Vande Bharat: ಬೆಂಗಳೂರು-ಬೆಳಗಾವಿವರೆಗೆ ಮತ್ತೊಂದು 'ವಿಬಿ' ರೈಲು? ಹಾಲಿ ರೈಲು ಬೆಳಗಾವಿ ವಿಸ್ತರಣೆಗಿರುವ ತೊಡಕೇನು?
ಹುಬ್ಬಳ್ಳಿ, ಜುಲೈ 05: ಅತ್ಯಂತ ಕಡಿಮೆ ಅವಧಿಯಲ್ಲಿಯೇ ಭಾರೀ ಜನಪ್ರಿಯವಾದ ಬೆಂಗಳೂರು-ಧಾರಾವಾಡ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿವರೆಗೆ ವಿಸ್ತರಿಸಬೇಕು ಎಂಬ ಕೂಗಿ ಕೇಳಿ ಮತ್ತೆ ಜೋರಾಗಿದೆ. ಹಾಲಿ ರೈಲನ್ನೇ ವಿಸ್ತರಣೆ ಮಾಡಬೇಕೋ ಅಥವಾ ಬೆಂಗಳೂರು-ಬೆಳಗಾವಿ ಮಧ್ಯೆ ಪ್ರತ್ಯೇಕ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕೋ ಎಂಬ ವಿಷಯದಲ್ಲಿ ಹಗ್ಗಜಗ್ಗಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು-ಧಾರವಾಡದ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡಾಗಿನಿಂದ ಈ ರೈಲು ಸಂಚಾರವನ್ನು ಬೆಳಗಾವಿ ವಿಸ್ತರಿಸಬೇಕೆಂಬ ಸಾಮಾನ್ಯ ಬೇಡಿಕೆಯ ಜನಪ್ರತಿನಿಧಿಗಳು ಹಾಗೂ ಜನರಿಂದ ಕೇಳಿ ಬರುತ್ತಿದೆ. ಆದರೆ, ಈ ರೈಲು ಸಂಚಾರವನ್ನು ವಿಸ್ತರಿಸಿದರೆ 'ಹುಬ್ಬಳ್ಳಿ-ಧಾರವಾಡ'ದ ಜನರಿಗೆ ತೊಂದರೆ ಆಗಲಿದೆಯೇ ಅಂತಲೂ ಯೋಚಿಸಲಾಗುತ್ತಿದೆ.

ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ಅಥವಾ ಮತ್ತೊಂದು ರೈಲು ಓಡಿಸುವ ಕುರಿತು ಚರ್ಚಿಸಲು ಜನಪ್ರತಿನಿಧಿಗಳು ಹಾಗೂ ನೈಋತ್ಯ ಅಧಿಕಾರಿಗಳ ನಡುವೆ ಹಲವು ಸುತ್ತಿನ ಸಭೆಗಳು ನಡೆದಿವೆ.
ಸದ್ಯದ ಸಂಚಾರ ಸಮಸ್ಯ ಹೇಗಿದೆ?
ಈ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರ ಇದುವರೆಗೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ವಂದೇ ಭಾರತ್ ರೈಲು ಬೆಳಗಾವಿಯವರೆಗೆ ಪ್ರಾಯೋಗಿಕ ಸಂಚಾರವನ್ನೂ ನಡೆಸುತ್ತಿದೆ. ಆದರೆ, ಒಂದೇ ಭಾಗದಲ್ಲಿ ಎರಡು ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು-ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸುವ ಈ ರೈಲು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು, 11.30ಕ್ಕೆ ಧಾರವಾಡ ತಲುಪುತ್ತದೆ. ಮರಳಿ ಧಾರವಾಡದಿಂದ ಮಧ್ಯಾಹ್ನ 1.20ಕ್ಕೆ ಹೊರಟು, ಸಂಜೆ 7.30ಕ್ಕೆ ಬೆಂಗಳೂರು ತಲುಪುತ್ತದೆ.
ಬೆಳಗಾವಿಗೆ ವಿಸ್ತರಿಸಿದ ಆಗುವ ತೊಂದರೆಗಳು ಏನು?
ಒಂದು ವೇಳೆ ಈ ರೈಲನ್ನು ಬೆಳಗಾವಿವರೆಗೆ ವಿಸ್ತರಿಣೆ ಮಾಡಿದರ, ಧಾರವಾಡದಿಂದ ಬೆಳಗಾವಿಯವರೆಗೆ ಹೋಗಿಬರಲು ಕನಿಷ್ಠ 4 ತಾಸುಗಳಾದರೂ ಬೇಕು. ಧಾರವಾಡದಿಂದ ಬೆಳಗಾವಿ ತಲುಪಲು ಈ ರೈಲಿಗೆ 1 ತಾಸು 45 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಬೆಳಗಾವಿ ನಿಲ್ದಾಣದಲ್ಲಿ ರೈಲು ನಿರ್ವಹಣೆ ಇನ್ನಿತರ ಕಾರ್ಯಗಳಿಗೆ ಕನಿಷ್ಠ ಅರ್ಧ ಗಂಟೆ ಬೇಕಾಗಬಹುದು.
