ಪ್ರವಾಹ ಆಯ್ತು, ಈಗ ಇಲಿ ಜ್ವರದ ಭೀತಿ: ಕೇರಳದಲ್ಲಿ 41 ಸಾವು
Recommended Video

ಕೊಚ್ಚಿ, ಸೆಪ್ಟೆಂಬರ್ 3: ನಿಫಾಹ್ ವೈರಸ್, ಪ್ರವಾಹದ ಸಂಕಟಗಳ ಬಳಿಕ ಕೇರಳ ಮತ್ತೊಂದು ಭೀಕರ ದಾಳಿಗೆ ಸಿಲುಕಿದೆ.
ಶತಮಾನದ ಅತ್ಯಂತ ಭೀಕರ ಪ್ರವಾಹದ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವ ವೇಳೆಯಲ್ಲಿಯೇ ರಾಜ್ಯದ ಅನೇಕ ಕಡೆ ಇಲಿ ಜ್ವರದ ಭೀತಿ ಎದುರಾಗಿದೆ.
ನೀರಿನಿಂದ ಹರಡುವ ಇಲಿ ಜ್ವರಕ್ಕೆ ಈಗಾಗಲೇ 41 ಮಂದಿ ಬಲಿಯಾಗಿದ್ದು, ಸುಮಾರು 200 ಮಂದಿಯಲ್ಲಿ ಜ್ವರ ಪತ್ತೆಯಾಗಿದೆ.
ಒಟ್ಟಾರೆ ಇಲಿ ಜ್ವರದಿಂದ 54 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, 41 ಮಂದಿಯ ಸಾವು ಖಚಿತವಾಗಿದೆ.
ಜನರು ಈ ಬಗ್ಗೆ ಕಳವಳಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮವಾಗಿ ಆಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಕೋಯಿಕ್ಕೋಡ್‌ನಲ್ಲಿ ಅತಿ ಹೆಚ್ಚಿನ ಸುಮಾರು 20 ಪ್ರಕರಣಗಳು ವರದಿಯಾಗಿವೆ. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿಶೇಷ ಪ್ರತ್ಯೇಕ ಘಟಕವನ್ನು ಆರಂಭಿಸಲಾಗಿದೆ.
ಕುಡುಂಬಶ್ರೀ ಮಿಷನ್ ಎಂಬ ಎನ್‌ಜಿಓ ಒಂದರ ಯೋಜನೆಯಡಿ ಪ್ರವಾಹ ನಂತರ ಸ್ವಚ್ಛತೆಯ ಕಾರ್ಯದಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ಸುರೇಶ್ ಮತ್ತು ಕುಮಾರಿ ಎಂಬ ದಿನಗೂಲಿ ನೌಕರರು ಸಹ ಇಲಿಜ್ವರಕ್ಕೆ ಬಲಿಯಾಗಿದ್ದಾರೆ. ಅದೇ ರೀತಿ ಇನ್ನೂ ಅನೇಕರು ಜ್ವರಕ್ಕೆ ತುತ್ತಾಗಿದ್ದಾರೆ.












Click it and Unblock the Notifications