ರೈಲಿನಲ್ಲಿ ಪ್ರಯಾಣಿಸಿದ್ದ ನಾಲ್ವರಿಗೆ ಕೊರೊನಾ ಸೋಂಕು

ನವದೆಹಲಿ, ಮಾರ್ಚ್ 21 : ಭಾರತೀಯ ರೈಲ್ವೆ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ರೈಲಿನಲ್ಲಿ ಪ್ರಯಾಣಿಸಿದ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಾರ್ಚ್ 16ರಂದು Godan express ರೈಲಿನಲ್ಲಿ ಪ್ರಯಾಣಿಸಿದ್ದ ನಾಲ್ವರು ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿದೆ. ಮುಂಬೈ-ಜಬಲ್ಪುರ್ ನಡುವಿನ ರೈಲು ನಂಬರ್ 11055ರಲ್ಲಿ ನಾಲ್ವರು ಪ್ರಯಾಣಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಈ ನಾಲ್ವರೂ ದುಬೈನಿಂದ ಭಾರತಕ್ಕೆ ಕಳೆದ ವಾರ ಆಗಮಿಸಿದ್ದರು. ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರೈಲ್ವೆ ಇಲಾಖೆಗೂ ಮಾಹಿತಿ ಸಿಕ್ಕಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

4 Passengers Travelled On Godan Express Tested Positive For Covid19

ಕೊರೊನಾ ಸೋಂಕು ಹರಡುವುದನ್ನು ತಡೆಯಲು ರೈಲ್ವೆ ಹಲವು ಕ್ರಮಗಳನ್ನು ಕೈಗೊಂಡಿದೆ. ಮಾರ್ಚ್ 22ರ ಭಾನುವಾರ 'ಜನತಾ ಕರ್ಫ್ಯೂ'ಗೆ ಕರೆ ನೀಡಲಾಗಿದೆ. ಅಂದು ದೇಶಾದ್ಯಂತ ರೈಲು ಸೇವೆ ಸ್ಥಗಿತಗೊಳ್ಳಲಿದೆ. ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ರಾತ್ರಿ 10 ಗಂಟೆ ತನಕ ರೈಲು ಸೇವೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆ ಮಾಡಲು ದೇಶದ 250 ರೈಲ್ವೆ ನಿಲ್ದಾಣದಲ್ಲಿ ರೂ. 10 ರೂ. ಇದ್ದ ಫ್ಲಾಟ್‌ ಫಾರಂ ಟಿಕೆಟ್ ದರವನ್ನು 50 ರೂ. ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಹೆಚ್ಚು ಜನರು ನಿಲ್ದಾಣಕ್ಕೆ ಬರದಂತೆ ತಡೆಯಲಾಗಿದೆ.

ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ವಿವಿಧ ರೈಲ್ವೆ ವಲಯಗಳು ದೂರದ ನಗರಗಳಿಗೆ ಸಂಚಾರ ನಡೆಸುವ ರೈಲುಗಳನ್ನು ಮಾರ್ಚ್ 31ರ ತನಕ ಸ್ಥಗಿತಗೊಳಿಸಿವೆ. ಇದರಿಂದಾಗಿ ರೈಲ್ವೆ ಇಲಾಖೆಗೆ ಅಪಾರವಾದ ನಷ್ಟ ಉಂಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+