ಹಬ್ಬದ ವಿಶೇಷ, ಪ್ಯಾಸೆಂಜರ್ ರೈಲುಗಳು ಜೂನ್ ತನಕ ವಿಸ್ತರಣೆ
ಹುಬ್ಬಳ್ಳಿ, ಮಾರ್ಚ್ 22: ನೈಋತ್ಯ ರೈಲ್ವೆ ಸದ್ಯ ಸಂಚಾರ ನಡೆಸುತ್ತಿರುವ ಹಬ್ಬದ ವಿಶೇಷ ರೈಲು ಮತ್ತು ಪ್ಯಾಸೆಂಜರ್ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ವಿಸ್ತರಣೆ ಮಾಡಿದೆ. ಮಾರ್ಚ್ ಅಂತ್ಯಕ್ಕೆ ರೈಲುಗಳ ಸಂಚಾರ ಕೊನೆಗೊಳ್ಳಬೇಕಿತ್ತು.
ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ರೈಲು ಮತ್ತು ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಜೂನ್ ತನಕ ವಿಸ್ತರಣೆ ಮಾಡಲಾಗಿದೆ. ಯಾವ-ಯಾವ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಮಾರ್ಚ್ 31 ರಿಂದ ಜೂನ್ 30ರ ತನಕ ಸಂಚಾರ ನಡೆಸಲಿದೆ. ಹುಬ್ಬಳ್ಳಿ-ವಾರಣಾಸಿ ರೈಲು ಮಾರ್ಚ್ 26ರಿಂದ ಜೂನ್ 25ರ ತನಕ ಸಂಚಾರ ನಡೆಸಲಿದೆ. ಹುಬ್ಬಳ್ಳಿ-ದಾದರ್ ರೈಲು ಸೇವೆಯನ್ನು ಮಾರ್ಚ್ 31ರಿಂದ ಜೂನ್ 30ರ ತನಕ ವಿಸ್ತರಣೆ ಮಾಡಲಾಗಿದೆ.

ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲು ಮಾರ್ಚ್ 30ರಿಂದ ಜೂನ್ 30ರ ತನಕ ಓಡಲಿದೆ. ಮೈಸೂರು-ಬಾಗಲಕೋಟೆ ರೈಲು ಮಾರ್ಚ್ 30ರಿಂದ ಜೂನ್ 30ರ ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾರ್ಚ್ 30ರಿಂದ ಜೂನ್ 30ರ ತನಕ ಯಶವಂತಪುರ-ಹೊಸಪೇಟೆ ರೈಲು ಓಡಲಿದೆ. ಹುಬ್ಬಳ್ಳಿ-ಬಳ್ಳಾರಿ ರೈಲು ಮಾರ್ಚ್ 31 ರಿಂದ ಜೂನ್ 30ರ ತನಕ ಸಂಚಾರ ನಡೆಸಲಿದೆ. ಹುಬ್ಬಳ್ಳಿ-ಸೊಲ್ಹಾಪುರ ರೈಲು ಮಾರ್ಚ್ 30 ರಿಂದ ಜೂನ್ 30ರ ತನಕ ಸಂಚಾರ ನಡೆಸಲಿದೆ.
ಧಾರವಾಡ-ಕೆಎಸ್ಆರ್ ಬೆಂಗಳೂರು ರೈಲು ಏಪ್ರಿಲ್ 1 ರಿಂದ ಜುಲೈ 1ರ ತನಕ ಸಂಚರಿಸಲಿದೆ. ಬಾಗಲಕೋಟೆ-ಮೈಸೂರು, ಹೊಸಪೇಟೆ-ಯಶವಂತಪುರ, ಧಾರವಾಡ-ಮೈಸೂರು ರೈಲು ಮಾರ್ಚ್ 31ರಿಂದ ಜುಲೈ 1ರ ತನಕ ಸಂಚಾರ ನಡೆಸಲಿವೆ.












Click it and Unblock the Notifications