20 ರೂಪಾಯಿಯ ಟಿಫಿನ್‌ನಿಂದ 2.5 ಕೋಟಿ ರೂಪಾಯಿ ಮೌಲ್ಯದ ಸಾಮ್ರಾಜ್ಯ :ಹೊಟೇಲ್‌ ಬ್ಯುಸಿನೆಸ್‌ನಲ್ಲಿ 65 ವರ್ಷದ ಮಹಿಳೆಯ ಸಾಧನೆ

ಯಾವುದೇ ವ್ಯವಹಾರಕ್ಕೆ ಕೈ ಹಾಕಬೇಕಾದರೂ ಅದರಲ್ಲಿ ಅನುಭವ, ತರಬೇತಿ, ಹಿನ್ನೆಲೆ ಇರಬೇಕು ಎಂದು ಹೇಳುವುದು ಸಾಮಾನ್ಯ. ಆದರೆ ಎಲ್ಲಾ ಸಂದರ್ಭಗಳಲ್ಲಿ ಇದು ನಿಜ ಅಲ್ಲ. ಪಾಟ್ನಾದ ದೇವ್ನಿ ದೇವಿ ಎಂಬ 65 ವರ್ಷದ ಮಹಿಳೆ ಇದನ್ನು ಸಾಬೀತು ಪಡಿಸಿದ್ದಾರೆ. ಹಾಸ್ಟೆಲ್‌ನ ಊಟ ತಿನ್ನುವುದಕ್ಕೆ ಆಗದೆ ಕಷ್ಟಪಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿಗಾಗಿ ಮನೆ ಊಟವನ್ನು ತಯಾರು ಮಾಡಿ ಕೊಡುವ ಮೂಲಕ ಶುರುವಾದ ಇವರ ಜರ್ನಿ ಇಂದಿಗೆ ದೊಡ್ಡ ವ್ಯವಹಾರವಾಗಿ ಬೆಳೆದಿದೆ.

ಮನೆ ಊಟದಿಂದ ಆರಂಭ

ಆ ವೈದ್ಯಕೀಯ ವಿದ್ಯಾರ್ಥಿನಿಗೆ ಊಟ ನೀಡುವಾಗ ತಾನು ಮುಂದೊಂದು ದಿನ ಇದೇ ಬ್ಯುಸಿನೆಸ್‌ನಲ್ಲಿ ದೊಡ್ಡ ಹೆಸರು ಮಾಡಬೇಕು ಎನ್ನುವ ಕಲ್ಪನೆಯೂ ಅವರಲ್ಲಿರಲಿಲ್ಲ. ಆದರೆ ಇವರು ನೀಡುತ್ತಿದ್ದ ಮನೆ ಉಟದ ಬಗ್ಗೆ ಎಲ್ಲಾ ಕಡೆ ಸುದ್ದಿ ಹರಡಿತು. ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಇವರ ಬಳಿ ಊಟಕ್ಕಾಗಿ ಬರುತ್ತಿದ್ದರು. ಕೇವಲ 20 ರೂ.ಗೆ ಹೊಟ್ಟೆ ತುಂಬಾ ರುಚಿ ಶುಚಿಯಾದ ಊಟ ಅವರಿಗೆ ಸಿಗುತ್ತಿತ್ತು.ಮುಂದೆ ಇದು ಸಣ್ಣ ಟಿಫಿನ್ ಸೇವೆಯಾಗಿ ಪ್ರಾರಂಭವಾಯಿತು. ಇದೇ ನಿಧಾನವಾಗಿ ಅಮ್ಮಾ ಕಿಚನ್ ಆಗಿ ಬದಲಾಯಿತು. ಈಗ ಸುಮಾರು 2.5 ಕೋಟಿ ರೂ. ಮೌಲ್ಯದ ಪೂರ್ಣ ಪ್ರಮಾಣದ ಫುಡ್‌ ಬ್ಯುಸಿನೆಸ್‌ ಇದಾಗಿದೆ.

65 Year Old Devni Devi Turned Tiffin Service Into 2 Crore Food Empire Took Business Into Next level

ಅಂದ ಹಾಗೆ ಇವರ ಈ ಬ್ಯುಸಿನೆಸ್‌ ಪ್ರಯಾಣವು ಸುಲಭವಾಗಿರಲಿಲ್ಲ. ಮೊದಲಿಗೆ ತನ್ನದೇ ಆದ ಕೆಲವು ವ್ಯತ್ಯಾಸಗಳು ಎದುರಾಯಿತು. ಆದರೆ ಅವರು ಹಿಂದೆ ಸರಿಯಲಿಲ್ಲ. ಕೆಲಸ ಮುಂದುವರೆಸಿಕೊಂಡು ಹೋದರು.

