1 ಲಕ್ಷ ರೂಪಾಯಿ ಪಾನ್: ದುಬಾರಿ ಮದುವೆಯಲ್ಲಿ ಚಿನ್ನಿಗೆ ಚಿನ್ನದ ಪಾನ್!
ಊಟ ಆದ ನಂತರ ಪಾನ್ ಅಥವಾ ಬೀಡಾ ತಿನ್ನುವುದನ್ನು ನಮ್ಮ ಹಿರಿಯರು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ರಾಜಮನೆತನದಿಂದ ಸಾಮಾನ್ಯರವರೆಗೂ ಎಲ್ಲರೂ ಇದನ್ನು ಪ್ರೀತಿಸುತ್ತಾರೆ. ಬೀಡಾವನ್ನು ಕೆಲವರು ನಿತ್ಯ ತಿಂದರೆ, ಇನ್ನೂ ಕೆಲವರು ವಿಶೇಷ ಸಂದರ್ಭಗಳಲ್ಲಿ ಊಟದ ನಂತರ ಮತ್ತು ಹಬ್ಬದೂಟದ ನಂತರ ತಿನ್ನುತ್ತಾರೆ. ಮುಂಬೈನಲ್ಲಿನ ಪಾನ್ ಒಂದು ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದು, ಅದರ ಬೆಲೆ ಕೇಳಿ ಜನ ದಂಗಾಗಿದ್ದಾರೆ.
ಅಂದಹಾಗೆ ಪಾನ್ ಅಥವಾ ಬೀಡಾ ತಯಾರಿಸುವುದು ಕೆಲವೆಡೆ ಸಿಕ್ಕಾಪಟ್ಟೆ ಫೇಮಸ್. ಎಷ್ಟೇ ಫೇಮಸ್ ಆಗಿದ್ದರು ಪಾನ್ ಒಂದರ ಬೆಲೆ 10 ರಿಂದ 50 ರೂಪಾಯಿಗಳ ಒಳಗೆ ಇರುತ್ತದೆ. ಆದರೆ ಇಲ್ಲೊಂದು ಪಾನ್‌ನ ಬೆಲೆ ನೀವು ಕೇಳಿ ಬಿಟ್ಟರೆ ಶಾಕ್ ಆಗಿ ಹೋಗ್ತೀರಾ. ಮುಂಬೈನಲ್ಲಿ ತಯಾರಾಗುವ ಈ ಪಾನ್ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ.

ಹೌದು... ಮುಂಬೈ ಮೂಲದ ನೌಶಾದ್ ಶೇಖ್ ಎಂಬುವವರು ತಯಾರಿಸುವ ಈ ಬೀಡಾದ ಬೆಲೆ ಬರೋಬ್ಬರಿ 1 ಲಕ್ಷ ರೂ. ಇತ್ತೀಚೆಗಷ್ಟೇ ನೌಶಾದ್ ಶೇಖ್ ಮುಂಬೈನಲ್ಲಿ 1 ಲಕ್ಷ ಮೌಲ್ಯದ ಬೀಡಾ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ದುಬಾರಿ ಬೀಡಾವನ್ನು ಮುಂಬೈನ ಮಾಹಿಮ್‌ನಲ್ಲಿರುವ ಪಾನ್ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತದೆ.
ಅಂದಹಾಗೆ ಈ ಪಾನ್ ಹೆಸರು ಫ್ರಾಗ್ರೆನ್ಸ್ ಆಫ್ ಲವ್ ಪ್ರೀಮಿಯಂ ಪಾನ್. ಕುಟುಂಬ ವ್ಯವಹಾರವನ್ನು ನಡೆಸಲು ಹಲವಾರು ಕಾರ್ಪೊರೇಟ್ ಉದ್ಯೋಗಗಳನ್ನು ತೊರೆದ MBA ಪದವೀಧರರಾದ ನೌಶಾದ್ ಅವರು ಈ ಪಾನ್ ತಯಾರಿಸುವ ಅಂಗಡಿಯನ್ನು ಹಾಕಿಕೊಂಡಿದ್ದಾರೆ. ಆರಂಭದಲ್ಲಿ ಡಲ್ ಇದ್ದ ವ್ಯಾಪಾರ ವಿಭಿನ್ನ ಪಾನ್‌ಗಳನ್ನು ತಯಾರಿಸಲು ಶುರು ಮಾಡುತ್ತಿದ್ದಂತೆ ಸಖತ್ ಫೇಮಸ್ ಆಗಿಬಿಟ್ಟಿದೆ. ಹೀಗಾಗಿ ಈಗ ನೌಶಾದ್ ಅಂಗಡಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅವರು ಸಾಂಪ್ರದಾಯಿಕ ಕಡಿ ಕಾ ಪಾನ್‌ಗೆ ರಾಯಲ್ ಸ್ಪರ್ಶವನ್ನು ನೀಡಿ ಮಾರಾಟ ಮಾಡುತ್ತಾರೆ.
