Waqf: ಕರ್ನಾಟಕ 90 ಸಾವಿರ ಎಕರೆ ಜಮೀನು ಕಬಳಿಕೆ: ಸಿಎಂ ಯಾರ ಪರ! ಸಿಟಿ ರವಿ ಪ್ರಶ್ನೆ

ಬೆಂಗಳೂರು, ಡಿಸೆಂಬರ್ 04: ಕರ್ನಾಟಕದಲ್ಲಿ ಹತ್ತಾರು ಶತಮಾನಗಳ ಇತಿಹಾಸ ಹೊಂದಿರುವ ದೇವಸ್ಥಾನ ಸೇರಿದಂತೆ ಕಂಡ ಕಂಡವರ ಜಮೀನು, ಆಸ್ತಿಗಳನ್ನು ವಕ್ಫ್ ಬೋರ್ಡ್ ಕಳಬಿಸುತ್ತಿದೆ. ರಾಜ್ಯ ಸರ್ಕಾರವೇ ಸಂವಿಧಾನ‌ ಬಾಹಿರವಾದಂತಹ ಕೆಲಸಕ್ಕೆ‌ ಮುಂದಾಗಿದೆ. ರಾಜ್ಯದಲ್ಲಿ ಅವ್ಯಾಹತವಾಗಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ ಎಂದು ವಕ್ಟ್ ಭೂಕಬಳಿಕೆ ವಿಚಾರದಲ್ಲಿ ಸರ್ಕಾರ ನಡೆ ವಿರುದ್ಧ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಟಿ. ರವಿ ಅವರು ಹರಿಹಾಯ್ದರು.

ಬುಧವಾರ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಸೇರಿ ಕೆಲವು ಬಿಜೆಪಿ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಿಟಿ ರವಿ ಅವರು, ರಾಜ್ಯದಲ್ಲಿ 1500 ವರ್ಷಗಳ‌ ಹಿಂದಿನ‌ ಚಾಲುಕ್ಯರ ದೇವಸ್ಥಾನಕ್ಕೆ ಸಂಬಂಧಿಸಿ ಆಸ್ತಿಯನ್ನು ವಕ್ಫ್ ಕಬಳಿಸಿದೆ. ದೇಗುಲದ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಲಾಗಿದೆ.

Waqf Board has Grab around 90000 Acres Land in State CT Ravi Lashes on Siddaramaiah

ವಿಜಯಪುರದಲ್ಲಿ ವಿರಕ್ತಮಠದ ಜಾಗ, ದೇವಸ್ಥಾನ, ಸ್ಮಶಾನ‌ ಸೇರಿದಂತೆ ಅನೇಕ‌ ಆಸ್ತಿಗಳು ಇಂದು ವಕ್ಫ್ ಹೆಸರಿನಲ್ಲಿ ಅಕ್ರಮವಾಗಿ ನಮೂದಿಸಲಾಗಿದೆ. ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಕಲಿತ ಶಾಲೆಯ‌ ಆಸ್ತಿ‌ ಕೂಡ ವಕ್ಫ್ ಹೆಸರಿಗೆ ಬರೆಸಲಾಗಿದೆ.

ವಕ್ಫ್‌ಗೆ ನ್ಯಾಯಾಂಗ ವ್ಯವಸ್ಥೆ ಮೀರಿದ ಅಧಿಕಾರ

ವಕ್ಫ್ ಮಂಡಳಿಯು ರಾಜ್ಯದಲ್ಲಿ ಕಂಡ ಕಂಡವರ ಆಸ್ತಿಯನ್ನು ದೋಚಿಸುತ್ತಿದೆ. ದೇವಸ್ಥಾನ, ಸ್ಮಶಾನ ಹೀಗೆ ಎಲ್ಲೆಡೆ ಬೇಲಿ‌ ಹಾಕಿಕೊಳ್ಳುವ ಅಧಿಕಾರ ಇಲ್ಲ ಎಂದು ಅವರು, ವಕ್ಫ್ ಮಂಡಳಿಗೆ ನ್ಯಾಯಾಂಗ ವ್ಯವಸ್ಥೆಯನ್ನೂ ಮೀರಿ ಅಧಿಕಾರವನ್ನು ನೀಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದರು.

Waqf Board has Grab around 90000 Acres Land in State CT Ravi Lashes on Siddaramaiah

ಇದೆಲ್ಲ ನೋಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಂವಿಧಾನ‌ ಬಾಹಿರವಾದ ಕೃತ್ಯಕ್ಕೆ ಕೈ ಹಾಕಿದೆ. ಸರ್ಕಾರವೇ ವಕ್ಫ್ ಬೋರ್ಡ್ ಆಸ್ತಿ ನಮೂದು‌ ಮಾಡುತ್ತಿದೆ. ಈ ಬಗ್ಗೆ ರೈತರು, ಜನಸಾಮಾನ್ಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಪ್ರಶ್ನಿಸುವುದಾದರೆ ನೀವು ಈ ಬಗ್ಗೆ ವಕ್ಫ್ ಟ್ರಿಬ್ಯುನಲ್ ಮುಂದೆ ಹೋಗಿ ನ್ಯಾಯ ಕೇಳಬೇಕಿದೆ.