ಗಂಡನ ಮನೆಯೇ ತರಬೇತಿ ಕೇಂದ್ರ

ಅಮ್ಮ ಕಿಚನ್ ಶುರು ಮಾಡುವುದಕ್ಕೆ ಮುನ್ನವೇ ದೇವ್ನಿ ದೇವಿಗೆ ಅಡುಗೆಯ ಅನುಭವವಿತ್ತು. 16 ನೇ ವಯಸ್ಸಿನಲ್ಲಿ ಮದುವೆಯಾಗಿ ಗಂಡನ ಮನೆಗೆ ಬಂದಾಗ 25 ಜನರ ಕೂಡು ಕುಟುಂಬಕ್ಕೆ ಅಡುಗೆ ಮಾಡಿ ಹಾಕುತ್ತಿದ್ದರು. ಆ ಕುಟುಂಬದ ಜೊತೆಗೆ ವರ್ಷಗಳ ಕಾಲ ಕಳೆದರು. ಮನೆಯ ಅಡುಗೆ ಮನೆಯಲ್ಲಿ ಮನೆಯವರಿಗಾಗಿ ಮಾಡುತ್ತಿದ್ದ ಅಡುಗೆ ಅವರಿಗೆ ದೊಡ್ಡ ಪ್ರಮಾಣದ ಅಡುಗೆಗೆ ತರಬೇತಿ ನೀಡಿತು ಎಂದರೆ ತಪ್ಪಾಗುವುದಿಲ್ಲ.

2002ರಲ್ಲಿ ಅವರು ಮಕ್ಕಳ ಶಿಕ್ಷಣಕ್ಕಾಗಿ ಪಾಟ್ನಾಕ್ಕೆ ಹೋಗುತ್ತಾರೆ. ಅವರ ಮನೆಯವರು ದಿನಾ ಹೊರಗೆ ಹೋದಾಗ ದೇವ್ನಿ ದೇವಿಗೆ ಮನೆಯಲ್ಲಿ ಏನೂ ಕೆಲಸ ಇರುತ್ತಿರಲಿಲ್ಲ. ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (PMCH) ಓದುತ್ತಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಊಟದ ಡಬ್ಬಿಯಲ್ಲಿ ಕಳಪೆ ಗುಣಮಟ್ಟದ ಆಹಾರ ಇರುವುದನ್ನು ಅವರು ಒಂದು ದಿನ ಗಮನಿಸುತ್ತಾರೆ.

ಪ್ಲೇಟ್‌ಗೆ 20 ರೂ.ಯಂತೆ ಊಟ

ನಂತರ ಅವರು ಮನೆಯಲ್ಲಿಯೇ ಸರಳವಾದ, ಮನೆ ಶೈಲಿಯ ಊಟವನ್ನು ತಯಾರು ಮಾಡಲು ಶುರು ಮಾಡುತ್ತಾರೆ. ಪ್ಲೇಟ್‌ಗೆ 20 ರೂ.ಯಂತೆ ಸೇಲ್‌ ಮಾಡಲು ಆರಂಭಿಸುತ್ತಾರೆ. ಅವರ ಮೊದಲ ಗ್ರಾಹಕ ಸೌರಭ್ ಎಂಬ ವೈದ್ಯಕೀಯ ವಿದ್ಯಾರ್ಥಿ. ಇದು ಮುಂದೆ ಪಿಎಂಸಿಎಚ್ ವಿದ್ಯಾರ್ಥಿಗಳಲ್ಲಿ ಈ ಸುದ್ದಿ ಹರಡಿ ಸಣ್ಣ ಅಡುಗೆಮನೆಯು ಶೀಘ್ರದಲ್ಲೇ ಮೆಸ್‌ ಅಗಿ ಪರಿವರ್ತನೆಯಾಯಿತು.

ಗರ್ಲ್ಸ್ ಹಾಸ್ಟೆಲ್ ಅರಂಭ

ಆದರೆ ಈ ವ್ಯವಹಾರವನ್ನು ಮನೆಯಲ್ಲಿ ಎಲ್ಲರೂ ಒಪ್ಪಲಿಲ್ಲ. ಆರಂಭದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ವರದಿಯ ಪ್ರಕಾರ, ಅವರು ಈ ಕೆಲಸ ಮಾಡುವುದನ್ನು ಶುರು ಮಾಡಿದರು ಎನ್ನುವ ಕಾರಣಕ್ಕೆ ಅವರ ಪತಿ ಆರು ತಿಂಗಳು ಮಾತು ಬಿಟ್ಟಿದ್ದರಂತೆ. ಆದರೂ, ಅವರು ಹಠ ಬಿಡಲಿಲ್ಲ. ಗಳಿಕೆ ಹೆಚ್ಚಾದಂತೆ, ಎಂಟು ರಿಕ್ಷಾಗಳನ್ನು ಖರೀದಿಸುತ್ತಾರೆ. 2009 ರಲ್ಲಿ, ಅವರು ತಮ್ಮ ಮೊಮ್ಮಗಳ ಹೆಸರಿನ ಸಮೃದ್ಧಿ ಗರ್ಲ್ಸ್ ಹಾಸ್ಟೆಲ್ ಅನ್ನು ತೆರೆದರು. ಅವರ ಅನೇಕ ನಿಯಮಿತ ಟಿಫಿನ್ ಗ್ರಾಹಕರು ಅವರ ಮೊದಲ ಹಾಸ್ಟೆಲ್‌ಗೆ ಸೇರುತ್ತಾರೆ.