ಈ ಫ್ಯಾನ್ಸಿ ಬೀಡಾ ಇಷ್ಟೊಂದು ದುಬಾರಿಯಾಗಿರಲು ಕಾರಣವೆಂದರೆ ಅದರ ಹೊರ ನೋಟ ಮತ್ತು ಅದಕ್ಕೆ ಬಳಸಲಾದ ದುಬಾರಿ ಪದಾರ್ಥಗಳು. ಇದು ನೋಡಲು ಕೂಡ ವರ್ಣರಂಜಿತವಾಗಿ ಕಾಣಿಸುತ್ತದೆ. 1 ಲಕ್ಷ ರೂಪಾಯಿಯ ಪಾನ್ ವಿಶೇಷವಾಗಿ ನವವಿವಾಹಿತರಲ್ಲಿ ಜನಪ್ರಿಯವಾಗಿದೆ. ಈ ಪಾನ್ ಅನ್ನು ತಿಂದು ವಧುವರರು ಸಂತೋಷಪಡುತ್ತಾರೆ.
ಅಷ್ಟಕ್ಕೂ ಈ ಪಾನ್ ಇಷ್ಟೊಂದು ದುಬಾರಿ ಯಾಕೆ ಅಂತ ಗೊತ್ತಾ? ಈ ಪಾನ್ ಅನ್ನು ಅತ್ಯಂತ ಸೂಕ್ಷ್ಮಿವಾದ ಚಿನ್ನದ ಹಾಳೆಯಿಂದ ಅಲಂಕರಿಸಲಾಗಿರುತ್ತದೆ. ಇದು ನೋಡಲು ಆಕರ್ಷಕ ಹಾಗೂ ದುಬಾರಿ ಪಾದರ್ಥಗಳಿಂದ ತಯಾರಿಸಲ್ಪಟ್ಟಿದೆ. ಹೀಗಾಗಿ ಈ ಬೀಡಾ ಮುಂಬೈನಲ್ಲಿ ಸಿಕ್ಕಾಪಟ್ಟೆ ಫೇಮಸ್ ಜೊತೆಗೆ ದುಬಾರಿ ಕೂಡ ಆಗಿದೆ.
ಈ ವಿಶೇಷ ಪಾನ್ ನವವಿವಾಹಿತರಿಗೆ ತುಂಬಾ ಇಷ್ಟವಾಗುತ್ತದೆ. ಯಾಕೆಂದರೆ ಇದರ ಪ್ಯಾಕಿಂಗ್ ಜನರನ್ನು ಆಕರ್ಷಿಸುವಂತಿದೆ. ವೀಳ್ಯದೆಲೆಗಳನ್ನು ಕೇಸರಿಯ ಸುವಾಸನೆಯ ಎರಡು ವಿಶೇಷ ಪೆಟ್ಟಿಗೆಗಳಲ್ಲಿ ಇಡಲಾಗುತ್ತದೆ. ಖರೀದಿಸುವವರಿಗೆ ಈ ಪಾನ್ ಜೊತೆಗೆ ತಾಜ್ ಮಹಲ್‌ನ ಅಮೃತಶಿಲೆಯ ಪ್ರತಿಕೃತಿಯನ್ನು ಸಹ ನೀಡಲಾಗುತ್ತದೆ. ಹೀಗಾಗಿ ಇದರ ಬೆಲೆ ತುಂಬಾ ದುಬಾರಿಯಾಗಿದೆ. ನವ ದಂಪತಿಗಳು ಪರಸ್ಪರ ಇದನ್ನು ಸೇವಿಸಿ ಖುಷಿಪಡುತ್ತಾರೆ.
ಅಂದಹಾಗೆ ಈ ಪಾನ್ ಅಂಗಡಿ ಮುಂಬೈನ ಮಹಿಮ್ ವೆಸ್ಟ್‌ನಲ್ಲಿ ದೆಹಲಿ JICA ಬಳಿ ಮೈಕೆಲ್ ಚರ್ಚ್ ಎದುರು ಇದೆ. ನಿಮಗಿದು ಬೇಕು ಅನಿಸಿದರೆ ಅಥವಾ ನಿಮ್ಮ ಸಂಗಾತಿಗೆ ಇದನ್ನು ತಿನ್ನಿಸಲು ಬಯಸಿದರೆ, ಒಂದು ಲಕ್ಷ ರೆಡಿ ಮಾಡಿಕೊಳ್ಳಿ.
-
ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ -
Buttermilk Summer Benefits: ಪ್ರತಿದಿನ ಮಜ್ಜಿಗೆ ಕುಡಿಯುವವರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯಗಳು -
ದುಬಾರಿ ಆ್ಯಂಟಿ ಏಜಿಂಗ್ ಕ್ರೀಮ್ಗಿಂತ ಈ ತರಕಾರಿಯೇ ಪರಿಣಾಮಕಾರಿಯಂತೆ: ಚಿರಯೌವನ ತ್ವಚೆಗೆ ನೈಸರ್ಗಿಕ ಉಪಾಯ -
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್ ಟ್ರಿಕ್ಸ್ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ












Click it and Unblock the Notifications