ಉತ್ತರ ಪ್ರದೇಶ: ಮದುವೆಯಲ್ಲಿ ರಸಗುಲ್ಲಾ ತಿಂದು ಅಸ್ವಸ್ಥರಾಗಿ 70 ಮಂದಿ ಆಸ್ಪತ್ರೆಗೆ ದಾಖಲು
ಉತ್ತರ ಪ್ರದೇಶ, ಮೇ. 24: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ದೊಡ್ಡ ಘಟನೆಯೊಂದು ವರದಿಯಾಗಿದ್ದು, ಮದುವೆ ಸಮಾರಂಭದಲ್ಲಿ ರಸಗುಲ್ಲಾ ತಿಂದ ಸುಮಾರು 70 ಮಂದಿ ಅಸ್ವಸ್ಥರಾಗಿದ್ದಾರೆ. ಮದುವೆಯ ಔತಣಕೂಟವೊಂದರಲ್ಲಿ ಆಹಾರ ಸೇವಿಸಿದ ನಂತರ ಹಲವಾರು ಮಕ್ಕಳು ಸೇರಿದಂತೆ 70 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
70 ಮಂದಿ ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದ್ದು, ಇನ್ನೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. "ಯುಪಿಯ ಕನ್ನೌಜ್‌ನ ಹಳ್ಳಿಯೊಂದರಲ್ಲಿ ಮದುವೆಯ ಔತಣಕೂಟವೊಂದರಲ್ಲಿ ಆಹಾರ ಸೇವಿಸಿದ ನಂತರ ಹಲವಾರು ಮಕ್ಕಳು ಸೇರಿದಂತೆ ಸುಮಾರು 70 ಜನರನ್ನು ಆಹಾರ ವಿಷಪೂರಿತ ಶಂಕಿತ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಧರ್‌ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಗಿಗಳು ಊಟ ಮಾಡಿದ್ದರು. ಆಹಾರವನ್ನು ಸೇವಿಸಿದ ಸುಮಾರು 200 ಜನರಲ್ಲಿ, ಸುಮಾರು 70 ಜನರು ಅಲ್ಲಿ ಬಡಿಸಿದ 'ರಸಗುಲ್ಲಾ' ( ತಿಂದ ನಂತರ ವಾಂತಿ ಮತ್ತು ಭೇದಿ ಆರಂಭವಾಗಿದೆ ದೂರಿದ್ದಾರೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗರಿಮಾ ಸಿಂಗ್ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ದಾಖಲಾದ ಅಸ್ವಸ್ಥರಲ್ಲಿ ಅರ್ಜೂ (1), ಯೂಸುಫ್ (2), ಶಿಫಾ (4), ಅಸ್ರಾ (5), ಸಾಜಿಯಾ (7), ಇರ್ಫಾನ್ ಖಾನ್ (48), ಸುಲ್ತಾನ್ (52), ಮತ್ತು ರಿಯಾಜುದ್ದೀನ್ (55) ಎಂಬುವವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಅವರನ್ನು ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹದಗೆಟ್ಟಿದೆ ಎಂದು ಗರಿಮಾ ಸಿಂಗ್ ಹೇಳಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶಕ್ತಿ ಬಸು ಮಾತನಾಡಿ, "ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ ರೋಗಿಗಳ ಸ್ಥಿತಿ ಸ್ಥಿರವಾಗಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಔತಣಕ್ಕೆ ಬಂದಿದ್ದ ಬಹುತೇಕ ಎಲ್ಲರೂ ರಸಗುಲ್ಲಾ ತಿಂದಿದ್ದು, ಹಲವರು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮದ ನಿವಾಸಿ ಮುನ್ನಾ ಹೇಳಿದ್ದಾರೆ" ಎಂದು ತಿಳಿಸಿದ್ದಾರೆ.












Click it and Unblock the Notifications