ಕಾಂಗ್ರೆಸ್ ನಿಂದ ಬಿಜೆಪಿ ಧ್ಯೇಯ ವಾಕ್ಯ ಬಳಕೆ: ಶೆಟ್ಟರ್ ಆರೋಪ
ಹುಬ್ಬಳ್ಳಿ, ಡಿಸೆಂಬರ್ 16 : ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಎಂಬುದು ಬಿಜೆಪಿಯ ಧ್ಯೇಯ ವಾಕ್ಯವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನೇ ಕದ್ದು ನವ ಕರ್ನಾಟಕ ನಿರ್ಮಾಣ ಯಾತ್ರೆ ಕೈಗೊಂಡಿದ್ದಾರೆ ಎಂದು ವಿಧಾನ ಸಭೆ ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು.
ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಬಿಜೆಪಿ ಸ್ಲೋಗನ್ ಆಗಿದ್ದು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಚ ಬಿ.ಎಸ್. ಯಡೀಯೂರಪ್ಪ ಯಾತ್ರೆ ಆರಂಭಿಸಿದ್ದಾರೆ. ಈ ಘೋಷ ವಾಖ್ಯವನ್ನು ಕದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವ ಕರ್ನಾಟಕ ನಿರ್ಮಾಣಕ್ಕಾಗಿ ಯಾತ್ರೆ ಆರಂಭಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಇದೊಂದು ಬೋಗಸ್ ಯಾತ್ರೆ ಎಂದು ಟೀಕಿಸಿದರು.

ನಮ್ಮ ಯಾತ್ರೆ, ಬಳಿಕ ವಿಚಲಿತರಾಗಿ ಸಿಎಂ ಯಾತ್ರೆ ಕೈಗೊಂಡಿದ್ದಾರೆ, ಈಗ ನವ ಕರ್ನಾಟಕ ನಿರ್ಮಾಣ ಮಾಡುವುದಾದರೆ ನಾಲ್ಕುವರೆ ವರ್ಷ ಮಾಡಿದ್ದು ಏನು, ನಮ್ಮ ಅವಧಿಯಲ್ಲಿ ನೀಡಿದ ಅನುಧಾನದ ಕಾರ್ಯಕ್ರಮ ಉದ್ಘಾಟಿಸಲು ಈಗ ಬರುತ್ತಿದ್ದಾರೆ. ಪಾಲಿಕೆ ನಿವೃತ್ತ ನೌಕರ ಪಿಂಚಣಿ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರ ಖಜಾನೆ ದಿವಾಳಿಯಾಗಿದೆ.
ಮುಖ್ಯಮಂತ್ರಿ ಜಿಲ್ಲೆಗೆ ಬರುವ ತಿಳಿದು ಅರೆ ಬರೆ ಕಾಮಗಾರಿ ಮಾಡಲಾಗುತ್ತಿದೆ. ಹುಬ್ಬಳ್ಳಿ- ಧಾರವಾಡ ಕುಡಿಯವ ನೀರಿನ ಸಮಸ್ಯೆ ಪರಿಹರಿಸುವ ಯೋಜನೆಗೆ 24 ಕೋಟಿ ಹಣ ನೀಡಲು ಗತಿ ಇಲ್ಲ. ಬೆಳೆ ವಿಮೆ ಹಣ ಬಿಡುಗಡೆ ಮಾಡದೆ ರೈತರಿಗೆ ಮೋಸ ಮಾಡುತ್ತಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಬಿಡುಗಡೆ ಮಾಡಿದ ಹಣ ಬಗ್ಗೆ ಶ್ವೇತ ಪತ್ರ ಹೊರಡಿಸಿ ಎಂದು ಒತ್ತಾಯಿಸಿದರು.












Click it and Unblock the Notifications