ಹಲ್ವಾ ಹಂಚುವುದು ಸೇರಿ ಬಜೆಟ್ ಬಗೆಗಿನ ವಿಶಿಷ್ಟ ಸಂಗತಿಗಳು

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಬಜೆಟ್ ಓದಲು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಜ್ಜಾಗುತ್ತಿದ್ದಾರೆ. ಜನಪ್ರಿಯ ಯೋಜನೆಗಳು, ಮುಂಬರುವ ಚುನಾವಣೆಯ ಅಗತ್ಯಕ್ಕೆ ತಕ್ಕಂತೆ ಈ ಬಾರಿಯ ಬಜೆಟ್ ತಯಾರಾಗುತ್ತಿದೆ.

ಪ್ರತಿ ಬಾರಿ ಬಜೆಟ್ ರೂಪಿಸುವ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ, ವಿತ್ತ ಸಚಿವಾಲಯದ ಅಧಿಕಾರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆ ನಡೆಸಿ, ಜನರ ಇಂದಿನ ಅಗತ್ಯ, ಮುಂದಿನ ಭವಿಷ್ಯಕ್ಕೆ ಬುನಾದಿ ಹಾಕಬಲ್ಲ ಯೋಜನೆಗಳತ್ತ ಗಮನ ಹರಿಸಲು ಸೂಚಿಸುತ್ತಾರೆ.

ಉದ್ಯೋಗ, ಆರ್ಥಿಕ ಭದ್ರತೆ, ಮಹಿಳಾ ಸಬಲೀಕರಣ, ಡಿಜಿಟಲ್ ಇಂಡಿಯಾ ಹೀಗೆ ಮೋದಿ ಕನಸು ಸಾಕಾರಗೊಳ್ಳುವಂತೆ ಬಜೆಟ್ ನಕ್ಷೆ ರೂಪಿಸಲಾಗುತ್ತದೆ. 2018ರಲ್ಲಿ ಕರ್ನಾಟಕ, ರಾಜಸ್ಥಾನ, ಛತ್ತೀಸ್ ಘಡ ಹಾಗೂ ಮಧ್ಯಪ್ರದೇಶ ಚುನಾವಣೆ ಅಲ್ಲದೆ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ರಾಜ್ಯಗಳ ಚುನಾವಣೆ ಇರುವುದರಿಂದ ಈ ರಾಜ್ಯಗಳಿಗೆ ಹೆಚ್ಚಿನ ಅನುದಾನ, ಯೋಜನೆಗಳನ್ನು ನಿರೀಕ್ಷಿಸಬಹುದು.

10 Interesting Factoids about Union Budget

ಮಿಕ್ಕಂತೆ ಬಜೆಟ್ ಬಗ್ಗೆ ಕುತೂಹಲಕಾರಿ ಅಂಶಗಳು ಇಲ್ಲಿವೆ:

ಪ್ರತಿ ಶುಭಕಾರ್ಯ ಮಾಡುವಾಗ ಸಿಹಿ ಹಂಚಿಕೆ

ಪ್ರತಿ ಶುಭಕಾರ್ಯ ಮಾಡುವಾಗ ಸಿಹಿ ಹಂಚಿಕೆ

ಪ್ರತಿ ಶುಭಕಾರ್ಯ ಮಾಡುವಾಗ ಸಿಹಿ ಹಂಚಿಕೆಗೆ ಮಹತ್ವ ನೀಡುವಂತೆ, ಪ್ರತಿ ಬಾರಿ ಕೇಂದ್ರ ಬಜೆಟ್ ಪ್ರತಿ ಮುದ್ರಣದ ಬೆನ್ನಲ್ಲೇ ಹಲ್ವಾ ಮಾಡುವ ಸಮಾರಂಭ ನಡೆಯುತ್ತದೆ. ನಂತರ ವಿತ್ತ ಸಚಿವಾಲಯದ ಸಿಬ್ಬಂದಿಗಳಿಗೆ ಮೊದಲಿಗೆ ಸಿಹಿ ಹಂಚಲಾಗುತ್ತದೆ. ಬಜೆಟ್ ಪ್ರತಿ ಮುದ್ರಿಸುವವರು, ಬಜೆಟ್ ತಯಾರಿಸುವ ಸರ್ಕಾರಿ ಸಿಬ್ಬಂದಿಗಳ ಮೊಬೈಲ್, ಲ್ಯಾಂಡ್ ಫೋನ್ ಬಂದ್ ಆಗಿರುತ್ತದೆ.

26 ನವೆಂಬರ್ 1947ರಂದು ಭಾರತದ ಮೊಟ್ಟ ಮೊದಲ ಆಯವ್ಯಯ

26 ನವೆಂಬರ್ 1947ರಂದು ಭಾರತದ ಮೊಟ್ಟ ಮೊದಲ ಆಯವ್ಯಯ

26 ನವೆಂಬರ್ 1947ರಂದು ಭಾರತದ ಮೊಟ್ಟ ಮೊದಲ ಆಯವ್ಯಯ ಮಂಡನೆ ಮಾಡಲಾಯಿತು. ಸ್ವಾತಂತ್ರ್ಯ ಗಳಿಸಿದ ಮೂರು ತಿಂಗಳಲ್ಲೇ ಒಕ್ಕೂಟ ವ್ಯವಸ್ಥೆಗೆ ಹೊಂದುವ ಬಜೆಟ್ ಸಿದ್ಧ ಪಡಿಸಲಾಯಿತು. ಇದಕ್ಕೂ ಮುನ್ನ 1860ರ ಏಪ್ರಿಲ್ 07ರಂದು ಬ್ರಿಟಿಷ್ ಸಾಮ್ರಾಜ್ಯದ ಎದುರು ವಿತ್ತ ಸಚಿವಾಲಯದ ಸದಸ್ಯ ಜೇಮ್ಸ್ ವಿಲ್ಸನ್ ಬಜೆಟ್ ಮಂಡಿಸಿದ್ದರು.

