ರಾಜ್ಯ ಒಲಿಂಪಿಕ್ಸ್ ಕಬಡ್ಡಿ: ಕೆಎಸ್ ಪಿ, ವಿಜಯ ಬ್ಯಾಂಕ್‌ ಚಾಂಪಿಯನ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ, 8 : ರಾಜ್ಯ ಒಲಿಂಪಿಕ್ಸ್ ನ ಕಬಡ್ಡಿ ಫೈನಲ್ ಪಂದ್ಯದಲ್ಲಿ ಮಹಿಳೆಯರ ವಿಭಾದಲ್ಲಿ ಕೆಎಸ್ ಪಿ ಹಾಗೂ ಪುರುಷರ ವಿಭಾದಲ್ಲಿ ವಿಜಯ ಬ್ಯಾಂಕ್ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ.

ನಗರದ ನೆಹರು ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಪುರುಷರ ಕಬಡ್ಡಿ ಫೈನಲ್ ಪಂದ್ಯದಲ್ಲಿ ವಿಜಯ ಬ್ಯಾಂಕ್ ತಂಡ ಬಿಎಂಟಿಸಿಯನ್ನು 22-11 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಇದಕ್ಕೂ ಮೊದಲು ನಡೆದ ಬಿಎಂಟಿಸಿ ಮತ್ತು ಕೆಎಸ್ ಪಿ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಬಿಎಂಟಿಸಿ ತಂಡವು 34-27 ಪಾಯಿಂಟ್‌ಗಳಿಂದ ಕೆಎಸ್ ಪಿ ಎದುರು ಜಯಿಸಿ ಪೈನಲ್ ಪ್ರವೇಶಿಸಿತ್ತು.

Vijayabank and KSP teams wins state level olympics Kabaddi tournament

ಮತ್ತೊಂದೆಡೆ ಎಸ್‌ಬಿಎಂ ಹಾಗೂ ವಿಜಯ ಬ್ಯಾಂಕ್ ನಡುವೆ ನಡೆದ ಸೆಮೀಸ್ ನಲ್ಲಿ ವಿಜಯ ಬ್ಯಾಂಕ್ 36-24 ಪಾಯಿಂಟ್‌ಗಳಿಂದ ಗೆದ್ದು ಫೈನಲ್ ಲಗ್ಗೆ ಇಟ್ಟಿತು.

ನಂತರ ಪ್ರಶಸ್ತಿಗೆಗಾಗಿ ನಡೆದ ಕಾದಾಟದಲ್ಲಿ ಅಂತಿಮವಾಗಿ ವಿಜಯ ಬ್ಯಾಂಕ್ ಬಿಎಂಟಿಸಿ ಎದುರು 11 ಅಂಕಗಳೊಂದಿಗೆ ಗೆಲುವಿನ ನಗೆ ಬೀರಿತು. ಇನ್ನು ಬಿಎಂಟಿಸಿ ತಂಡ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಮಹಿಳೆಯರ ತಂಡ : ಕೆಎಸ್ ಪಿ ತಂಡ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಯಿತು. ಈ ತಂಡ ಫೈನಲ್‌ನಲ್ಲಿ ಬೆಂಗಳೂರಿನ ಜೆಕೆಸಿ ವಿರುದ್ಧ 29-10 ಪಾಯಿಂಟ್‌ಗಳಿಂದ ಜಯ ಪಡೆಯಿತು.

Vijayabank and KSP teams wins state level olympics Kabaddi tournament

ಇದಕ್ಕೂ ಮೊದಲು ನಡೆದ ಸೆಮಿ ಫೈನಲ್‌ನಲ್ಲಿ ಕೆಎಸ್ ಪಿ ತಂಡವು 36-14 ಅಂತರದಲ್ಲಿ ಬೆಂಗಳೂರಿನ ಕೇಶವ ತಂಡವನ್ನ ಸೋಲಿಸಿತು. ಜೆಕೆಸಿಯು 28-18ರಲ್ಲಿ ಬೆಳಗಾವಿ ವಿರುದ್ಧ ಜಯಿಸು ಪ್ರಶಸ್ತಿ ಸುತ್ತು ತಲುಪಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijayabank gents kabaddi team and KSP womens team wins state level olympics Kabaddi tournament at Hubballi on February 07.
Please Wait while comments are loading...