ದೇಶದಲ್ಲಿ 20,539 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ

ನವದೆಹಲಿ, ಜನವರಿ 8: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,139 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಗುರುವಾರ 20,539 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 234 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಇದರಿಂದ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,04,13,417ಕ್ಕೆ ತಲುಪಿದೆ. ಹಾಗೆಯೇ ಸಕ್ರಿಯ ಪ್ರಕರಣಗಳು 2,25,449 ಇಳಿಕೆಯಾಗಿವೆ. ಇದುವರೆಗೂ ಒಟ್ಟು 1,00,37,398 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಹಾಗೆಯೇ ಒಟ್ಟು 1,50,570 ಜನರು ಸಾವಿಗೀಡಾಗಿದ್ದಾರೆ.

ದೇಶದಾದ್ಯಂತ ಇಂದು ಮೂರನೇ ಸುತ್ತಿನ ಬೃಹತ್ ಪ್ರಮಾಣದ ಕೊರೊನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಕೋವಿಡ್ ಲಸಿಕೆಗಳ ವಿತರಣೆ, ನಿರ್ವಹಣೆ, ಬಳಕೆ ಹಾಗೂ ಮಾಹಿತಿ ಹಂಚಿಕೆ ಸೇರಿದಂತೆ ವಿವಿಧ ಹಂತಗಳ ತಾಲೀಮು ನಡೆಯುತ್ತಿದೆ.

18139 New Coronavirus Cases, 224 Deaths Reported In India in Last 24 Hours

ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದ್ದರೂ, ಮೂರು ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಅದರಲ್ಲಿಯೂ ಗುರುವಾರ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ 50ರಷ್ಟು ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿಯೇ ದಾಖಲಾಗಿವೆ. ಕೇರಳದಲ್ಲಿ 5,051, ಹೊಸ ಪ್ರಕರಣಗಳು ದಾಖಲಾಗಿದ್ದರೆ, ಮಹಾರಾಷ್ಟ್ರದಲ್ಲಿ 3,729 ಪ್ರಕರಗಳು ವರದಿಯಾಗಿವೆ. ಛತ್ತೀಸಗಡದಲ್ಲಿ 1,010 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+