ಛತ್ತೀಸ್ ಗಢದಲ್ಲಿ ಅಪರೂಪದ ಬೆಳವಣಿಗೆ, 33 ನಕ್ಸಲರ ಶರಣಾಗತಿ
ಬಸ್ತಾರ್ ಐಜಿಪಿ ಸುಂದರ್ ರಾಜ್ ಹಾಗೂ ಜಿಲ್ಲಾಧಿಕಾರಿ ಅಮಿತ್ ಕಟಾರಿಯಾ ಮುಂದೆ 33 ನಕ್ಸಲರು ಇಂದು ಬೆಳಿಗ್ಗೆ ಶರಣಾಗಿದ್ದು, ಇವರಲ್ಲಿ 29 ಪುರುಷರು 4 ಮಹಿಳೆಯರು ಸೇರಿದ್ದಾರೆ.
ಬೆಂಗಳೂರು, ಮಾರ್ಚ್ 31: ಅಪರೂಪದ ಬೆಳವಣಿಯೊಂದರಲ್ಲಿ 33 ನಕ್ಸಲರು ಛತ್ತೀಸ್ ಘಡದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಬಸ್ತಾರ್ ಐಜಿಪಿ ಸುಂದರ್ ರಾಜ್ ಹಾಗೂ ಜಿಲ್ಲಾಧಿಕಾರಿ ಅಮಿತ್ ಕಟಾರಿಯಾ ಮುಂದೆ 33 ನಕ್ಸಲರು ಇಂದು ಬೆಳಿಗ್ಗೆ ಶರಣಾಗಿದ್ದು, ಇವರಲ್ಲಿ 29 ಪುರುಷರು 4 ಮಹಿಳೆಯರು ಸೇರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೊಲೀಸರ ಮುಂದೆ ನಕ್ಸಲರು ಶರಣಾಗುತ್ತಿರುವ ದೊಡ್ಡ ನಿದರ್ಶನ ಇದಾಗಿದೆ. [ಹಿಮಾಚಲ ಪ್ರದೇಶ ಸಿಎಂಗೆ 'ಸಿಬಿಐ' ಉರುಳು]

ಶರಣಾಗತರಾದವರಲ್ಲಿ ನಾಲ್ಕು ಜನ 'ಮೋಸ್ಟ್ ವಾಂಟೆಡ್' ಲಿಸ್ಲಿನಲ್ಲಿದ್ದವರಾಗಿದ್ದು ಇವರ ತಲೆಗೆ ತಲಾ 1 ಲಕ್ಷ ಬಹುಮಾನವನ್ನು ಸರಕಾರ ಘೋಷಿಸಿತ್ತು.
ಶರಣಾಗತರಾದವರಲ್ಲಿ 23 ಜನ ಕಂಗೇರ್ ಕಣಿವೆಯಲ್ಲಿ ಭೂಗತರಾಗಿದ್ದರು. ಈ ಭಾಗದಲ್ಲಿ ಹಲವು ಕುಕೃತ್ಯಗಳನ್ನು ನಡೆಸಿ ಈ ತಂಡ ಪೊಲೀಸರ ನಿದ್ದೆಗೆಡಿಸಿತ್ತು. ಇನ್ನು ಉಳಿದ 8 ಜನ ಬರ್ಸೂರ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. [ಗೋಹತ್ಯೆ ಮಾಡಿದರೆ ಜೀವಾವಧಿ ಶಿಕ್ಷೆ: ಗುಜರಾತ್ ಸರ್ಕಾರ]
ಒಟ್ಟಾರೆ 33 ನಕ್ಸಲರು ಪೊಲೀಸರ ಮುಂದೆ ಶರಣಾಗಿರುವುದು ಪೊಲೀಸರ ಕಾರ್ಯಾಚರಣೆ ಮತ್ತು ಮನವೊಲಿಕೆಗೆ ಸಿಕ್ಕ ಯಶಸ್ಸು ಎಂದೇ ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications