ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸುವುದು ಸುರಕ್ಷಿತವೇ?
ನವದೆಹಲಿ, ನವೆಂಬರ್ 18: ಭಾಗಶಃ ಚಂದ್ರ ಗ್ರಹಣವು ಪ್ರತಿಬಾರಿಯೂ ಒಂದು ವಿಶೇಷತೆಯನ್ನು ಒಳಗೊಂಡಿರುತ್ತದೆ. ಆದರೆ ಪ್ರತಿವರ್ಷ ಕನಿಷ್ಠ ಎರಡು ಭಾಗಶಃ ಚಂದ್ರಗ್ರಹಣಗಳು ಗೋಚರಿಸುತ್ತವೆ. ಆದಾಗ್ಯೂ ಸಂಪೂರ್ಣ ಚಂದ್ರಗ್ರಹಣ ಅಪರೂಪದ ವಿದ್ಯಮಾನವಾಗಿದೆ.
ನವೆಂಬರ್ 19ರಂದು ನಿಮ್ಮ ಪ್ರದೇಶದಲ್ಲಿ ಚಂದ್ರಗ್ರಹಣ ಗೋಚರಿಸಿದರೆ, ಅದನ್ನು ನೇರವಾಗಿ ನೋಡುವುದು ಸುರಕ್ಷಿತವಾಗಿದೆ. ಸೂರ್ಯಗ್ರಹಣಕ್ಕಿಂತ ಭಿನ್ನವಾಗಿ ಚಂದ್ರಗ್ರಹಣವು ಭಾಗಶಃ ಆಗಿದ್ದರೂ ಅದನ್ನು ನೋಡುವುದು ಸುರಕ್ಷಿತವಾಗಿದೆ.
ಚಂದ್ರ ಗ್ರಹಣವು 6.02 ಮತ್ತು 12.30 UTC ( ಬೆಳಗ್ಗೆ 11.30 ರಿಂದ ಸಂಜೆ 5.33 IST ) ನಡುವೆ ಕಾಣಿಸಿಕೊಳ್ಳುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರನ ಜೋಡಣೆಗೆ ಬಂದಾಗ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತದೆ. ನವೆಂಬರ್ 19 ರಂದು 6 ತಾಸುಗಳ ಕಾಲ ನಡೆಯುವ ದೀರ್ಘವಾದ ಭಾಗಶಃ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ.

ಸೂರ್ಯಗ್ರಹಣದಂತೆ ಚಂದ್ರಗ್ರಹಣವನ್ನು ವೀಕ್ಷಿಸಲು ವಿಶೇಷ ಕನ್ನಡಕಗಳ ಅಗತ್ಯವಿಲ್ಲ. ಚಂದ್ರಗ್ರಹಣದ ಎಲ್ಲಾ ಹಂತಗಳನ್ನು ನೀವು ಬರಿಗಣ್ಣಿನಿಂದಲೇ ವೀಕ್ಷಿಸುವುದು ಸಂಪೂರ್ಣ ಸುರಕ್ಷಿತವಾಗಿ ಇರುತ್ತದೆ. ಸೂರ್ಯನಿಂದ ದೂರದಲ್ಲಿಲ್ಲದ ಸಮಯದಲ್ಲಿ ಚಂದ್ರಗ್ರಹಣವನ್ನು ನಿಮ್ಮ ಬರಿಗಣ್ಣಿನಿಂದ ವೀಕ್ಷಿಸುವುದು ಸುರಕ್ಷಿತವಾಗಿ ಇರುವುದಿಲ್ಲ. ವಿಶೇಷ ಕನ್ನಡಕವಿಲ್ಲದೆ ಚಂದ್ರಗ್ರಹಣವನ್ನು ವೀಕ್ಷಿಸಲು ಸುರಕ್ಷಿತವಾಗಿರುತ್ತದೆ. ಅದಕ್ಕೆ ಕಾರಣ ನೀವು ಸೂರ್ಯನನ್ನು ನೇರವಾಗಿ ನೋಡದಿರುವುದು. ವಾಸ್ತವವಾಗಿ ನೀವು ಚಂದ್ರನ ಮೇಲೆ ಸೂರ್ಯನ ಪ್ರತಿಬಿಂಬವನ್ನು ವೀಕ್ಷಿಸುತ್ತೀರಿ.
ಚಂದ್ರಗ್ರಹಣದ ಕೆಲವು ಹಂತಗಳಲ್ಲಿ, ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಬಹುದು. ಏಕೆಂದರೆ ಆ ಸಮಯದಲ್ಲಿ ಚಂದ್ರನನ್ನು ತಲುಪುವ ಉಳಿದಿರುವ ಸೂರ್ಯನ ಬೆಳಕು ಚಂದ್ರನ ಮೇಲ್ಮೈಯಿಂದ ನೋಡಿದಂತೆ ಭೂಮಿಯ ಅಂಚುಗಳ ಸುತ್ತಲೂ ಇರುತ್ತದೆ. ಅಲ್ಲಿಂದ, ಗ್ರಹಣದ ಸಮಯದಲ್ಲಿ ಭೂಮಿಯ ಎಲ್ಲಾ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಒಮ್ಮೆ ನೋಡಲು ಸಾಧ್ಯವಾಗುತ್ತದೆ.
