NWKRTC Bus: ಉಳವಿ ಚನ್ನಬಸವೇಶ್ವರ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ, ವೇಳಾಪಟ್ಟಿ

ಹುಬ್ಬಳ್ಳಿ, ಫೆಬ್ರವರಿ 08: ಉತ್ತರ ಕರ್ನಾಟಕ ಭಾಗದ ಸಾಕಷ್ಟು ಜನರು ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ಪ್ರತಿ ವರ್ಷದಂತೆ ಈ ವರ್ಷವು ತೆರಳಲಿದ್ದಾರೆ. ಇಲ್ಲಿ ಅದ್ಧೂರಿ ಜಾತ್ರೆಗೆ ದೇವಸ್ಥಾನದ ಅಡಳಿತ ಮಂಡಳಿ ಸಜ್ಜಾಗಿದೆ. ಸಹಸ್ರಾರು ಭಕ್ತರು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಲಿದ್ದಾರೆ. ಈ ಕಾರಣದಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿದೆ. ಪ್ರಯಾಣಿಕರು ಸೇರಿದಂತೆ ಭಕ್ತರ ಸಂಚಾರಕ್ಕೆ ಅನುಕೂಲ ಒದಗಿಸಲು ಈ ಸೇವೆ ಆರಂಭಿಸಿದೆ.

ಉಳವಿ ಶ್ರೀ ಚನ್ನಬಸವೇಶ್ವರ ಭಕ್ತರು ಮತ್ತು ಜರನ ಅನುಕೂಲಕ್ಕಾಗಿ ಇದೇ ಫೆಬ್ರವರಿ 11 ರಿಂದ 16 ರವರೆಗೆ ಉಳವಿಗೆ ಜಾತ್ರೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಈ ಆಯ್ದ ದಿನಗಳಲ್ಲಿ ನಿತ್ಯ ಹುಬ್ಬಳ್ಳಿಯಿಂದ ಉಳವಿಗೆ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ ಎಮದು NWKRTC ಹುಬ್ಬಳ್ಳಿ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದರು.

NWKRTC Special Buses for Ulavi Channabasaveshwara Jatra From Hubballi

ಉತ್ತರ ಕನ್ನಡ ಜಿಲ್ಲೆಯ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರೆಯು ಫೆಬ್ರವರಿ 11ರಿಂದ 16ರವರೆಗೆ ವೈಭವದಿಂದ ಜರುಗಲಿದೆ. ಫೆ. 13ರಂದು ಗುರುವಾರ ರಥೋತ್ಸವ ನಡೆಯಲಿದ್ದು, ಅಂದು ಅಸಂಖ್ಯಾತ ಜನರು ಆಗಮಿಸುವ ಸಾಧ್ಯತೆ ಇದೆ. ಮೂರು ನಾಲ್ಕು ದಿನ ಅದ್ಧೂರಿ ಜಾತ್ರ ಜರುಗಲಿದೆ. ಈ ಜಾತ್ರೆಗೆ ಹುಬ್ಬಳ್ಳಿ-ಧಾರವಾಡ ಅವಳಿನಗರ ಹಾಗೂ ಸುತ್ತಮುತ್ತಲಿನ ಊರುಗಳು, ಅಕ್ಕ ಪಕ್ಕದ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ.

ರಥೋತ್ಸವದ ಮುನ್ನಾ ದಿನಗಳಿಂದ ಆರಂಭವಾಗಿ ನಂತರದ ದಿನಗಳಂದು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳ ಪ್ರಯಾಣ ನಿರೀಕ್ಷಿಸಲಾಗಿದೆ. ಉಳವಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಬೇಡಿಕೆಯ ಮೇರೆಗೆ ಭಕ್ತಾದಿಗಳು ಜಾತ್ರೆಗೆ ಸುಗಮವಾಗಿ ಹೋಗಿ ಬರಲು ಅನುಕೂಲವಾಗುವಂತೆ ಫೆ.11 ರಿಂದ ಒಟ್ಟು ಆರು ದಿನಗಳ ಕಾಲ ಹುಬ್ಬಳ್ಳಿಯಿಂದ ಉಳವಿಗೆ ನೇರವಾಗಿ ಜಾತ್ರೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಪ್ರಯಾಣ

ಈ ಜಾತ್ರೆಯ ವಿಶೇಷ ಬಸ್ಸುಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸುತ್ತವೆ. ಹುಬ್ಬಳ್ಳಿಯಿಂದ ಧಾರವಾಡ, ಹಳಿಯಾಳ, ದಾಂಡೇಲಿ ಮಾರ್ಗವಾಗಿ ಆರು ದಿನಗಳ ಕಾಲ ಸಂಚರಿಸಲಿವೆ ಎಂದು ಅವರು ವಿವರಿಸಿದರು.

ಘಟಕದಿಂದ ಒಟ್ಟು 42 ಬಸ್ ಗಳು, 90 ಚಾಲಕರು- ನಿರ್ವಾಹಕರು, ಮೇಲ್ವಿಚಾರಣೆಗಾಗಿ 6 ಅಧಿಕಾರಿಗಳು ಹಾಗೂ 14 ಸಿಬ್ಬಂದಿಗಳನ್ನು ನಿಯೋಜಿಲಾಗಿದೆ. ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುವುದು. ಹೆಚ್ಚಿನ‌ ಮಾಹಿತಿಗೆ 77609 91682 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕಾರಿ ರಾಮನಗೌಡರ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+