ಇದು ಒಂದು ರೀತಿಯಲ್ಲಿ ಕುರಿ‌ ಹೋಗಿ ತೋಳದ ಮುಂದೆ‌ ನ್ಯಾಯ ಕೇಳಿದಂತಾಗುತ್ತದೆ ಎಂದು ಸದರಿ ಇರುವ ವ್ಯವಸ್ಥೆಯ ಕುರಿತು ವಕ್ಫ್ ಮಂಡಳಿಗೆ ನೀಡಲಾದ ವಿಶೇಷ ಅಧಿಕಾರದ ವಿರುದ್ಧ ಅವರು ಅಸಮಾಧಾನ ಹೊರ ಹಾಕಿದರು.

ವಕ್ಫ್ ಅದಾಲತ್: ಸಚಿವರನ್ನು ವಜಾಗೊಳಿಸಿ

ಸರ್ಕಾರ ಸಂವಿಧಾನ ವಿರುದ್ಧ ಕೆಲಸ ಮಾಡುತ್ತಿದ್ದು, ಸಂವಿಧಾನದ‌ ಪರ ನಾವು ಹೋರಾಟ ಮುಂದುವರೆಸುತ್ತವೆ. ರಾಜ್ಯ ಸರ್ಕಾರ ‌ಸಂವಿಧಾನದ ಪರ ಇದೆಯಾ ಅಥವಾ ಶಿರಿಯಾ ಪರ ಎಂಬುದನ್ನು ಸ್ಪಷ್ಟಪಡಿಸಬೇಕು. ವಕ್ಫ್ ಅದಾಲತ್ ನಡೆಸುವುದಕ್ಕೆ ಸಂವಿಧಾನದಲ್ಲಿ‌ ಅವಕಾಶವಿಲ್ಲ. ಹೀಗಿದ್ದರೂ ಅದಾಲತ್ ನಡೆಸಿದ ಜಮೀರ್ ಅಹ್ಮದ್ ಅವರನ್ನ ಸರ್ಕಾರದಿಂದ ವಜಾ‌ಗೊಳಿಸುವಂತೆ ಅವರು ಆಗ್ರಹಿಸಿದರು.

ಭಾರತದ ಸಂವಿಧಾನದ‌ ಯಾವ ಕಾನೂನಿನಡಿ‌ ವಕ್ಫ್ ಗೆ ಅವಕಾಶವಿದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಬೇಕು. ಯಾವುದೇ ಒಂದು ಆಸ್ತಿಯನ್ನು ವಕ್ಫ್ ಹೆಸರಿಗೆ ನಮೂದು‌ ಮಾಡುವುದು ಅಪರಾಧವಾಗಿದೆ. ಮುಖ್ಯಮಂತ್ರಿಗೆ ಅಧಿಕಾರ ನೀಡುವುದು ಭಸ್ಮಾಸುರನ ಕೈಗೆ ಅಧಿಕಾರ ನೀಡದಂತಾಗಿದೆ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.

ವಕ್ಫ್ ಬೋರ್ಡ್ ರಾಜ್ಯದಲ್ಲಿ ಬಕಾಸುರನ ಹಾಗೆ ಎಲ್ಲರ ಆಸ್ತಿ ಕಬಳಿಸಲಾಗುತ್ತಿದೆ. ಮುಖ್ಯಮಂತ್ರಿ ಅವರು ಸಂವಿದಾನದಡಿ ನೇಮಕವಾಗಿದ್ದು, ಅವರು ಸಿದ್ದರಾಮಯ್ಯರಂತೆ ವರ್ತಿಸಬೇಕು. ಅದನ್ನು ಬಿಟ್ಟು ಸಿದ್ರಾಮುಲ್ಲಾಖಾನ್ ನಂತೆ ವರ್ತಿಸಬಾರದು. ಇದು ಖಂಡನೀಯ ಎಂದು ಅವರು ಗುಡುಗಿದರು.

ವಕ್ಫ್ ಭೂಕಬಳಿಕ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಯಲಿದೆ. ರಾಜ್ಯದಾದ್ಯಂತ ನಮ್ಮ ಮೂರು ತಂಡಗಳು ಪ್ರವಾಸ ಕೈಗೊಂಡಿದೆ. ವಕ್ಫ್ ವಿರುದ್ಧ ವರದಿ ತಯಾರಿಸಿ ಕೇಂದ್ರ ಸಮಿತಿಗೆ ನೀಡುತ್ತೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+