4,000 ವರ್ಷಗಳ ದಾಖಲೆ:
ನವೆಂಬರ್ 19ರಂದು ನಡೆಯಲಿರುವ ಚಂದ್ರಗ್ರಹಣವು ಮುಂದಿನ 4,000 ವರ್ಷಗಳಲ್ಲೇ ದೊಡ್ಡ ದಾಖಲೆ ಆಗಿರಲಿದೆ. ಅಂದರೆ ಮುಂದಿನ 4,000 ವರ್ಷಗಳವರೆಗೂ ಇಂಥ ಚಂದ್ರಗ್ರಹಣವು ಮತ್ತೊಮ್ಮೆ ಗೋಚರಿಸುವುದಿಲ್ಲ. ಏಕೆಂದರೆ ಮುಂದಿನ ಆರು ಗಂಟೆಗಳ ಚಂದ್ರಗ್ರಹಣವು 2,489ರ ಅಕ್ಟೋಬರ್ 9ರಂದು ನಡೆಯಲಿದೆ. ಈ ಹಿಂದೆ ಕೊನೆಯ ಬಾರಿಗೆ ಇಂತಹ ದೀರ್ಘ ಚಂದ್ರಗ್ರಹಣ ನವೆಂಬರ್ 9 2003ರಂದು ಸಂಭವಿಸಿತ್ತು. ಇದು ಆರು ಗಂಟೆ ಮೂರು ನಿಮಿಷಗಳ ಕಾಲ ಕಾಣಿಸಿಕೊಂಡಿತ್ತು. ಆದಾಗ್ಯೂ ಇದು ಪೂರ್ಣ ಮತ್ತು ಭಾಗಶಃ ಚಂದ್ರಗ್ರಹಣವಲ್ಲ.
ಎಲ್ಲೆಲ್ಲಿ ಗೋಚರಿಸಲಿದೆ ಭಾಗಶಃ ಚಂದ್ರಗ್ರಹಣ?:
ನವೆಂಬರ್ 18 ರಿಂದ ಪ್ರಪಂಚದ ಹಲವಾರು ಭಾಗಗಳು ಆರು ಗಂಟೆಗಳ ಕಾಲ ದೀರ್ಘವಾದ ಭಾಗಶಃ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿವೆ. ಈ ಭಾಗಶಃ ಚಂದ್ರಗ್ರಹಣವು ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಯುರೋಪ್ ಮತ್ತು ಭಾರತ ಸೇರಿದಂತೆ ಏಷ್ಯಾದ ಭಾಗಗಳಲ್ಲಿ ಪ್ರಪಂಚದಾದ್ಯಂತ ಗೋಚರಿಸುತ್ತದೆ. ಕಳೆದ 1440ರ ಫೆಬ್ರವರಿ 18ರಂದು ಜಗತ್ತು ಕೊನೆಯ ಬಾರಿಗೆ ಇಂತಹ ದೀರ್ಘ ಭಾಗಶಃ ಚಂದ್ರಗ್ರಹಣವನ್ನು ಕಂಡಿತ್ತು. ಭಾರತದಲ್ಲಿ ಭಾಗಶಃ ಚಂದ್ರಗ್ರಹಣವು ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ನೆರೆಯ ಪ್ರದೇಶಗಳಲ್ಲಿ ಗೋಚರಿಸುತ್ತದೆ.
ಭಾರತದಲ್ಲಿ ಯಾವಾಗ ಚಂದ್ರಗ್ರಹಣ ಗೋಚರ?:
ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎನಿಸಿಕೊಳ್ಳಲಿದೆ. 2001ರಿಂದ 2100ವರೆಗಿನ ಅವಧಿಯಲ್ಲಿ ಇಷ್ಟು ಸುದೀರ್ಘವಾದ ಯಾವುದೇ ಚಂದ್ರ ಗ್ರಹಣ ಇರುವುದಿಲ್ಲ. ಹಾಗಾಗಿಯೇ ಇದನ್ನ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂದು ಕರೆಯಲಾಗುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿಕೊಂಡಿದೆ. ಭಾರತದಲ್ಲಿ ಈ ಭಾಗಶಃ ಚಂದ್ರಗ್ರಹಣ ನವೆಂಬರ್ 19 ರಂದು ಮಧ್ಯಾಹ್ನ 12:48 ಕ್ಕೆ ಪ್ರಾರಂಭವಾಗಲಿದ್ದು ಸಂಜೆ 4:17 ರವರೆಗೆ ಗೋಚರಿಸುತ್ತದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications