ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 1 ದಿನ ಬ್ಯಾಂಕ್ ಬಂದ್

Posted By:
Subscribe to Oneindia Kannada

ಚೆನ್ನೈ, ಜುಲೈ 27: ಭಾರತೀಯ ಬ್ಯಾಂಕ್ ಗಳ ಒಕ್ಕೂಟ ಹಾಗೂ ಕೇಂದ್ರ ಸರ್ಕಾರದ ನಡುವೆ ಮಂಗಳವಾರ ನಡೆದ ಸಭೆಯಲ್ಲಿ ವಿಫಲವಾದ ಬೆನ್ನಲ್ಲೇಯಲ್ಲಿ ಜುಲೈ 29ರಂದು ಅಖಿಲ ಭಾರತ ಬಂದ್ ಗೆ ಕರೆ ನೀಡಲಾಗಿದೆ.

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ ಬಿಯು) ಜುಲೈ 29ರಂದು ಅಖಿಲ ಭಾರತ ಬಂದ್ ಗೆ ಕರೆ ನೀಡಿದೆ ಇದಕ್ಕೆ ಉದ್ಯೋಗಿಗಳ ಒಕ್ಕೂಟ (ಎಐಬಿಇಎ) ಸಜ್ಜಾಗಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಮ್ ಅವರು ಹೇಳಿದ್ದಾರೆ.[ವಿಜಯ್ ಮಲ್ಯ ಜತೆಗೆ 5,600 ಮಂದಿ ಸುಸ್ತಿದಾರರು]

ಮುಷ್ಕರ ಏಕೆ?: ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ, ವೇತನ ಪರಿಷ್ಕರಣೆ, ಬ್ಯಾಂಕ್ ಗಳ ವಿಲೀನಗಳಲ್ಲಿ ಕಂಡು ಬಂದಿರುವ ಸಮಸ್ಯೆಗಳ ಜೊತೆಗೆ ಈ ಹಿಂದೆ ಒಕ್ಕೂಟ ನೀಡಿರುವ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಕಾರಣವನ್ನು ನೌಕರರ ಒಕ್ಕೂಟ ಹೇಳಿದೆ.[ಬ್ಯಾಂಕ್‌ಗಳಿಗೆ ಕೇಂದ್ರದಿಂದ 22 ಸಾವಿರ ಕೋಟಿ ರು.]

10 Lakh Bank Employees To Go On One-Day Strike

ಎಷ್ಟು ಮಂದಿ ?: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲದೆ ಖಾಸಗಿ ಬ್ಯಾಂಕ್, ವಿದೇಶಿ ಬ್ಯಾಂಕ್ ಸರಿ ಸುಮಾರು 80,000 ಬ್ರ್ಯಾಂಚ್ ಗಳಿಂದ 10 ಲಕ್ಷಕ್ಕೂ ಅಧಿಕ ಉದ್ಯೋಗಗಳು ಮುಷ್ಕರಕ್ಕೆ ಧುಮುಕಲು ಮುಂದಾಗಿದ್ದಾರೆ.[ಜುಲೈ ತಿಂಗಳಲ್ಲಿ ಒಂದಲ್ಲ, ಎರಡಲ್ಲಾ 11ದಿನ ಬ್ಯಾಂಕಿಗೆ ರಜೆ!]

ಬೆಂಬಲ ಸೂಚಿಸಿದ ಒಕ್ಕೂಟಗಳು: ಯುಎಫ್ ಬಿಯು, ಎಐಬಿಇಎ, ಎಐಬಿಒಸಿ, ಎನ್ ಸಿಬಿಇ, ಎಐಬಿಒಎ, ಬಿಇಎಫ್ ಐ, ಐಎನ್ ಬಿಇಎಫ್, ಐಎನ್ ಬಿಒಸಿ, ಎನ್ ಒ ಬಿಡಬ್ಲ್ಯೂ, ಎನ್ ಒ ಬಿಒ ಮುಂತಾದ ಒಕ್ಕೂಟಗಳು (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
With conciliation meeting between the United Forum of Bank Unions (UFBU) that has given a strike call on July 29, the Indian Banks Association (IBA) and the central government failing on Tuesday, the strike call stands, said a top leader of All India Bank Employees' Association (AIBEA).
Please Wait while comments are loading...