ಸ್ವತಂತ್ರ ಭಾರತದ ಮೊದಲ ಬಜೆಟ್

ಸ್ವತಂತ್ರ ಭಾರತದ ಮೊದಲ ಬಜೆಟ್

ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದವರು ವಿತ್ತ ಸಚಿವ ಸರ್ ರಾಮಸ್ವೈ ಚೆಟ್ಟಿ ಕಂದಸ್ವಾಮಿ ಷಣ್ಮುಖಂ ಚೆಟ್ಟಿ- ವಕೀಲರಾಗಿದ್ದ ಚೆಟ್ಟಿ ಅವರು ಆರ್ಥಿಕ ತಜ್ಞರಾಗಿ ರಾಜಕಾರಣಿಯಾಗಿ ಗುರುತಿಸಿಕೊಂಡವರು.

ಇಂದಿರಾ ಗಾಂಧಿ ಮೊಟ್ಟ ಮೊದಲ ವಿತ್ತ ಸಚಿವೆ

ಇಂದಿರಾ ಗಾಂಧಿ ಮೊಟ್ಟ ಮೊದಲ ವಿತ್ತ ಸಚಿವೆ

ಇಂದಿರಾ ಗಾಂಧಿ ಅವರು ಬಜೆಟ್ ಮಂಡಿಸಿದ ಮೊಟ್ಟ ಮೊದಲ ವಿತ್ತ ಸಚಿವೆಯಾಗಿದ್ದಾರೆ. ಹಾಗೂ ಇಲ್ಲಿಯವರೆಗಿನ ಏಕೈಕ ಮಹಿಳಾ ವಿತ್ತ ಸಚಿವೆ ಎನಿಸಿಕೊಂಡಿದ್ದಾರೆ.

ಮೋರಾರ್ಜಿ ದೇಸಾಯಿ

ಮೋರಾರ್ಜಿ ದೇಸಾಯಿ

ಮೋರಾರ್ಜಿ ದೇಸಾಯಿ (4ನೇ ಪ್ರಧಾನ ಮಂತ್ರಿ) 10 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಎರಡು ಬಾರಿ 1967 ಹಾಗೂ 1968 ಅವರ ಜನ್ಮದಿನ(ಫೆಬ್ರವರಿ 29) ದಂದು ಬಜೆಟ್ ಮಂಡಿಸಿದ್ದು ವಿಶೇಷ.

ಪಿ ಚಿದಂಬರಂ

ಪಿ ಚಿದಂಬರಂ

ಪಿ ಚಿದಂಬರಂ ಅವರು 8 ಬಾರಿ ಬಜೆಟ್ ಮಂಡಿಸಿದ್ದು, ವಿಶೇಷ ಆರ್ಥಿಕ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ.

ಪ್ರಣಬ್ ಮುಖರ್ಜಿ, ಯಶವಂತ್ ಸಿನ್ಹಾ,

ಪ್ರಣಬ್ ಮುಖರ್ಜಿ, ಯಶವಂತ್ ಸಿನ್ಹಾ,

ಪ್ರಣಬ್ ಮುಖರ್ಜಿ, ಯಶವಂತ್ ಸಿನ್ಹಾ, ವೈ ಬಿ ಚೌಹಾನ್ ಹಾಗೂ ಸಿಡಿ ದೇಶ್ ಮುಖ್ ಅವರು 7 ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ.

ಕಪ್ಪು ಬಜೆಟ್

ಕಪ್ಪು ಬಜೆಟ್

1973ರ ಕೇಂದ್ರ ಬಜೆಟ್ ಅನ್ನು ಕಪ್ಪು ಬಜೆಟ್ ಎಂದು ಘೋಷಿಸಲಾಗಿತ್ತು. ಸುಮಾರು 550 ಕೋಟಿ ರು ವಿತ್ತೀಯ ಕೊರತೆ ತೋರಿಸಲಾಗಿತ್ತು.

ಡಾ. ಮನಮೋಹನ್ ಸಿಂಗ್ ಹಾಗೂ ಯಶವಂತ ಸಿನ್ಹಾ

ಡಾ. ಮನಮೋಹನ್ ಸಿಂಗ್ ಹಾಗೂ ಯಶವಂತ ಸಿನ್ಹಾ

ಡಾ. ಮನಮೋಹನ್ ಸಿಂಗ್ ಹಾಗೂ ಯಶವಂತ ಸಿನ್ಹಾ ಅವರುದಾಖಲೆಯ 5 ಬಾರಿ ಬಜೆಟ್ ಮಂಡಿಸಿದ್ದಾರೆ. ಈಗ ಅರುಣ್ ಜೇಟ್ಲಿ ಅವರು ಫೆಬ್ರವರಿ 01ರಮ್ದು ಬಜೆಟ್ ಮಂಡಿಸಿ ಇವರಿಬ್ಬರ ಸಾಲಿಗೆ ಸೇರುತ್ತಿದ್ದಾರೆ.

ಪ್ರತ್ಯೇಕ ರೈಲ್ವೆ ಬಜೆಟ್

ಪ್ರತ್ಯೇಕ ರೈಲ್ವೆ ಬಜೆಟ್

ಸುಮಾರು 92 ವರ್ಷಗಳ ಬಳಿಕ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆಯನ್ನು ಕೈಬಿಡಲಾಯಿತು. ಈಗ ಕೇಂದ್ರ ಬಜೆಟ್ ಜತೆ ರೈಲ್ವೆ ಬಜೆಟ್ ವಿಲೀನಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+