ಕೋವಿಡ್‌ ವೇಳೆ ದೊಡ್ಡ ನಷ್ಟ

ನಂತರ COVID-19 ಸಾಂಕ್ರಾಮಿಕ ರೋಗ ದೇಶಾದ್ಯಂತ ಅಪ್ಪಳಿಸುತ್ತದೆ. ಅಲ್ಲಿಗೆ ಎಲ್ಲವೂ ಮುಗಿದೇ ಹೋಯಿತು ಎನ್ನುವ ಹಾಗಾಗುತ್ತದೆ. ಹಾಸ್ಟೆಲ್‌ಗಳು ಮುಚ್ಚಿಹೋದವು, ಆದಾಯ ನಿಂತು ಹೋಗುತ್ತದೆ. ಭವಿಷ್ಯವು ಅನಿಶ್ಚಿತವಾಗಿ ಕಾಣುತ್ತಿತ್ತು. ಆದರೆ ದೇವ್ನಿ ದೇವಿ ಅಡುಗೆ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಬಿಕ್ಕಟ್ಟಿನ ಸಮಯದಲ್ಲಿ ವೈದ್ಯರ ಹಾಸ್ಟೆಲ್‌ಗಳಿಗೆ ಟಿಫಿನ್ ತಲುಪಿಸುವ ಕಾರ್ಯವನ್ನು ಮುಂದುವರೆಸುತ್ಥಾರೆ. ಅವರು ಸ್ವತಃ COVID-19 ಸೋಂಕಿಗೆ ಒಳಗಾದಾಗ, ಅವರು ವರ್ಷಗಳಿಂದ ಆಹಾರ ನೀಡುತ್ತಿದ್ದ ಅದೇ ವಿದ್ಯಾರ್ಥಿಗಳು PMCH ನಲ್ಲಿ ಅವರನ್ನು ನೋಡಿಕೊಳ್ಳಲು ಮುಂದಾಗುತ್ತಾರೆ.

ಅಮ್ಮ ಕಿಚನ್‌ನ ಡಿಜಿಟಲ್ ಆವೃತ್ತಿ

2022 ರಲ್ಲಿ ಅವರ ಮಗ ವ್ಯವಹಾರವನ್ನು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಅಲ್ಲಿಗೆ ಅವರ ಬ್ಯಸಿನೆಸ್‌ಗೆ ಹೊಸ ಟ್ವಿಸ್ಟ್‌ ಸಿಗುತ್ತದೆ. ಆ ನಿರ್ಧಾರವು ಅಮ್ಮ ಕಿಚನ್‌ನ ಡಿಜಿಟಲ್ ಆವೃತ್ತಿಗೆ ಜನ್ಮ ನೀಡುತ್ತದೆ. ಆರ್ಡರ್‌ಗಳು ಶೀಘ್ರದಲ್ಲೇ ಹೆಚ್ಚಾದವು. ನಂತರ ಎರಡು ಡೈನ್-ಇನ್ ಔಟ್‌ಲೆಟ್‌ಗಳು ತಲೆ ಎತ್ತುತ್ತವೆ. ಊಟದ ಬೆಲೆ 100 ರಿಂದ 300 ರವರೆಗೆ ಇತ್ತು. ವ್ಯವಹಾರವು ಬಹಳ ಬೇಗನೆ ಬೆಳೆಯುತ್ತದೆ. ಕನಿಷ್ಠ 15,000 ಮಾಸಿಕ ವೇತನದೊಂದಿಗೆ 30 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಾರೆ. ಅವರ ಹಿರಿಯ ಮಗ ಜೈಶಂಕರ್, ಒಮ್ಮೆ ಅವರ ಯೋಜನೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುತ್ತರಾದರೂ, ಅಂತಿಮವಾಗಿ ಬೆಳೆಯುತ್ತಿರುವ ವ್ಯವಹಾರವನ್ನು ನಿರ್ವಹಿಸಲು ಸಹಾಯ ಮಾಡುವುದಕ್ಕಾಗಿ ತನ್ನ ಸ್ವಂತ ಕೆಲಸವನ್ನು ಬಿಡುತ್ತಾರೆ.

ಇವತ್ತಿಗೆ ಅಮ್ಮ ಕಿಚನ್ ಪಾಟ್ನಾದ ಮನೆ ಶೈಲಿಯ ಆಹಾರಕ್ಕಾಗಿ ಅತ್ಯಂತ ಹೆಸರುವಾಸಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+