ನೈಋತ್ಯ ಅಧಿಕಾರಿಗಳ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮಧ್ಯಾಹ್ನ 1.30ಕ್ಕೆವಂದೇ ಭಾರತ್ ರೈಲು ಬೆಳಗಾವಿಯಿಂದ ಹೊರಟರೆ, ಧಾರವಾಡಕ್ಕೆ 3 ಗಂಟೆಗೆ ತಲುಪಿ, ಬೆಂಗಳೂರಿಗೆ ರಾತ್ರಿ 9 ಗಂಟೆಗೆ ತಲುಪುತ್ತದೆ.
KSR ನಲ್ಲಿ ಪ್ಲಾಟ್‌ಫಾರ್ಮ್ ಸಮಸ್ಯೆ
ಬೆಂಗಳೂರಿಗೆ ರಾತ್ರಿ 9 ಕ್ಕೆ 'ವಿಬಿ' ತಲುಪಿದರೆ ಆ ಸಮಯದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಬೆಂಗಳೂರಿನಲ್ಲಿ ಪ್ಲಾಟ್‌ಫಾರ್ಮ್ ಹೊಂದಿಸುವುದು ಕಷ್ಟಸಾಧ್ಯ. ಅಂದಾಜು ರಾತ್ರಿ 11 ಗಂಟೆಯವರೆಗೆ ಪ್ಲಾಟ್‌ಫಾರ್ಮ್‌ಗಳು ಬೇರೆ ರೈಲುಗಳು ನಿಲುಗಡೆ ನಿಗದಿಯಾಗುವುದಿಲ್ಲ ವಂದೇ ಭಾರತ್ ರೈಲಿಗೆ ರಾತ್ರಿ 11 ಗಂಟೆಯ ನಂತರವೇ ಪ್ಲಾಟ್‌ಫಾರ್ಮ್ ದೊರಕಿಸಿಕೊಡಬೇಕಾಗಬಹುದು ಎಂದು ಅವಲೋಕಿಸಿದ್ದಾರೆ.
ಈ ಎರಡು ತಾಸಿನ ಅವಧಿಯವರೆಗೆ ಪ್ರಯಾಣಿಕರನ್ನು ರೈಲಿನಲ್ಲಿ ಕಾಯಿಸುವುದು ಅಸಾಧ್ಯ. ಇದರಿಂದ ಹುಬ್ಬಳ್ಳಿ-ಧಾರವಾಡ ಪ್ರಯಾಣಿಕರಿಗೂ ತೊಂದರೆ ತಪ್ಪಿದ್ದಲ್ಲ ಎಂಬ ಅಭಿಪ್ರಾಯವೂ ಉಂಟು. ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಹೊಂದಾಣಿಕೆ ರೈಲು ಸಂಚಾರ ಉತ್ತಮ
ವಂದೇ ಭಾರತ ರೈಲನ್ನು ಬೆಂಗಳೂರು-ಬೆಳಗಾವಿ ಮಧ್ಯೆ ಓಡಿಸಿದರೆ ಬೆಳಗಿನಜಾವ 5 ಗಂಟೆಗೆ ಬೆಳಗಾವಿಯಿಂದ ಸಂಚಾರ ಆರಂಭವಾಗಿದೆ. ಆಗ ಈ ರೈಲು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪುತ್ತದೆ. ಮರಳಿ 1.30ಕ್ಕೆ ಬೆಂಗಳೂರಿನಿಂದ ಹೊರಟರೆ, ರಾತ್ರಿ 11 ಗಂಟೆಗೆ ಬೆಳಗಾವಿ ತಲುಪುತ್ತದೆ.
ಒಂದೇ ಮಾರ್ಗದಲ್ಲಿ ಎರಡು ವಂದೇ ಭಾರತ್ ರೈಲು ಸಂಚರಿಸುವಷ್ಟು ಪ್ರಯಾಣಿಕರು ಈ ಭಾಗದಲ್ಲಿಲ್ಲ. ಹೀಗಾಗಿ, ರೈಲಿನ ಸಮಯ ಹೊಂದಾಣಿಕೆ ಮೂಲಕ ಚಾಲನೆ ಮಾಡುವುದು ಒಳಿತೆಂಬ ಸಲಹೆಗಳು ಸಹ ಕೇಳಿ ಬರುತ್ತಿವೆ.
ಈ ಕುರಿತು ನೈಋತ್ಯ ರೈಲ್ವೆ ಅಧಿಕಾರಿಗಳು ಸೂಕ್ತ ತೀರ್ಮಾನ ಬಂದ ಬಳಿಕವೇ ಸಾರ್ವಜನಿಕರ ಮನವಿಗೆ ಪರಿಹಾರ ಸಿಗುವ ವಿಶ್ವಾಸ ಇದೆ.












Click it and Unblock the Notifications