ಕಪ್ಪು ಹಣ ಘೋಷಣೆ: ಈ ಹೈದರಾಬಾದಿ ಬಳಿ 10 ಸಾವಿರ ಕೋಟಿ ರು!

Posted By:
Subscribe to Oneindia Kannada

ಹೈದರಾಬಾದ್, ಅಕ್ಟೋಬರ್ 13: ನರೇಂದ್ರ ಮೋದಿ ಸರ್ಕಾರದ ಸ್ವಯಂಘೋಷಿತ ಕಪ್ಪು ಹಣ ಘೋಷಣೆ ಯೋಜನೆ ಅಡಿಯಲ್ಲಿ ದೇಶದ ಎಲ್ಲೆಡೆಯಿಂದ ಸಾರ್ವಜನಿಕರು ಹಾಗೂ ಸಂಸ್ಥೆಗಳು ತಮ್ಮ ಬಳಿ ಇದ್ದ ಕಪ್ಪುಹಣ ಘೋಷಿಸಿದ್ದು ತಿಳಿದಿರಬಹುದು. ಈ ಪೈಕಿ ಹೈದರಾಬಾದಿನ ವ್ಯಕ್ತಿಯೊಬ್ಬರೇ 10 ಸಾವಿರ ಕೋಟಿ ರು ಘೋಷಿಸಿದ್ದಾರೆ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಪ್ರಕಟಿಸಿದ್ದಾರೆ.

ಒಟ್ಟಾರೆ ಹೈದರಾಬಾದಿನಿಂದ 13,000 ಕೋಟಿ ರು ಕಪ್ಪು ಹಣ ಘೋಷಣೆಯಾಗಿದೆ. ಈ ಪೈಕಿ ಒಬ್ಬ ವ್ಯಕ್ತಿಯೇ 10,000 ಕೋಟಿ ರು ಘೋಷಿಸಿದ್ದಾರೆ. ಬಹುಶಃ ಇದು ನನ್ನ ರಾಜಕೀಯ ವೈರಿಗಳ ಖಾತೆ ಇರಬಹುದು ಎಂದು ಚಂದ್ರಬಾಬು ನಾಯ್ಡು ವಿವರಿಸಿದರು.

ದೇಶದೆಲ್ಲೆಡೆಯಿಂದ ಸಂಗ್ರಹವಾದ ಕಪ್ಪುಹಣದ ಬಗ್ಗೆ ಇತ್ತೀಚೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಾಹಿತಿ ನೀಡಿದ್ದರು. ಒಟ್ಟಾರೆ 65,000 ಕೋಟಿ ರು ಘೋಷಣೆಯಾಗಿದೆ. ಈ ಪೈಕಿ 10 ಸಾವಿರ ಕೋಟಿ ರು ಹೈದರಾಬಾದ್ ಮೂಲದ ಉದ್ಯಮಿ ಹೆಸರಿನಿಂದ ಘೋಷಣೆಯಾಗಿದೆ. ಆದರೆ, ಕಾನೂನಿನ ಪ್ರಕಾರ ಆ ವ್ಯಕ್ತಿಯ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ನಾಯ್ಡು ಹೇಳಿದರು.

Hyderabad individual declared Rs 10000 crore in black money scheme: Chandrababu Naidu

ಕಪ್ಪು ಹಣ ಬಳಕೆ ತಡೆ ಹೇಗೆ?: ಕಪ್ಪು ಹಣ ಉಳ್ಳವರು ಶೇ 40 ರಿಂದ 45 ರಷ್ಟು ದಂಡ ಕಟ್ಟುವ ಮೂಲಕ ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿಕೊಳ್ಳುತ್ತಾರೆ. ಇದರಿಂದ ಸರ್ಕಾರಕ್ಕೆ ಭಾರಿ ನಷ್ಟವಾಗುತ್ತದೆ. ಮೋದಿ ಸರ್ಕಾರದ ಯೋಜನೆಯ ಫಲವಾಗಿ ದೇಶಕ್ಕೆ ಅಪಾರ ಪ್ರಮಾಣದ ತೆರಿಗೆ ಹಣ ಸಂಗ್ರಹವಾಗುತ್ತದೆ ಹಾಗೂ ಸಾಮಾಜಿಕ ಕಳಕಳಿ ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗುತ್ತದೆ ಎಂದು ಹೇಳಿದರು.

ಕಪ್ಪು ಹಣ ತಡೆ, ನಕಲಿ ನೋಟು ತಡೆಗಟ್ಟಲು 1,000 ರು ಹಾಗೂ 500 ರು ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸುವುದು ಹಾಗೂ ಚಲಾವಣೆಯನ್ನು ನಿಲ್ಲಿಸಬೇಕು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರ ನಿಲ್ಲಿಸಬಹುದು. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ನಾಯ್ಡು ಹೇಳಿದರು. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Andhra Pradesh chief minister Chandrababu Naidu on Wednesday claimed that out of the Rs 13,000 crore of black money declared in Hyderabad under a recent scheme, Rs 10,000 crore belonged to a single individual, in apparent hints towards his political rivals.
Please Wait while comments are loading...