Kargil Vijay Diwas 2023:- ದ್ರಾಸ್ ಯುದ್ಧ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್!
ದೆಹಲಿ ಜುಲೈ 26: ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. 1999ರಂದು ಈ ದಿನ ಪಾಕಿಸ್ತಾನದೊಂದಿಗೆ ಭಾರತ ವಿಜಯ ಸಾಧಿಸಿದ ದಿನವಾಗಿದೆ. ಇಂದು 24ನೇ ಕಾರ್ಗಿಲ್ ಯುದ್ಧ ವಿಜಯ ದಿನವಾದ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್ ದ್ರಾಸ್ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.
1999 ರಲ್ಲಿ ಲಡಾಖ್ ಗಡಿಯಲ್ಲಿರುವ ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸಿತು. ಇದರ ವಿರುದ್ಧ ನಮ್ಮ ಸೈನಿಕರು ವೀರಾವೇಶದ ಯುದ್ಧ ನಡೆಸಿದರು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನೆನಪಿಗಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ.

ದೇಶದ ಹಲವೆಡೆ ಇಂದು ಕಾರ್ಗಿಲ್ ವಿಜಯ ದಿವಸ್ (ಕಾರ್ಗಿಲ್ ವಿಜಯ್ ದಿವಸ್) ಆಚರಿಸಲಾಯಿತು. ಲಡಾಕ್‌ನ ದ್ರಾಸ್ ಯುದ್ಧ ಸ್ಮಾರಕದಲ್ಲಿ ನಮ್ಮ ಕಾರ್ಗಿಲ್ ಯುದ್ಧ ವೀರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಅನಿಲ್ ಚೌಹಾಣ್ ಮತ್ತಿತರರು ದ್ರಾಸ್ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ದ್ರಾಸ್ ಯುದ್ಧ ಸ್ಮಾರಕದ ಮೇಲೆ ಫೈಟರ್ ಜೆಟ್‌ಗಳು ಹಾರಿ, ಬಾನಂಗಳದಿಂದ ಹೂವುಗಳನ್ನು ಸುರಿಸಿದವು. ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಕಾರ್ಗಿಲ್ ಯುದ್ಧ ವೀರರನ್ನು ಸ್ಮರಿಸಿಕೊಂಡಿದ್ದಾರೆ. ಸೇನಾ ಕಮಾಂಡರ್ ಮನೋಜ್ ಪಾಂಡೆ, ನೌಕಾಪಡೆ ಕಮಾಂಡರ್ ಹರಿಕುಮಾರ್ ಮತ್ತಿತರರು ದ್ರಾಸ್ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ದ್ರಾಸ್ ಯುದ್ಧ ಸ್ಮಾರಕದಲ್ಲಿ ದೀಪ ಬೆಳಗಿಸಿ ನಮನ ಸಲ್ಲಿಸಲಾಯಿತು.

ಕಾರ್ಗಿಲ್ ಯುದ್ಧ: ಕಾರ್ಗಿಲ್ ಯುದ್ಧ ಮೇ 3, 1999 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಾರಂಭವಾಯಿತು. ಈ ಯುದ್ಧ ಜುಲೈ 26 ರವರೆಗೆ ನಡೆಯಿತು. ಭಾರತೀಯ ಸೇನೆಯು ಆಪರೇಷನ್ ವಿಜಯ್ ಹೆಸರಿನಲ್ಲಿ ತನ್ನ ಪ್ರತೀಕಾರದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ 527 ವೀರರರು ವೀರ ಮರಣವನ್ನು ಅಪ್ಪಿದ್ದಾರೆ.
ಅಂದಹಾಗೆ ಕಾಶ್ಮೀರದಲ್ಲಿರುವ ಕಾರ್ಗಿಲ್ ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿದೆ. ಲೇಹ್ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್ ಮೂಲಕ ಹಾದು ಹೋಗುತ್ತದೆ. ಈ ಪ್ರದೇಶದಲ್ಲಿ ಇರುವ ಏಕೈಕ ಹೆದ್ದಾರಿ ಇದಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್‌ಗೂ ಸಂಪರ್ಕ ಕಲ್ಪಿಸುತ್ತದೆ ಈ ಹೆದ್ದಾರಿ.
ಈ ಯುದ್ಧದಲ್ಲಿ 1363 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದ ಸೇನೆಯ 700 ಸೈನಿಕರು ಕೊಲ್ಲಲ್ಪಟ್ಟರು. ತಮಿಳುನಾಡಿನ ಹೀರೋ ಮೇಜರ್ ಶರವಣನ್ ಸೇರಿದಂತೆ ಹುತಾತ್ಮ ಯೋಧರಿಗೆ ರಾಷ್ಟ್ರ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.












Click it and Unblock the Notifications