ಗಿರ್ಮಿಟ್ ಸವಿದು ಏಕಾಏಕಿ ಸುರಿದ ಮಳೆಗೆ ಧನ್ಯವಾದ ತಿಳಿಸಿದ ಸಚಿವ ಸಂತೋಷ್‌ ಲಾಡ್‌

ಹುಬ್ಬಳ್ಳಿ, ನವೆಂಬರ್‌ 06: ಸಚಿವ ಸಂತೋಷ ಲಾಡ್ ಇಂದು ಧಾರವಾಡ ಜಿಲ್ಲೆಯಲ್ಲಿ ಬರ ಪರಿಶೀಲನೆಗೆ ಆಗಮಿಸಿದ್ದಾರೆ. ಬರ ಪರಿಶೀಲನೆ ತಂಡ ಹುಬ್ಬಳ್ಳಿಯ ಕುಸುಗಲ್ ಗ್ರಾಮಕ್ಕೆ ಬರುತ್ತಿದ್ದಂತೆ ಏಕಾಏಕಿ ಧಾರಾಕಾರ ಮಳೆಯಾಗಿದೆ. ಮಳೆಗೆ ಸಂತಸ ವ್ಯಕ್ತಪಡಿಸಿದ ಸಂತೋಷ ಲಾಡ್ ಇನ್ನು ಎರಡುಮೂರು ದಿನ ಮಳೆ ಹೀಗೆ ಇರಲಿ ಎಂದಿದ್ದಾರೆ.

ಮಳೆಯಿಂದ ಬರ ಪರಿಶೀಲನೆ ಮೊಟಕುಗೊಂಡ ಕಾರಣ ಗ್ರಾಮ ಪಂಚಾಯತಿಯಲ್ಲಿ ಸಮಯ ಕಳೆದ ಸಚಿವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದಾರೆ. ಈ ವೇಳೆ ಕುಸುಗಲ್ ಗ್ರಾಮದ ವಿಶೇಷ ಗಿರ್ಮಿಟ್ ಸವಿದಿದ್ದಾರೆ. ಶಾಸಕ ಎನ್‌.ಎಚ್.ಕೋನರೆಡ್ಡಿ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಕೂಡ ಗಿರ್ಮಿಟ್ ಸವಿಯುತ್ತಾ ಕುಸುಗಲ್ ಗ್ರಾಮದ ರೈತರ ಅಹವಾಲು ಸ್ವೀಕರಿಸಿದ್ದಾರೆ.

Minister Santosh Lad Tasted Kusugal Village Girmit

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಸಂತೋಷ್‌ ಲಾಡ್‌ ವಾಗ್ದಾಳಿ

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್‌ ಲಾಡ್‌ ಸರ್ಕಾರ ಬಿಳಿಸುವ ಪ್ರವೃತ್ತಿ ಇರುವುದು ಬಿಜೆಪಿ ಅವರಿಗೆ. ಅಧಿಕಾರಕ್ಕಾಗಿ ಸರ್ಕಾರವನ್ನೇ ಬೀಳಿಸಿದವರು ಬಿಜೆಪಿಗರು. ನಮ್ಮಲ್ಲಿ ಯಾವುದೇ ಕಿತ್ತಾಟವಿಲ್ಲ. ಅಧಿಕಾರಕ್ಕಾಗಿ ಮಧ್ಯ ಪ್ರದೇಶ, ಗೋವಾ ಸರ್ಕಾರವನ್ನು ಬೀಳಿಸಿದರು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಬಗ್ಗೆ ಹೊರ ರಾಜ್ಯದಲ್ಲಿ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮೋದಿ ಸಾಹೇಬರು ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ. ಇವತ್ತು ಮಧ್ಯ ಪ್ರದೇಶಕ್ಕೆ ಹೋಗಿ ಕರ್ನಾಟಕದ ಬಗ್ಗೆ ಮಾತನಾಡ್ತಾರೆ. ಆದರೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಷ್ಟು ಹಣ ಕೊಟ್ಟಿದೆ..? ರಾಜ್ಯ ಸರ್ಕಾರ ಏನು ಮಾಡಿದೆ ಅಂತ ಅವರು ಯಾವತ್ತೂ ಹೇಳೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

Minister Santosh Lad Tasted Kusugal Village Girmit

ವ್ಯಾಪಮ್ ಸ್ಕೀಮ್ ದೊಡ್ಡ ಹಗರಣ ಪ್ರಪಂಚದಲ್ಲೇ ಪಿಕ್ಚರ್ ಮಾಡಬಹುದು. ಯಾರು ವಿಟ್ನೆಸ್ ಆಗಿದ್ರು ಮಧ್ಯಪ್ರದೇಶದಲ್ಲಿ 48 ಜನರಲ್ಲಿ 44 ಜನರು ಹತ್ಯೆ ಆಗಿದ್ದಾರೆ. 25 ಕೋಟಿ ರಸ್ತೆಯನ್ನು ಸುಮಾರು 250 ಕೋಟಿಗೆ ಒಂದು ಕಿ.ಮೀ ರಸ್ತೆ ಆಗಿದೆ ಅಂತ ರಿಪೋರ್ಟ್ ಅವರು ಕೊಟ್ಟಿದ್ದಾರೆ. ರಾಮ ಮಂದಿರದಲ್ಲೂ ಭ್ರಷ್ಟಾಚಾರ ಆಗಿದೆ ಅಂತ ವರದಿ ಕೊಟ್ಟಿದ್ದಾರೆ. ಇಂತಹ ಹಲವಾರು ವಿಷಯಗಳನ್ನು ಬಿಟ್ಟಿದ್ದಾರೆ. ನಮ್ಮ ಮೇಲೆ ಮಾತನಾಡೋದು ಎಷ್ಟು ಸರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+