016 ರಲ್ಲಿ ಏಳನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ಫಿಟ್‌ಮೆಂಟ್ ಅಂಶವನ್ನು ಕೊನೆಯದಾಗಿ ಹೆಚ್ಚಿಸಲಾಯಿತು. ಈ ಹಿಂದೆ ನೌಕರರ ಮೂಲ ವೇತನ 6000 ರೂ.ಗಳಷ್ಟಿದ್ದು, ತಿಂಗಳಿಗೆ 18,000 ರೂ. ಈಗ ಮತ್ತೆ ಹೆಚ್ಚಿಸಬೇಕು ಎಂಬುದು ಆಗ್ರಹವಾಗಿದೆ.

ಸಂಭಾವ್ಯ ವೇತನ ಹೆಚ್ಚಳದ ಕುರಿತು ಕೇಂದ್ರ ಸರ್ಕಾರ ಇನ್ನೂ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ, ಮಾಧ್ಯಮ ವರದಿಗಳು ಶೀಘ್ರದಲ್ಲೇ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ಸೂಚಿಸುತ್ತವೆ. ಸರ್ಕಾರ ಈ ಕ್ರಮ ಕೈಗೊಂಡರೆ ನೌಕರರಿಗೆ ದೊಡ್ಡ ಉತ್ತೇಜನ ದೊರೆಯಲಿದ್ದು, ಅವರ ವೇತನವೂ ಗಣನೀಯವಾಗಿ ಏರಿಕೆಯಾಗಲಿದೆ.












Click it and Unblock the Notifications