ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದಿಂದ 25 ನಗರಗಳಿಗೆ ಉಚಿತ ವೈ-ಫೈ

|
Google Oneindia Kannada News

ನವದೆಹಲಿ, ಡಿ, 17: 2015ರ ಜೂನ್ ಒಳಗೆ ದೇಶದ 25 ನಗರಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ವೈ-ಫೈ ಒದಗಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯುಳ್ಳ ನಗರಗಳನ್ನು ಗುರುತಿಸಿ ಸೌಲಭ್ಯ ನೀಡಲಾಗುವುದು. ಅಲ್ಲದೇ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಂದರೆ ತಾಜ್ ಮಹಲ್, ಕೆಂಪುಕೋಟೆ, ಕೋನಾರ್ಕ ಸೂರ್ಯ ದೇವಾಲಯದಲ್ಲಿ ಉಚಿತ ವೈ-ಫೈ ನೀಡಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.[ನಾಲ್ಕು ರೈಲುಗಳ ಪ್ರಯಾಣಿಕರಿಗೆ ವೈಫೈ ಭಾಗ್ಯ]

wi fi

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯಕ್ರಮದ ಅನುಷ್ಠಾನಕ್ಕೆ 3 ತಿಂಗಳ ಕಾಲಾವಕಾಶ ಪಡೆದುಕೊಂಡಿದೆ. ನಗರಾಭಿವೃದ್ಧಿ ಇಲಾಖೆ ಮತ್ತು ಟೆಲಿಕಾಂ ಇಲಾಖೆಗಳು ಜತೆಯಾಗಿ ಯೋಜನೆ ಕೈಗೆತ್ತಿಕೊಂಡಿವೆ.[ಒಂದು ವರ್ಷದಲ್ಲಿ ಬೆಂಗಳೂರು ವೈಫೈ ಸಿಟಿ]

ಇದು ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಲಿದೆ. ವಿದೇಶಿಗರನ್ನು ಹೆಚ್ಚೆಚ್ಚು ಭಾರತದತ್ತ ಸೆಳೆಯಲು ಇಂಥ ಕ್ರಮಗಳು ನೆರವಾಗುತ್ತವೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

English summary
Union government is planning for a speedy rollout of Wi-Fi services across top 25 Indian cities by June 2015. An official source, disclosing the information to the leading news agency, had said, "Government has plans to empanel 3-4 Wi-Fi service providers for speedy roll out of Wi-Fi hotspots across top 25 cities in the country by June 2015. The services will be available at select public places within these cities."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X